ಗಣಿಗಾರಿಕೆ ನಿಧಿ ಮೇಲೆ ಡಿಕೆಶಿ ಕಣ್ಣು, ಹೀಗಾಗಿ ಬಳ್ಳಾರಿ ಮೇಲೆ ಹೆಚ್ಚಿನ ಆಸಕ್ತಿ: ಶ್ರೀರಾಮುಲು

ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಶಾಂತಾ ಸ್ಪರ್ಧಿಸಿದ್ದರೂ ಶ್ರೀರಾಮುಲು ಇದನ್ನು ತಮ್ಮ ವಯಕ್ತಿಕ ಹೋರಾಟ ಎಂದೇ ಪರಿಗಣಿಸಿದ್ದಾರೆ..
ಶ್ರೀರಾಮುಲು
ಶ್ರೀರಾಮುಲು
ಬಳ್ಳಾರಿ: ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಶಾಂತಾ ಸ್ಪರ್ಧಿಸಿದ್ದರೂ ಶ್ರೀರಾಮುಲು ಇದನ್ನು ತಮ್ಮ ವಯಕ್ತಿಕ ಹೋರಾಟ ಎಂದೇ ಪರಿಗಣಿಸಿದ್ದಾರೆ, ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಕೂಡ ಇದನ್ನು ತಮ್ಮ ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿದ್ದಾರೆ, ಪ್ರಚಾರದ ವೇಳೆ ಬಿಜೆಪಿ ತನ್ನ ಟ್ರಂಪ್ ಕಾರ್ಡ್ ಆಗಿ ಪ್ರಧಾನಿ ಮೋದಿ ಅವರ ಹೆಸರನ್ನು  ಮರೆತು ಬಿಟ್ಟಿದ್ದಾರೆ.
ತಮ್ಮ ಬ್ಯುಸಿ ಷೆಡ್ಯೂಲ್ ನಲ್ಲಿಯೂ ಕೂಡ ಶ್ರೀರಾಮುಲು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದಾರೆ.
ಪ್ರ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಿತ್ತು. ಉಪ ಚುನಾವಣೆಯಲ್ಲಿಯೂ ಅದೇ ಫಲಿತಾಂಶ ಮರುಕಳಿಸುತ್ತಾ?
ಬಳ್ಳಾರಿಯ 8ಕ್ಷೇತ್ರಗಳಲ್ಲಿ  2ರಲ್ಲಿ  ಮಾತ್ರ ಬಿಜೆಪಿ ಶಾಸಕರಿದ್ದಾರೆ,ಕಡಿಮೆ ಅಂತರದಲ್ಲಿ ಸೋತಿದ್ದರು. 2014 ರಲ್ಲಿ ನಾನು 22,175 ಮತಗಳ ಅಂತರದಿಂದ ಜಯಗಳಿಸಿದ್ದೆ, ಬಳ್ಳಾರಿ ವಿಧಾನಸಭೆ ಕ್ಷೇತ್ರದಿಂದ ನಾನು ಸ್ಪರ್ದಿಸಲಿಲ್ಲ ಎಂಬ ಕಾರಣಕ್ಕೆ ಅಲ್ಲಿನ ಜನರು ಬೇಸರಗೊಂಡು ಬಿಜೆಪಿಯನ್ನು ಸೋಲಿಸಲು ಕಾರಣವಾಯಿತು. ಮೋದಿ ಸರ್ಕಾರದ ಹಲವು ಯೋಜನೆಗಳು ಬಳ್ಳಾರಿಗೆ ದೊರೆತಿವೆ,
ಪ್ರ: ಬಳ್ಳಾರಿ ಜನತೆ ನಿಮಗೆ ಮತ ಹಾಕುತ್ತಾರೋ ಅಥವಾ ಶಾಂತಾ ಅವರಿಗೆ ಮತ ಹಾಕುತ್ತಾರೋ?
ಮತ ಶಾಂತ ಅವರಿಗೆ, ಅದರೆ ಅದಕ್ಕೆ ನಾನು ಜವಾಬ್ದಾರಿ, ನಾನು ರಾಜಿನಾಮೆ ನೀಡಿದ್ದೆ, ಇದು ನನ್ನ ಕ್ಷೇತ್ರ,  ಶಿವಮೊಗ್ಗ ಎಂದರೇ ಯಡಿಯೂರಪ್ಪ ಹಾಗೆಯೇ ಬಳ್ಳಾರಿ ಎಂದರೇ ಶ್ರೀರಾಮುಲು.
ಪ್ರ: ಡಿ.ಕೆ ಶಿವಕುಮಾರ್ ಅವರಿಗೆ ಬಳ್ಳಾರಿ ಎಂದರೇ ಏಕೆ ಅಷ್ಟೊಂದು ಆಸಕ್ತಿ?
ಮಂಡ್ಯದಲ್ಲಿ ರಾಜಕೀಯ ಮಾಡಲು ಡಿ.ಕೆ ಶಿವಕುಮಾರ್ ಗೆ ಸಾಧ್ಯವಾಗುತ್ತಿಲ್ಲ, ಹಾಗಾಗಿ ಬಳ್ಳಾರಿ ರಾಜಕೀಯಕ್ಕೆ ಕೈ ಹಾಕುತ್ತಿದ್ದಾರೆ, ಗಣಿಗಾರಿಕೆ ನಿಧಿ ಮೇಲೆ ಶಿವಕುಮಾರ್ ಕಣ್ಣಿಟ್ಟಿದ್ದಾರೆ, ಹೀಗಾಗಿ ಬಳ್ಳಾರಿ ಮೇಲೆ ಶಿವಕುಮಾರ್ ಅವರಿಗೆ ಹೆಚ್ಚಿನ ಆಸಕ್ತಿ .
ಪ್ರ: ಬಳ್ಳಾರಿ ಉಪಚುನಾವಣೆ ಶಿವಕುಮಾರ್ ಮತ್ತು ಶ್ರೀರಾಮುಲು ಅವರ ವಯಕ್ತಿಕ ಹೋರಾಟವೇ?
ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಹೋರಾಟ
ಪ್ರ: ಬಳ್ಳಾರಿ ಉಪ ಚುನಾವಣೆಯಲ್ಲಿ ಮೋದಿ ಹೆಸರನ್ನು ಬಳಸುತ್ತಿಲ್ಲ ಏಕೆ?
ನಾವು ಎಲ್ಲಿಗೆ ಹೋದರು ಮೋದಿ ಹೆಸರಿನಲ್ಲಿ ಮತಕೇಳುತ್ತೇವೆ, ಕೆಲವೊಮ್ಮೆ ಅದು ವೈಯಕ್ತಿಕವಾಗುತ್ತದೆ, ಡಿ.ಕೆ ಶಿವಕುಮಾರ್ ತಮ್ಮನ್ನು ತಾವು ದೊಡ್ಡ ನಾಯಕರು ಎಂದು ಹೇಳಿಕೊಂಡಾಗ ಅವರ ಸಮನಾಗಿ ನಾನು ಕೂಡ ದೊಡ್ಡ ನಾಯಕನಾಗುತ್ತೇನೆ.
ಪ್ರ: ನಿಮ್ಮ ಅತ್ಯಾಪ್ತ ಜನಾರ್ದನ ರೆಡ್ಡಿ ಬಿಜೆಪಿಗೆ ಸಮಸ್ಯೆಯೇ?
ಜನಾರ್ದನ ರೆಡ್ಡಿ ಅವರು ತಮ್ಮ ಹಣ ಹಾಗೂ ರಾಜಕೀಯದಿಂದಾಗಿ ಇಂದಿನ ದಿನ ಹೆಚ್ಚು ಚಿರಪರಿಚಿತರಾಗಿದ್ದಾರೆ,  ನಾವಿಬ್ಬರು ಶಾಲಾ ದಿನಗಳಿಂದ ಸ್ನೇಹಿತರು, ಅವರ ಮೇಲೆ ಕೇವಲ ಆರೋಪ ಬಂದ ಮಾತ್ರಕ್ಕೆ ನಾನು ನನ್ನ ಸ್ನೇಹ ಕಳೆದುಕೊಳ್ಳಲು ಸಾಧ್ಯವಿಲ್ಲ, ಅವರಿಗೆ ಸಮಸ್ಯೆಯಾಗಿದೆ ಎಂದ ಮಾತ್ರಕ್ಕೆ ಅವರನ್ನು ಬಿಟ್ಟು ಬಿಡಲು ಸಾಧ್ಯವೇ.
ಪ್ರ: ಬಿಜೆಪಿ ಕೇವಲ ಮೇಲ್ಜಾತಿಯವರ ಪರವಾಗಿದೆ ಎಂಬ ಇಮೇಜ್ ಇದೆಯಲ್ಲ?
ಬಿಜೆಪಿ ಎಲ್ಲಾ ತುಳಿತಕ್ಕೊಳಗಾದ ಸಮುದಾಯಗಳ ಪರ ಪಕ್ಷವಾಗಿದೆ, ಕೇವಲ ನಾನು ಮಾತ್ರವಲ್ಲ ಹಲವು ಹಿಂದುಳಿದ  ಸಮುದಾಯಗಳ ನಾಯಕರಿಗೂ ಉತ್ತಮ ಸ್ಥಾನ ನೀಡಿದೆ, ಗೋವಿಂದ ಖಾರಜೋಳ, ಅರವಿಂದ ಲಿಂಬಾವಳಿ, ರಮೇಶ್ ಜಿಗಜಿಣಗಿ ಸೇರಿದಂತೆ ಹಲವರಿಗೆ ಅವಕಾಶ ನೀಡಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ತಮ್ಮ ಸಂಪುಟದಲ್ಲಿ ಎಳೆಂಟು ಮಂದಿ ಹಿಂದುಳಿದ ವರ್ಗಗಳ  ಶಾಸಕರು ಸಚಿವರಾಗಿದ್ದರು. 
ಪ್ರ:  ಶ್ರೀರಾಮುಲು ಇಂದಿಗೂ ಬಿಜೆಪಿ ಉಪಮುಖ್ಯಮಂತ್ರಿ ಅಭ್ಯರ್ಥಿಯೇ?
ನಾನು ಇದುವರೆಗೂ 7 ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ, ಅದರಲ್ಲಿ ಆರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ,ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಒಂದು ವೇಳೆ ಪಕ್ಷ ಬಯಸಿದರೇ ಯಾವುದೇ ಹೊಸ ಜವಾಬ್ದಾರಿ ಹೊರಲು ಸಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com