ಕೆಪಿಸಿಸಿ ಅಧ್ಯಕ್ಷ ಸ್ಥಾನ: ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಅವರೇ ಅಚ್ಚುಮೆಚ್ಚು!

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ಹಲವು ಹಿರಿಯ ಮುಖಂಡರು ಲಾಬಿ ನಡೆಸಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಜಿ ಸಿಎಂ ...
ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ
ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ
Updated on
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ಹಲವು ಹಿರಿಯ ಮುಖಂಡರು ಲಾಬಿ ನಡೆಸಿದ್ದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಮೊದಲ ಆದ್ಯತೆ ನೀಡಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆ ಸ್ವೀಕರಿಸಲು ಇಷ್ಠಪಡದ ಸಿದ್ದರಾಮಯ್ಯ ಎಂಬಿ ಪಾಟೀಲ್ ಅವರಿಗೆ ಕೊಡಿಸಲು ಲಾಬಿ ನಡೆಸಿದ್ದಾರೆ. ತಮ್ಮ ನೇತೃತ್ವದಲ್ಲಿ ರಾಜ್ಯದಲ್ಲಿ ಪಕ್ಷಕ್ಕೆ ತೊಂದರೆಯಾಗಿದೆ ಎಂದು ಸಿದ್ದರಾಮಯ್ಯ ಭಾವಿಸಿದ್ದಾರೆ, ಆದರೆ ಕಾಂಗ್ರೆಸ್ ಯುವರಾಜನಿಗೆ ಮಾಜಿ ಸಿಎಂ ಮೇಲೆ ಹೆಚ್ಚು ಪ್ರೀತಿ.
ರಾಹುಲ್ ಗಾಂಧಿ ಅವರ ಈ ಆಸೆಯಿಂದಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಡಿ.ಕೆ ಶಿವಕುಮಾರ್ ಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. 
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನೀಡಿದ ಆಡಳಿತ ಹಾಗೂ ಚುನಾವಣೆ ವೇಳೆಪಕ್ಷವನ್ನು ಹಾಗೂ ಕಾರ್ಯಕರ್ತರನ್ನು ನಿಬಾಯಿಸಿದ ರೀತಿಯಿಂದ ರಾಹುಲ್ ಪ್ರೇರೇಪಿತರಾಗಿದ್ದಾರೆ. ಸಿದ್ದರಾಮಯ್ಯ ಉತ್ತಮ ಆಡಳಿತಕಾರ ಎಂಬುದನ್ನು ರಾಹುಲ್ ಮೆಚ್ಟಿದ್ದಾರೆ ಎಂದು ಹೇಳಲಾಗಿದೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಸೋತಿದ್ದರು ಹಾಗೂ ಪಕ್ಷಕ್ಕೆ ಹಿನ್ನೆಡೆಗೆ ನೈತಿಕ ಹೊಣೆ ಹೊತ್ತಿದ್ದರು, ಹೀಗಿದ್ದರೂ ಸಿದ್ದರಾಮಯ್ಯ ಅವರನ್ನು ರಾಹುಲ್ ಗಾಂಧಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ನೇಮಿಸಿದ್ದಾರೆ.
ಸಚಿವ ಸ್ಥಾನವನ್ನು ನಿರಾಕರಿಸಿರುವ ಸಿದ್ದರಾಮಯ್ಯಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಆಫರ್ ನೀಡಲಾಗಿತ್ತು, ಆದರೆ ಅದನ್ನು ಸಿದ್ದರಾಮಯ್ಯ ನಿರಾಕರಿಸಿದ್ದಾರೆ, ಜೊತೆಗೆ ತಮ್ಮ ಪುತ್ರ ಶಾಸಕ ಯತೀಂದ್ರ ಅವರಿಗೆ ಸಚಿವ ಸ್ಥಾನಕ್ಕಾಗಿ ಬೇಡಿಕೆಯಿಟ್ಟಿಲ್ಲ ಎಂದು ಸಿದ್ದರಾಮಯ್ಯ ಅವರ ಆಪ್ತ ಮೂಲಗಳು ತಿಳಿಸಿವೆ.
ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಯಾವುದೇ ಅಡೆತಡೆಯಿಲ್ಲದಂತೆ ನಡೆದುಕೊಂಡು ಹೋಗಲು ರಚಿಸುವ ಸಮನ್ವಯ ಸಮಿತಿಗೆ ಅಧ್ಯಕ್ಷ ರನ್ನಾಗಿಸಲು ಕಾಂಗ್ರೆಸ್ ನಾಯಕರು ಬೇಡಿಕೆ ಮುಂದಿಟ್ಟಿದ್ದಾರೆ, ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷರಾಗುವುದು ಪಕ್ಷದಲ್ಲಿ ಕೆಲವರಿಗೆ ಮಾತ್ರ ಒಲವಿದೆ. 
ಸರಿಯಾದ ಪ್ರಾತಿನಿದ್ಯವಿಲ್ಲದ ಕಾರಣ ಈಗಾಗಲೇ ವಿಧಾನ ಸಭೆ ಚುನಾವಣೆಯಲ್ಲಿ ಹಲವು ಭಾಗಗಳಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಮತಗಳನ್ನು ಕಳೆದುಕೊಂಡಿದ್ದೇವೆ, ಹೀಗಾಗಿ ಯಾವುದೇ ಸಮುದಾಯವನ್ನು ನಿರ್ಲಕ್ಷ್ಯಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ ಎರಡು ಸಮುದಾಯಗಳ ನಾಯಕರನ್ನು ಡಿಸಿಎಂ ಮಾಡಲು ಬಯಸಿತ್ತು, ಲಿಂಗಾಯತ ಮತ್ತು ದಲಿತ ವ್ಯಕ್ತಿಗೆ ಡಿಸಿಎಂ ಪಟ್ಟ ಕೊಡಲು ಕಾಂಗ್ರೆಸ್ ತಯಾರಾಗಿತ್ತು, ಆದರೆ ಜೆಡಿಎಸ್ ಇದಕ್ಕೆ ಒಪ್ಪಲಿಲ್ಲ.,  ಹೀಗಾಗಿ ದಲಿತ ನಾಯಕ ಪರಮೇಶ್ವರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಒಕ್ಕಲಿಗರಾಗಿರುವ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಲಿಂಗಾಯತ ಸಮುದಾಯದ ವ್ಯಕ್ತಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೇ ಸಮತೋಲನಾಗುತ್ತದೆ ಎಂದು ಅಭಿಪ್ರಾಯ ಪಡಲಾಗಿದೆ.
ಒಂದು ವೇಳೆ ಡಿ.ಕೆ ಶಿವಕುಮಾರ್ ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದಿದ್ದರೇ., ಕೊನೆ ಪಕ್ಷ ದಿನೇಶ್ ಗುಂಡೂರಾವ್ ಅವರನ್ನಾದರೂ ಪರಿಗಣಿಸಬೇಕು ಎಂಬುದು ಕಾಂಗ್ರೆಸ್ ಮುಖಂಡರ ಬೇಡಿಕೆಯಾಗಿತ್ತು, ಆದರೆ ರಾಹುಲ್ ಸಿದ್ದರಾಮಯ್ಯ ಪರ ಒಲವು ತೋರಿರುವುದು ಹಲವರಿಗೆ ನಿರಾಸೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com