9 ಸದಸ್ಯರುಳ್ಳ ಸಮನ್ವಯ ಸಮಿತಿ ರಚನೆಗೆ ಎರಡು ಪಕ್ಷಗಳು ಒಪ್ಪಿವೆ ಎಂದು ಮೂಲಗಳು ತಿಳಿಸಿವೆ, ಕಾಂಗ್ರೆಸ್ ನಿಂದ 5 ಹಾಗೂ ಜೆಡಿಎಸ್ ನಿಂದ 4 ಮುಖಂಡರು ಸಮಿತಿಯಲ್ಲಿರಲಿದ್ದಾರೆ, ಆದರೆ ಈಗ ಸದ್ಯ ಎದುರಾಗಿರುವುದು ಸಮನ್ವಯ ಸಮಿತಿ ಅಧ್ಯಕ್ಷರು ಯಾರು ಎಂಬ ಪ್ರಶ್ನೆ, ರಾಜ್ಯ ಕಾಂಗ್ರೆಸ್ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಮಿತಿಯ ಅಧ್ಯಕ್ಷರಾಗಬೇಕೆಂದು ಪಟ್ಟು ಹಿಡಿದಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅಥವಾ ಗುಲಾಂ ನಬಿ ಆಜಾದ್ ಸಮಿತಿಯ ಅಧ್ಯಕ್ಷರಾಗಬೇಕೆಂದು ಜೆಡಿಎಸ್ ಬಯಸಿದೆ.