ಎಲ್.ಚಂದ್ರಶೇಖರ್
ರಾಜಕೀಯ
ಚುನಾವಣೆಯಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ: ಕಠಿಣ ಕಾನೂನು ತರಲು ತಜ್ಞರ ಸಲಹೆ!
ರಾಮನಗರ ವಿಧಾನಸಭೆ ಉಪಚುನಾವಣೆಯಿಂದ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದು, ಚುನಾವಣೆಯನ್ನು ಮುಂದೂಡುವಂತೆ ಬಿಜೆಪಿ ಆಯೋಗಕ್ಕೆ ಮನವಿ ಮಾಡಿತ್ತು, ...
ಬೆಂಗಳೂರು: ರಾಮನಗರ ವಿಧಾನಸಭೆ ಉಪಚುನಾವಣೆಯಿಂದ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದು, ಚುನಾವಣೆಯನ್ನು ಮುಂದೂಡುವಂತೆ ಬಿಜೆಪಿ ಆಯೋಗಕ್ಕೆ ಮನವಿ ಮಾಡಿತ್ತು, ಆದರೆ ಬಿಜೆಪಿ ಮನವಿಯನ್ನು ತಿರಸ್ಕರಿಸಿ, ಚುನಾವಣೆ ನಡೆಸುತ್ತಿದೆ.
ಕೊನೆ ಕ್ಷಣದಲ್ಲಿ ಅಭ್ಯರ್ಥಿ ಹಿಂದೆ ಸರಿದಿರುವುದರ ಹಿನ್ನೆಲೆಯಲ್ಲಿ, ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಮರುಕಳಿಸಬಾರದು ಎಂದರೇ ಇಂಥಹ ಪ್ರಕರಣದ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದ ವಿಚಾರದಲ್ಲಿ ಇದೊಂದು ದುಃಖಕರ ವಿಚಾರ, ಅಂಥಹ ವ್ಯಕ್ತಿಗಳಿಗೆ ಶಿಕ್ಷಿಸುವಂತ ಕಠಿಣ ಕಾನೂನು ಜಾರಿಗೆ ತರಬೇಕು, ಮುಂದಿನ 2 ಚುನಾವಣೆಗಳಲ್ಲಿ ಅವರು ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯ ಪಟ್ಟಿದ್ದಾರೆ.
ಇಂಥಹ ಘಟನೆಗಳು ಮರುಕುಳಿಸದಂತೆ ಮಾಡಲು ಕಠಿಣ ಕಾನೂನು ಕ್ರಮ ಜಾರಿಗೆ ತರಬೇಕು, ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕು, ಆಗ ಮಾತ್ರ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಮಾಡಿದಂತ ಘಟನೆ ಮತ್ತೆ ರಿಪೀಟ್ ಆಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎಫ್ ಸಲ್ಡಾನಾ ಹೇಳಿದ್ದಾರೆ.

