ಮರೆಯಾದ ಬಿಜೆಪಿ ರಾಜಕೀಯ 'ಕೌಟಿಲ್ಯ': ಲೋಕಸಭೆ ಚುನಾವಣೆ ರಾಜ್ಯದ ಹೊಣೆ ಯಾರಿಗೆ?

ಸತತ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಉತ್ತಮ ವಾಗ್ಮಿ , ಸಂಘಟನಾ ಚತುರ ಅನಂತ್ ಕುಮಾರ್ ಅವರನ್ನು ಕಳೆದುಕೊಂಡಿರುವ ....
ಮೋದಿ ಜೊತೆ ಅನಂತ್ ಕುಮಾರ್
ಮೋದಿ ಜೊತೆ ಅನಂತ್ ಕುಮಾರ್
ಬೆಂಗಳೂರು:  ಸತತ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಉತ್ತಮ ವಾಗ್ಮಿ , ಸಂಘಟನಾ ಚತುರ ಅನಂತ್ ಕುಮಾರ್ ಅವರನ್ನು ಕಳೆದುಕೊಂಡಿರುವ ರಾಜ್ಯ ಬಿಜೆಪಿ ಅಕ್ಷರಶಃ ಅನಾಥವಾಗಿದೆ,  ಲೋಕಸಭೆ ಚುನಾವಣೆ ಇನ್ನ ಕೆಲವೇ ತಿಂಗಳುಗಳು ಬಾಕಿ ಉಳಿದಿರುವ ಸಮಯದಲ್ಲಿ ಅನಂತ್ ಅಸ್ತಂಗತರಾಗಿರುವುದು ಬಿಜೆಪಿಗೆ ಬಾರೀ ಹೊಡೆತ ನೀಡಿದೆ. ರಾಜ್ಯ ಬಿಜೆಪಿ ಘಟಕವನ್ನು ಹಿಡಿತದಲ್ಲಿಟ್ಟು ನಿಯಂತ್ರಿಸುತ್ತಿದ್ದ ಅನಂತ್ ಕುಮಾರ್ ಅವರ ಸಾವು ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ.
ಲಿಂಗಾಯತೇತರ ಬಿಜೆಪಿ ಮುಖಂಡರಿಗೆ ಅನಂತ್ ಕುಮಾರ್ ಅವರ ಸಾವಿನಿಂದ ಹಿನ್ನಡೆ ಉಂಟಾಗಿದೆ. ಪಕ್ಷ ಸಂಘಟನಾ ಕೌಶಲ್ಯವುಳ್ಯ ಕೌಟಿಲ್ಯನನ್ನು ಕಳೆದು ಕೊಂಡಿದೆ.
ಅನಂತ್ ಕುಮಾರ್ ಅವರ ಸಂಘಟನಾ ಕೌಶಲ್ಯ ಕುರಿತು ಹೇಳುವುದಾದರೇ, ಪ್ರತಿಯೊಂದು ಕ್ಷೇತ್ರದ ಭೌಗೋಳಿಕ ವಿಸ್ತರಣೆ, ಅದರ ಸಾಮಾಜಿಕ ಸ್ಥಾನಮಾನ, ಪಕ್ಷದ ಅಭ್ಯರ್ಥಿಗಳು, ಬಿಜೆಪಿಯೇತರ ಅಭ್ಯರ್ಥಿಗಳ ಬಗ್ಗೆಯೂ ಅವರಿಗೆ ಚೆನ್ನಾಗಿ ತಿಳಿದಿತ್ತು, ಯಾವುದೇ ಬರವಣಿಗೆಯಿಲ್ಲದೇ ಅದರ ಬಗ್ಗೆ ವಿವರಿಸುತ್ತಿದ್ದರು. ಬಿಜೆಪಿ ಒಬ್ಬ ಅಪರೂಪದ ಚುನಾವಣಾ ತಂತ್ರಗಾರನನ್ನು ಕಳೆದುಕೊಂಡಿದೆ ಎಂದು ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ,.
ಪಕ್ಷದ ಎಲ್ಲರ ಜೊತೆ ಸ್ನೇಹದಿಂದ ವರ್ತಿಸುವ ಜಾಣತನ ಅನಂತ್ ಕುಮಾರ್ ಅವರಿಗೆ ತಿಳಿದಿತ್ತು. ಹೀಗಾಗಿ 1996ರಿಂದಲೂ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗುತ್ತಿದ್ದಾರೆ.
ರಾಜ್ಯ ಬಿಜೆಪಿಯ ಇತರ ನಾಯಕರುಗಳಂತೆ ಅನಂತ್ ಕುಮಾರ್ ಯಾವತ್ತೂ ಬೇಕಾ ಬಿಟ್ಟಿ ಹೇಳಿಕೆ ನೀಡಿದವರಲ್ಲ, ಅವರಲ್ಲಿ ಆರ್ ಎಸ್ ಎಸ್ ಬೇರು ಭದ್ರವಾಗಿ ಬೇರೂರಿತ್ತು,. ಅವರ ನಡವಳಿಕೆ ಎಂದಿಗೂ ಪ್ರಚೋದನಾಕಾರಿಯಾಗಿರಲಿಲ್ಲ, ಹೀಗಾಗಿ ಅನಂತ್ ಕುಮಾರ್ ಸಾವಿನಿಂದ ಕೇಂದ್ರ ಮತ್ತು ರಾಜ್ಯದ ನಡುವಿನ ಕೊಂಡಿ ಕಳಚಿದಂತಾಗಿದೆ ಎಂದು ಬಹತೇಕರ ಅಭಿಪ್ರಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com