ಬಿಬಿಎಂಪಿ ಉಪ ಮೇಯರ್, ಸ್ಥಾಯಿ ಸಮಿತಿಗೆ ನ.23ರಂದು ಚುನಾವಣೆ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಪ ಮೇಯರ್ ಮತ್ತು ಬಿಬಿಎಂಪಿ ಸ್ಥಾಯಿ ಸಮಿತಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಪ ಮೇಯರ್ ಮತ್ತು ಸ್ಥಾಯಿ ಸಮಿತಿ ಸದಸ್ಯರ ಸ್ಥಾನಕ್ಕೆ ನವೆಂಬರ್ ಮೂರನೇ ವಾರದಲ್ಲಿ ಚುನಾವಣೆ ನಡೆಯುವ  ಸಾಧ್ಯತೆಯಿದೆ. ಜೆಡಿಎಸ್ ನ ರಮಿಳಾ ಉಮಾಶಂಕರ್ ಬಿಬಿಎಂಪಿ ಉಪ ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ಕೇವಲ ಒಂದೇ ವಾರದ ನಂತರ ಅಕ್ಟೋಬರ್ 5ರಂದು ಹಠಾತ್ ನಿಧನ ಹೊಂದಿದ ನಂತರ ಅವರ ಸ್ಥಾನ ಖಾಲಿಯಿದೆ. 

ಕಳೆದ ಬಾರಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಸೆಪ್ಟೆಂಬರ್ 28ರಂದು ನಡೆದರೆ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಮುಂದೂಡಲ್ಪಟ್ಟಿತ್ತು.

ಬಿಬಿಎಂಪಿಯಲ್ಲಿ 15 ಜೆಡಿಎಸ್ ಕೌನ್ಸಿಲರ್ ಗಳಿದ್ದು ಅವರಲ್ಲಿ ನಾಲ್ವರು ಈ ಹಿಂದೆ ಉಪ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಈ ಬಾರಿ ಉಪ ಮೇಯರ್ ಸ್ಥಾನಕ್ಕೆ ಕೆಲವು ನಾಯಕರು ಮಹಿಳಾ ಕೌನ್ಸಿಲರ್ ಗಳ ಪರವಾಗಿ ಒಲವು ತೋರುತ್ತಿದ್ದರೆ, ಮಹಾಲಕ್ಷ್ಮಿ ಲೇ ಔಟ್ ಶಾಸಕ ಗೋಪಾಲಯ್ಯ, ನಾಗಾಪುರ ವಾರ್ಡ್ ನ ಕೌನ್ಸಿಲರ್ ಭದ್ರೇಗೌಡ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ನನ್ನ ಕ್ಷೇತ್ರದಿಂದ ಯಾರಾದರೊಬ್ಬರು ಉಪ ಮೇಯರ್ ಆಗಬೇಕು ಎಂಬುದು ನನ್ನ ಆಸೆ. ನನ್ನ ಕ್ಷೇತ್ರದಲ್ಲಿ ನಾಲ್ವರು ಕೌನ್ಸಿಲರ್ ಗಳಿದ್ದಾರೆ ಎನ್ನುತ್ತಾರೆ ಅವರು. ಉಪ ಮೇಯರ್ ಸ್ಥಾನಕ್ಕೆ ಕಾವಲ್ ಭೈರಸಂದ್ರ ವಾರ್ಡ್ ನ ನೇತ್ರ ನಾರಾಯಣ್ ಅವರ ಹೆಸರು ಕೂಡ ಕೇಳಿಬರುತ್ತಿದೆ.

ಬಿಬಿಎಂಪಿ ಮಂಡಳಿಯ ಆಡಳಿತಾರೂಢ ನಾಯಕ ಎಂ ಶಿವರಾಜ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿ, ನವೆಂಬರ್ 23ರಂದು ಚುನಾವಣೆ ನಡೆಯುವ ಸಾಧ್ಯತೆಯಿದೆ. ಸ್ಥಳೀಯ ಚುನಾವಣಾ ಆಯುಕ್ತರು ಇನ್ನೆರಡು ದಿನಗಳೊಳಗೆ ಅಧಿಕೃತ ಪ್ರಕಟಣೆ ಹೊರಡಿಸಲಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com