'ಮಾಡು ಇಲ್ಲವೇ ಮಡಿ' ಸ್ಥಿತಿಯಲ್ಲಿದ್ದ ಜೆಡಿಎಸ್ ಗೆ ಅತಂತ್ರ ವಿಧಾನಸಭೆಯಿಂದ 'ಜೀವದಾನ'

ಕರ್ನಾಟಕದಲ್ಲಿ ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿದ್ದ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಅತಂತ್ರ ವಿಧಾನ ಸಭೆಯಿಂದಾಗಿ ಉಸಿರಾಡುವಂತಾಗಿದೆ. ..
ಕುಮಾರ ಸ್ವಾಮಿ ಮತ್ತು ದೇವೇಗೌಡ
ಕುಮಾರ ಸ್ವಾಮಿ ಮತ್ತು ದೇವೇಗೌಡ
ಬೆಂಗಳೂರು: ಕರ್ನಾಟಕದಲ್ಲಿ ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿದ್ದ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಅತಂತ್ರ ವಿಧಾನ ಸಭೆಯಿಂದಾಗಿ ಉಸಿರಾಡುವಂತಾಗಿದೆ. 
ದಶಕದಿಂದ ಅಧಿಕಾರಕ್ಕೆ ಹಪಹಪಿಸುತ್ತಿದ್ದ ಜೆಡಿಎಸ್ ರಾಜ್ಯದಲ್ಲಿ ಪಕ್ಷವನ್ನು ಬದುಕುಳಿಸಲು ಅಕ್ಷರಶಃ ಹೋರಾಟ ನಡೆಸಿತ್ತು. ತನ್ನ ಬೆಂಬಲವಿಲ್ಲದೇ ಯಾವುದೇ ರಾಷ್ಟ್ರೀಯ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅಳಿವಿನಂಚಿನಲ್ಲಿದ್ದ ಜೆಡಿಎಸ್ ಕೆಲ ಮುಖಂಡರು ಚುನಾವಣೆ ವೇಳೆಯ ನಿರ್ಣಾಯಕ ಸಮಯದಲ್ಲಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದರು.ಈ ವೇಳೆ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹರ ಸಾಹಸಬೇಕಾಯಿತು ಅಗತ್ಯವಾದ ಸಂಪನ್ಮೂಲ ಇರಲಿಲ್ಲ, ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಪಕ್ಷದ ಶಾಸಕರನ್ನು ಕೊಂಡುಕೊಳ್ಳುವ ಸಾಧ್ಯತೆಯಿತ್ತು, ಹೀಗಾಗಿ ತಾನು ಬದುಕುಳಿಯಲು ಜೆಡಿಎಸ್ ಸರ್ಕಾರದ ಒಂದು ಭಾಗವಾಗುವುದು ಅನಿವಾರ್ಯವಾಗಿತ್ತು. ಯಾವುದೇ ಅಧಿಕಾರವಿಲ್ಲದೇ ವಿರೋಧ ಪಕ್ಷದಲ್ಲಿ ಕೂರಲು ಪಕ್ಷದ ಶಾಸಕರಿಗೆ ಇಷ್ಟವಿರಲಿಲ್ಲ ಎಂದು ಜೆಡಿಎಸ್ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಹಳೇ ಮೈಸೂರು ಭಾಗದ ಒಕ್ಕಲಿಗ ಪ್ರಾಬಲ್ಯವಿರುವ ಆರು ಜಿಲ್ಲೆಗಳಿಗೆ ಮಾತ್ರ ಜೆಡಿಎಸ್ ಸೀಮಿತವಾಗಿತ್ತು, ಆದರೆ ಚುನವಾಣೆ ವೇಳೆ ಭಾವನಾತ್ಮಕ ಪ್ರಚಾರ ಹಾಗೂ ರೈತರ ಸಾಲ ಮನ್ನಾ ದಂತ ಭರವಸೆಗಳು ಮತ್ತಷ್ಟು ಮತದಾರರನ್ನು ಒಲಿಸಿಕೊಳ್ಳಲು ಸಹಾಯವಾಗಿದೆ.
ಇನ್ನೂ ಚುನಾವಣಾ ಪ್ರಚಾರದ ವೇಳೆ ಕಣ್ಣೀರಿಟ್ಟಿದ್ದ ಕಮಾರ ಸ್ವಾಮಿ, ತಮ್ಮ ಆರೋಗ್ಯ ಕೈಕೊಟ್ಟಿದ್ದು, ಹೆಚ್ಚುದಿನ ಬದುಕುವುದಿಲ್ಲ ಎಂದು ಹೇಳಿದ್ದರು. ಎಚ್ ಡಿಕೆ ಅವರ ಈ ಟ್ರಿಕ್ ಮಂಡ್ಯ, ಮೈಸೂರು, ಹಾಸನ, ತುಮಕೂರು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜನರು ಜೆಡಿಎಸ್ ಗೆ ಮತ ನೀಡಲು ಸಹಾಯವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com