ವಿಧಾನ ಪರಿಷತ್ ಚುನಾವಣೆ: ಹೆಚ್ಚುತ್ತಿರುವ ಆಕಾಂಕ್ಷಿಗಳ ಪಟ್ಟಿ

17 ರಂದು 11 ಪರಿಷತ್ ಸದಸ್ಯರ ಅಧಿಕಾರವಧಿ ಪೂರ್ಣಗೊಳ್ಳಲಿದೆ.ಬಿಜೆಪಿಯ ಬಿ.ಜೆ ಪುಟ್ಟಸ್ವಾಮಿ, ಡಿ.ಎಸ್ ವೀರಯ್ಯ, ಸೋಮಣ್ಣ ಬೇವಿನಮರದ್, ...
ನಿವೇದಿತ್ ಆಳ್ವಾ, ಕೆ,ಪಿ ನಂಜುಂಡಿ ಮತ್ತು ವಿ.ಆರ್ ಸುದರ್ಶನ್ (ಸಂಗ್ರಹ ಚಿತ್ರ)
ನಿವೇದಿತ್ ಆಳ್ವಾ, ಕೆ,ಪಿ ನಂಜುಂಡಿ ಮತ್ತು ವಿ.ಆರ್ ಸುದರ್ಶನ್ (ಸಂಗ್ರಹ ಚಿತ್ರ)
ಬೆಂಗಳೂರು: ಹೊಸದಾಗಿ ರಚನೆಯಾಗಿರುವ ಕಾಂಗ್ರೆಸ್- ಜೆಡಿಎಸ್ ಸರ್ಕಾರದ ಶಾಸಕರು ಮಂತ್ರಿಗಿರಿಗಾಗಿ ಲಾಬಿ ನಡೆಸುತ್ತಿದ್ದಾರೆ, ಇದರ ಜೊತೆಗೆ ಜೂನ್ 11 ರಂದು ನಡೆಯುವ ಉಪ ಚುನಾವಣೆ ಜೊತೆಗೆ ಜೂನ್ 8 ರಂದು  ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ.
ಪ್ರಸ್ತುತ ಬಿಜೆಪಿ 104 ಶಾಸಕರನ್ನು, ಕಾಂಗ್ರೆಸ್ 78 ಹಾಗೂ ಜೆಡಿಎಸ್ 37 ಮತ್ತು ಕೆಪಿಜೆಪಿ ಹಾಗೂ ಬಿಎಸ್ ಪಿ ತಲಾ ಒಬ್ಬೊಬ್ಬ ಶಾಸಕರನ್ನು ಹೊಂದಿದೆ, ಜೆಡಿಎಸ್ ಗೆ ಬಿಎಸ್ ಪಿ ಶಾಸಕನ  ಬೆಂಬಲವಿದೆ. 
ಜೂನ್ 17 ರಂದು 11 ಪರಿಷತ್ ಸದಸ್ಯರ ಅಧಿಕಾರವಧಿ ಪೂರ್ಣಗೊಳ್ಳಲಿದೆ.ಬಿಜೆಪಿಯ ಬಿ.ಜೆ ಪುಟ್ಟಸ್ವಾಮಿ, ಡಿ.ಎಸ್ ವೀರಯ್ಯ, ಸೋಮಣ್ಣ ಬೇವಿನಮರದ್, ರಘುನಾಥ್ ಮಲ್ಕಾಪುರೆ, ಎಂ.ಬಿ ಭಾನುಪ್ರಕಾಶ್,  ಕಾಂಗ್ರೆಸ್ ನ ಎಂ.ಆರ್ ಸೀತಾರಾಂ, ಮೋಟಮ್ಮ, ಸಿ.ಎಂ ಇಬ್ರಾಹಿಂ ಮತ್ತು ಕೆ. ಗೋವಿಂದರಾಜ್, ಜೆಡಿಎಸ್ ನ ಸೈಯ್ಯದ್ ಮುದೀರ್ ಆಗಾ ಮತ್ತು ಸ್ವತಂತ್ರ್ಯ ಅಭ್ಯರ್ಥಿ ಬಿ ಎಸ್ ಸುರೇಶ್ ಅವರ ಅಧಿಕಾರವಧಿ ಪೂರ್ಣ ಗೊಳ್ಳಲಿದೆ,
ಪ್ರತಿ ಅಭ್ಯರ್ಥಿಗೂ 19 ಶಾಸಕರ ಬೆಂಬಲದ ಅಗತ್ಯವಿದೆ, ಇದರ ಆದಾರದ ಮೇಲೆ ಬಿಜೆಪಿ ತನ್ನ 104 ಶಾಸಕರ ಬಲದಿಂದ 5 ಮಂದಿಯನ್ನು ಪರಿಷತ್ ಗೆ ಆರಿಸಿಕೊಳ್ಳಬಹುದಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಇಬ್ಬರನ್ನು ಆಯ್ಕೆ ಮಾಡಬಹುದಾಗಿದೆ.
ರಾಜ್ಯ ಬಿಜೆಪಿ ಕಾರ್ಯದರ್ಶಿ ರವಿಕುಮಾರ್, ರುದ್ರೇಗೌಡ, ಕೆಪಿ ನಂಜುಂಡಿ ಅವರನ್ನು ಬಿಜೆಪಿಯಿಂದ ನಾಮ ನಿರ್ದೇಶನಗೊಳ್ಳಬಹುದಾಗಿದೆ.  ಪುಟ್ಟಸ್ವಾಮಿ , ವೀರಯ್ಯ ಮತ್ತು ಭಾನು ಪ್ರಕಾಶ್ ಅವರು ಮರು ಆಯ್ಕೆಗಾಗಿ ಲಾಬಿ ನಡೆಸುತ್ತಿದ್ದಾರೆ, ಪಕ್ಷದ ವಕ್ತಾರ ಅಶ್ವಥ್ಥ್ ನಾರಾಯಣ ಹಾಗೂ ಮಾಜಿ ಸಂಸದೆ ತೇಜಸ್ವಿನಿ ಗೌಡ ಕೂಡ ಆಕಾಂಕ್ಷಿಗಳಾಗಿದ್ದಾರೆ, ಅಭ್ಯರ್ಥಿಗಳ ಪಟ್ಟಿಯನ್ನು ಮೇ 29 ರಂದು ಬಿ.ಎಸ್ ಯಡಿಯೂರಪ್ಪ ಅಂತ್ಯಗೊಳಿಸಲಿದ್ದಾರೆ.
ಕಾಂಗ್ರೆಸ್ ನಲ್ಲಿ ಮಾಜಿ ಸಚಿವ ಎಂ ಆರ್ ಸೀತಾರಾಂ ಮತ್ತು ಮೋಟಮ್ಮ ಮರು ಆಯ್ಕೆ ಬಯಸಿದ್ದಾರೆ. ಇವರುಗಳ ಜೊತೆಗೆ ಮಾಜಿ ಮೇಯರ್ ರಾಮಚಂದ್ರಪ್ಪ, ಕೆಪಿಸಿಸಿ ಉಪಾಧ್ಯಕ್ಷ ವಿ,ಆರ್ ಸುದರ್ಶನ್,  ನಂಜಯ್ಯನ ಮಠ್, ನಿವೇದಿತ್ ಆಳ್ವಾ. ನಾಗಾರಾಜ್ ಯಾದವ್, ಹುಚ್ಚಪ್ಪ ಮತ್ತು ಮಾಜಿ ಸಚಿವೆ ರಾಣಿ ಸತೀಶ್ ಹಾಗೂ ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್ ನ ಆಕಾಂಕ್ಷಿಗಳಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com