ಶಿವಮೊಗ್ಗ: ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಬಾರೀ ಅಂತರದ ಜಯ ಸಾಧಿಸಿದ್ದಾರೆ.
ಬಿಜೆಪಿಗೆ ಸೆಡ್ಡು ಹೊಡೆಯುವ ಸಲುವಾಗಿ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಧು ಬಂಗಾರಪ್ಪಗೆ ಭಾರೀ ಮುಖಭಂಗವಾಗಿದೆ.ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ 50 ಸಾವಿರಕ್ಕಿಂತ ಅಧಿಕ ಮತಗಳ ಅಂತರದಿಂದ ವಿಜೇತರಾಗಿದ್ದಾರೆ.
ಬಿಜೆಪಿಯ ರಾಘವೇಂದ್ರ ಅವರಿಗೆ 5,42,956 ಮತಗಳು, ಜೆಡಿಎಸ್ ನ ಮಧುಬಂಗಾರಪ್ಪ ಅವರಿಗೆ 4,90,788 ಮತಗಳು ಬಂದಿದೆ.ರಾಘವೇಂದ್ರ ಅವರಿಗೆ 52,168 ಮತಗಳ ಅಂತರದಿಂಡ ಗೆಲುವಾಗಿದೆ
ಇದೇ ವೇಳೆ ಮಂಡ್ಯ, ಬಳ್ಳಾರಿಗಳಲ್ಲಿ ಕ್ರಮವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಜಯಭೇರಿ ಬಾರಿಸಿವೆ.