ಕಾಂಗ್ರೆಸ್ ಪಾಲಿನ ಸಾರ್ವಕಾಲಿಕ 'ಆಪ್ತರಕ್ಷಕ'-ಡಿ ಕೆ ಶಿವಕುಮಾರ್

ಪಕ್ಷದೊಳಗೆ ಯಾವುದೇ ರೀತಿಯ ಬಿಕ್ಕಟ್ಟು ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಬಲ್ಲ, ಪಕ್ಷದ ...
ವಿಶ್ವಾಸಮತ ಯಾಚನೆಗೆ ಮುನ್ನ ವಿಧಾನಸೌಧದ ಹೊರಗೆ ಕಾಯುತ್ತಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್
ವಿಶ್ವಾಸಮತ ಯಾಚನೆಗೆ ಮುನ್ನ ವಿಧಾನಸೌಧದ ಹೊರಗೆ ಕಾಯುತ್ತಿರುವ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್

ಬೆಂಗಳೂರು: ಪಕ್ಷದೊಳಗೆ ಯಾವುದೇ ರೀತಿಯ ಬಿಕ್ಕಟ್ಟು ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಬಲ್ಲ, ಪಕ್ಷದ ನಾಯಕರು ಅವಲಂಬಿಸಬಹುದಾದ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಎಂಬುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬಿಜೆಪಿಯನ್ನು ಮಣಿಸಲು ಹಲವು ಹಿರಿಯ ಕಾಂಗ್ರೆಸ್ ನಾಯಕರು ನೇರವಾಗಿ ಭಾಗಿಯಾದರೂ ಕೂಡ ಬಿಜೆಪಿ ನಾಯಕರಿಗೆ ಶಾಸಕರು ಸಂಪರ್ಕಕ್ಕೆ ಸಿಗದಂತೆ ಮಾಡುವಲ್ಲಿ ಪರಿಶ್ರಮ ಹಾಕಿದವರು ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರ ತಂಡ.

ಕಳೆದ ಮೂರ್ನಾಲ್ಕು ದಿನಗಳ ಬೆಳವಣಿಗೆ ಬಗ್ಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಣೆಗೆ ಎರಡು ದಿನ ಮೊದಲು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ದೇವೇಗೌಡರ ಜೊತೆಗೆ ಮಾತುಕತೆ ನಡೆಸಿ ಸಮ್ಮಿಶ್ರ ಸರ್ಕಾರ ರಚನೆ ಸಾಧ್ಯತೆ ಬಗ್ಗೆ ಮಾತುಕತೆ ನಡೆಸಿದ್ದರು.

ಈ ನಿರ್ಧಾರವನ್ನು ಮೇ 15ರಂದು  ಫಲಿತಾಂಶದ ದಿನ ಘೋಷಿಸಿ ಪಕ್ಷದ ವಿವಿಧ ಮುಖಂಡರಿಗೆ ವಿವಿಧ ಕೆಲಸಗಳನ್ನು ನಿಯೋಜಿಸಲಾಯಿತು. ಶಿವಕುಮಾರ್ ಅವರಿಗೆ ಶಾಸಕರನ್ನು ಪಕ್ಷ ತೊರೆದು ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಯಿತು, ಈ ಸಂದರ್ಭದಲ್ಲಿ ಎಲ್ಲಕ್ಕಿಂತ ಮುಖ್ಯ ಶಾಸಕರನ್ನು ನೋಡಿಕೊಳ್ಳುವುದಾಗಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕರು ಹೇಳುತ್ತಾರೆ.

2017ರಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕರನ್ನು ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕದ ರೆಸಾರ್ಟ್ ನಲ್ಲಿ ಇರುವಂತೆ ಮಾಡಿದ್ದು ಡಿ.ಕೆ.ಶಿವಕುಮಾರ್. ಶಾಸಕರು ರೆಸಾರ್ಟ್ ನಲ್ಲಿ ತಂಗಿದ್ದ ವೇಳೆ ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಲಾಗಿತ್ತು. ರಾಜ್ಯಸಭಾ ಚುನಾವಣೆಯಲ್ಲಿ ಗುಜರಾತ್ ನಲ್ಲಿ ಕಾಂಗ್ರೆಸ್ ಗೆದ್ದಿತು. ಇದಕ್ಕೆ ಉಡುಗೊರೆಯಾಗಿ ಕಾಂಗ್ರೆಸ್ ಹೈಕಮಾಂಡ್ ವಿಧಾನಸಬೆ ಚುನಾವಣೆಗೆ ಮುನ್ನ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರು.

ಈ ಬಾರಿ ಕೂಡ ಡಿಕೆ ಶಿವಕುಮಾರ್, ಶಾಸಕರನ್ನು ಬಿಡದಿಯ ರೆಸಾರ್ಟ್ ಗೆ ಕರೆದುಕೊಂಡು ಹೋಗುವಲ್ಲಿಯಿಂದ ಹಿಡಿದು ಹೈದರಾಬಾದ್ ಹೊಟೇಲ್ ಗೆ ಕರೆದುಕೊಂಡು ಹೋಗಿ ಅಲ್ಲಿಂದ ವಾಪಸ್ ಶಾಸಕರನ್ನು ವಿಶ್ವಾಸಮತ ದಿನ ಬೆಂಗಳೂರಿಗೆ ಕರೆತರುವ ಉಸ್ತುವಾರಿ ನೋಡಿಕೊಂಡಿದ್ದರು. ಅವರಿಗೆ ಸಹಾಯ ಮಾಡುವ ಬೆಂಬಲಿಗರು ಅವರ ಬಳಿಯೇ ಇದ್ದಾರೆ ಎನ್ನುತ್ತಾರೆ ಕಾಂಗ್ರೆಸ್ ನಾಯಕರು.

ಬಿಜೆಪಿ ತೆಕ್ಕೆಗೆ ಹೋಗುವುದರಲ್ಲಿದ್ದ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರನ್ನು ಮತ್ತೆ ಕರೆತರುವಲ್ಲಿ ಯಶಸ್ವಿಯಾದರು.

ಈ ಬಾರಿ ಸರ್ಕಾರ ರಚಿಸಲು ಜೆಡಿಎಸ್ ಗೆ ಬೆಂಬಲ ನೀಡಬೇಕೆಂದು ರಾಹುಲ್ ಗಾಂಧಿ ತೀರ್ಮಾನ ತೆಗೆದುಕೊಂಡಿದ್ದು, ಅದಕ್ಕೆ ಕಾರ್ಯತಂತ್ರ ರೂಪಿಸಿದ್ದು ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತು ಡಾ.ಜಿ.ಪರಮೇಶ್ವರ್ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com