ಬಿಎಸ್ ವೈಗೆ ಬಹುಮತ ಸಾಬೀತಿಗೆ 15 ದಿನಗಳ ಸಮಯ: ರಾಜ್ಯಪಾಲರ ನಡೆ ಸರಿಯೇ?

ತೀವ್ರ ರಾಜಕೀಯ ನಾಟಕಗಳ ನಡುವೆ ರಾಜ್ಯಪಾಲ ವಜುಭಾಯಿ ವಾಲಾ ಭಾರತೀಯ ಜನತಾ ...
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯಪಾಲ ವಜುಭಾಯಿ ವಾಲಾ(ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯಪಾಲ ವಜುಭಾಯಿ ವಾಲಾ(ಸಂಗ್ರಹ ಚಿತ್ರ)

ಬೆಂಗಳೂರು; ತೀವ್ರ ರಾಜಕೀಯ ನಾಟಕಗಳ ನಡುವೆ ರಾಜ್ಯಪಾಲ ವಜುಭಾಯಿ ವಾಲಾ ಭಾರತೀಯ ಜನತಾ ಪಾರ್ಟಿಯ ಬಿ.ಎಸ್.ಯಡಿಯೂರಪ್ಪ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಿ ಮುಖ್ಯಮಂತ್ರಿಯಾಗಿ ಬಿಎಸ್ ವೈ ಅಧಿಕಾರ ಸ್ವೀಕರಿಸಿ ಆಗಿದೆ.

ರಾಜ್ಯಪಾಲರ ಈ ನಡೆಯ ಬಗ್ಗೆ ನಿನ್ನೆಯಿಂದ ಸಾರ್ವಜನಿಕ ವಲಯದಲ್ಲಿ ಹಲವು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಬಿಜೆಪಿಯನ್ನು ಸರ್ಕಾರ ರಚನೆ ಮಾಡಲು ಕರೆದ ರಾಜ್ಯಪಾಲರ ನಡೆ ಸರ್ಕಾರಿಯಾ ಆಯೋಗದ ಶಿಫಾರಸ್ಸಿನಂತೆ ಎಂದು ಹೇಳಲಾಗುತ್ತದೆ. ಈ ಆಯೋಗದ ಶಿಫಾರಸ್ಸಿನ ಪ್ರಕಾರ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆ ಗಳಿಸಿದ ಪಕ್ಷವನ್ನು ಸದನದಲ್ಲಿ ಬಹುಮತ ಸಾಬೀತುಪಡಿಸಲು ಕರೆಯಲಾಗುತ್ತದೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 30 ದಿನಗಳ ಒಳಗೆ ಅವರು ವಿಶ್ವಾಸಮತವನ್ನು ಸದನದಲ್ಲಿ ಸಾಬೀತುಪಡಿಸಬೇಕು ಎಂದು ಆಯೋಗದ ಶಿಫಾರಸ್ಸು ಹೇಳುತ್ತದೆ.

ಆದರೆ ರಾಜ್ಯಪಾಲರು ನಿಗದಿಪಡಿಸುವ ಸಮಯದಲ್ಲಿ ಇಂತಹದ್ದೇ ನಿಗದಿತ ವಿಧಾನವೆಂಬುದು ಇಲ್ಲ ಎಂದು ಈ ಹಿಂದಿನ ನಿದರ್ಶನಗಳು ಹೇಳುತ್ತದೆ. 1998ರಲ್ಲಿ ಕಾಂಗ್ರೆಸ್ ನಾಯಕ ಜಗದಾಂಬಿಕ ಪಾಲ್ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಮೂರು ದಿನಗಳ ಸಮಯವನ್ನು ಪಡೆದರು.2005ರಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ 19 ದಿನಗಳ ಕಾಲ ಬಹುಮತ ಸಾಬೀತುಪಡಿಸಲು ಸಮಯ ಪಡೆದರು.

2017ರಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರಿಗೆ ಸದನದಲ್ಲಿ ಬಹುಮತ ಸಾಬೀತಿಗೆ 15 ದಿನಗಳ ಕಾಲಾವಕಾಶ ಸಿಕ್ಕಿತು. ಆದರೆ ಕಾಂಗ್ರೆಸ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರಿಂದ 2 ದಿನಗಳೊಳಗೆ ಸಾಬೀತುಪಡಿಸಬೇಕಾಗಿ ಬಂತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com