ಬಾದಾಮಿ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಗೆಲ್ಲಲು ಸಿದ್ದು ನ್ಯಾಮಗೌಡ ಪ್ರಮುಖ ಪಾತ್ರ ವಹಿಸಿದ್ದರು, ಹುನಗುಂದದಿಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಬಾಗಲಕೋಟೆಯಿಂದ ಮಾಜಿ ಸಚಿವ ಎಚ್ ವೈ ಮೇಟಿ, ತೇರದಾಳದಿಂದ ಉಮಾಶ್ರೀ ಮತ್ತು ಬೀಳಗಿಯಿಂದ ಜೆ.ಟಿ ಪಾಟೀಲ್ ಸ್ಪರ್ಧಿಸಿ ಸೋತಿದ್ದರು. ಸದ್ಯ ಬಾಗಲಕೋಟೆಯಲ್ಲಿ 7 ಕ್ಷೇತ್ರಗಳಿದ್ದು, ಅದರಲ್ಲಿ 5ರಲ್ಲಿ ಬಿಜೆಪಿ ಮತ್ತು2 ರಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಆದರೆ ಸಿದ್ದು ನ್ಯಾಮಗೌಡ ನಿಧನದಿಂದಾಗಿ ಜಮಖಂಡಿ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಗೆಲ್ಲುವುದು ಕಷ್ಟ ಎಂದು ಹೇಳಲಾಗುತ್ತಿದೆ, ಈ ಕ್ಷೇತ್ರವನ್ನು ತನ್ನ ಪಾಲಾಗಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ.