ಡಿ.ಕೆ.ಬ್ರದರ್ಸ್ ರಣತಂತ್ರಕ್ಕೆ ತತ್ತರಿಸಿದ ಬಿಜೆಪಿ: ಕಣದಿಂದ ಹಿಂದೆ ಸರಿದ ಚಂದ್ರಶೇಖರ್!

ರಾಮನಗರ ಉಪಚುನಾವಣೆಯಿಂದ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ಹಿಂದೆ ಸರಿದಿದ್ದಾರೆ. ತಾವು ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರುತ್ತಿರುವುದಾಗಿ ತಿಳಿಸಿದ್ದಾರೆ. ನಾನು ಮೂಲತಃ ....
ಬಿಜೆಪಿ ಅಭ್ಯರ್ಥಿ ಎಲ್ . ಚಂದ್ರಶೇಖರ್
ಬಿಜೆಪಿ ಅಭ್ಯರ್ಥಿ ಎಲ್ . ಚಂದ್ರಶೇಖರ್
ಬೆಂಗಳೂರು: ರಾಮನಗರ ಉಪಚುನಾವಣೆಯಿಂದ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ಹಿಂದೆ ಸರಿದಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರಶೇಖರ್, ತಾವು ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರುತ್ತಿರುವುದಾಗಿ ತಿಳಿಸಿದ್ದಾರೆ. ನಾನು ಮೂಲತಃ ಕಾಂಗ್ರೆಸ್ಸಿನವನು, ನನ್ನ ಸಂಪೂರ್ಣ ಬೆಂಬಲವನ್ನು ಜೆಡಿಎಸ್ ಅಭ್ಯರ್ಥಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ.
ನನ್ನ ಪರವಾಗಿ ಇದುವರೆಗೂ ಯಾರು ಬಂದು ಪ್ರಚಾರ ಮಾಡಿಲ್ಲ, ಯಡಿಯೂರಪ್ಪನವರು ಒಂದೇ ಒಂದು ದಿನ ನನ್ನ ಜೊತೆ ಮಾತನಾಡಿಲ್ಲ, ಯೋಗೀಶ್ವರ್ ಸರ್ಕಾರ ಬೀಳಿಸುತ್ತೇನೆ ಎಂದು ಹೇಳಿದ್ರು, ಚುನಾವಣೆಯ ಸಂಪೂರ್ಣ ಖರ್ಚು ವೆಚ್ಚ ಭರಿಸುವುದಾಗಿ ಹೇಳಿದರು, ಆದರೆ ಬಿಜೆಪಿಯಲ್ಲಿ ಯಾರನ್ನು ಕಂಡರೆ ಯಾರಿಗೂ ಆಗುವುದಿಲ್ಲ, ಸಿ.ಪಿ ಯೋಗೇಶ್ವರ್ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ, ಯೋಗೇಶ್ವರ್ ಕಂಡರೆ ಸದಾನಂದಗೌಡ ಅವರಿಗೆ ಆಗುವುದಿಲ್ಲ ಎಂದು ಹೇಳಿದ್ದಾರೆ,.
ಆರ್, ಅಶೋಕ್ ರಾಮನಗರದಲ್ಲಿ ಗಾಡಿ ನಿಲ್ಲಿಸದೇ ಮಂಡ್ಯಕ್ಕೆ ಹೋಗುತ್ತಾರೆ, ಬಳ್ಳಾರಿ, ಶಿವಮೊಗ್ಗದಲ್ಲಿ ಪ್ರಚಾರ ಮಾಡುವ ಬಿಜೆಪಿ ನಾಯಕರು, ರಾಮನಗರದಲ್ಲಿ ಬಂದು ಒಂದು ದಿನವೂ ಪ್ರಚಾರ ಮಾಡಲಿಲ್ಲ ಎಂದು ಹೇಳಿದ್ದಾರೆ.
15 ದಿನದಲ್ಲಿ ಬಿಜೆಪಿ ಬಂಡವಾಳ ಬಯಲಾಗಿದೆ, ಇದಕ್ಕೆಲ್ಲಾ ಮಾಜಿ ಸಚಿವ ಯೋಗೇಶ್ವರ್ ಕಾರಣ ಎಂದು ಆರೋಪಿಸಿದ್ದಾರೆ,. ನನಗೆ ಬಿಜೆಪಿ ಸಹವಾಸವೇ ಬೇಡ ಎಂದು ಹೇಳಿದ್ದಾರೆ.
ಚುನಾವಣೆಗೆ ಇನ್ನೂ 2 ದಿನ ಬಾಕಿ ಇರುವಾಗ ಚಂದ್ರಶೇಖರ್ ತೆಗೆದು ಕೊಂಡಿರುವ ಈ ನಿರ್ಧಾರದಿಂದ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.  ಚಂದ್ರಶೇಖರ್ ಚುನಾವಣೆಯಿಂದ ಹಿಂದೆ ಸರಿದಿರುವುದಕ್ಕೆ ಡಿ,ಕೆ ಬ್ರದರ್ಸ್ ಕಾರಣ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್‌ ಪಕ್ಷ  ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ  ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಪುತ್ರ  ಎಲ್‌ ಚಂದ್ರಶೇಖರ್‌  ಅವರಿಗೆ ಬಿಜೆಪಿ ಬಿ ಫಾರಂ ನೀಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com