ಬಳ್ಳಾರಿ ಉಪಚುನಾವಣೆ: ಬರೊಬ್ಬರಿ 1 ದಶಕದ ನಂತರ ಭದ್ರಕೋಟೆಯನ್ನು ಬಿಜೆಪಿಯಿಂದ ವಶಪಡಿಸಿಕೊಂಡ ಕಾಂಗ್ರೆಸ್!

ರಾಜ್ಯದ ಪಂಚ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಮೈತ್ರಿ ಸರ್ಕಾರವನ್ನು ಮತ್ತಷ್ಟು ಬಲಗೊಳಿಸಿದ್ದು, ಸಿಎಂ ಹೆಚ್ ಡಿ ಕುಮಾರಸ್ವಾಮಿ ಸರ್ಕಾರ ಸಧ್ಯಕ್ಕೆ ಸುಭದ್ರವಾಗಿದೆ.
ಬಳ್ಳಾರಿ ಉಪಚುನಾವಣೆ: ಬರೊಬ್ಬರಿ 1 ದಶಕಗಳ ನಂತರ ಭದ್ರಕೋಟೆಯನ್ನು ಬಿಜೆಪಿಯಿಂದ ವಶಪಡಿಸಿಕೊಂಡ ಕಾಂಗ್ರೆಸ್!
ಬಳ್ಳಾರಿ ಉಪಚುನಾವಣೆ: ಬರೊಬ್ಬರಿ 1 ದಶಕಗಳ ನಂತರ ಭದ್ರಕೋಟೆಯನ್ನು ಬಿಜೆಪಿಯಿಂದ ವಶಪಡಿಸಿಕೊಂಡ ಕಾಂಗ್ರೆಸ್!
ಬಳ್ಳಾರಿ: ರಾಜ್ಯದ ಪಂಚ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಮೈತ್ರಿ ಸರ್ಕಾರವನ್ನು ಮತ್ತಷ್ಟು ಬಲಗೊಳಿಸಿದ್ದು, ಸಿಎಂ ಹೆಚ್ ಡಿ ಕುಮಾರಸ್ವಾಮಿ ಸರ್ಕಾರ ಸಧ್ಯಕ್ಕೆ ಸುಭದ್ರವಾಗಿದೆ. 
ಶಿವಮೊಗ್ಗದಲ್ಲಿ ಮಾತ್ರ ಬಿಜೆಪಿ ತನ್ನ ಪ್ರಾಬಲ್ಯ ಮೆರೆಯಲು ಸಾಧ್ಯವಾಗಿದ್ದು, ತನ್ನ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ್ ಮ್ಯಾಜಿಕ್ ಮಕಾಡೆ ಮಲಗಿದೆ. ಈ ಹಿಂದೆ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಬಳ್ಳಾರಿಯನ್ನು ರೆಡ್ಡಿ ಬ್ರದರ್ಸ್ ಬಿಜೆಪಿ ಭದ್ರಕೋಟೆಯನ್ನಾಗಿಸಿದ್ದರು. ಆದರೆ ಬರೊಬ್ಬರಿ ಒಂದು ದಶಕ (10 ವರ್ಷಗಳ) ನಂತರ ಬಳ್ಳಾರಿಯಲ್ಲಿ ಭದ್ರವಾದ ನೆಲೆ ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿದೆ. 
2018 ರ ವಿಧಾನಸಭಾ ಚುನಾವಣೆಯಲ್ಲಿಯೂ ಸಹ  ಬಳ್ಳಾರಿಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿತ್ತು. ಈಗ ಮತ್ತೊಮ್ಮೆ ಲೋಕಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ದಶಕಗಳಿಂದ ಎದುರಿಸುತ್ತಿದ್ದ ಸೋಲಿನಿಂದ ಹೊರಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com