ರಾಮನಗರ ಶಾಸಕಿಯಾಗಿ ಅನಿತಾ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ

ರಾಮನಗರ ವಿಧಾನಸಭೆ ಉಪ ಚುನಾವಣೆಯಲ್ಲಿ ದಾಖಲೆ ಮತಗಳಿಂದ ಗೆದ್ದಿದ್ದ ಅನಿತಾ ಕುಮಾರಸ್ವಾಮಿ ಗುರುವಾರ ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಅನಿತಾ ಕುಮಾರಸ್ವಾಮಿ ಪ್ರಮಾಣವಚನ
ಅನಿತಾ ಕುಮಾರಸ್ವಾಮಿ ಪ್ರಮಾಣವಚನ
ಬೆಂಗಳೂರು: ರಾಮನಗರ ವಿಧಾನಸಭೆ ಉಪ ಚುನಾವಣೆಯಲ್ಲಿ ದಾಖಲೆ ಮತಗಳಿಂದ ಗೆದ್ದಿದ್ದ ಅನಿತಾ ಕುಮಾರಸ್ವಾಮಿ ಗುರುವಾರ ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ವಿಧಾನಸೌಧದ ಸ್ಪೀಕರ್ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಿತಾ ಅವರಿಗೆ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನವನ್ನು ಬೋಧಿಸಿದ್ದಾರೆ. 
ಭಗವಂತನ ಹೆಸರಿನಲ್ಲಿ ಅನಿತಾ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ್ದು ಸಮಯ 3.23ಕ್ಕೆ ಸರಿಯಾಗಿ ಪ್ರಮಾಣವಚನ ನೆರವೇರಿತು.
ಪ್ರಮಾಣವಚನದ ಬಳಿಕ ಮಾತನಡಿದ ಶಾಸಕಿ ಅನಿತಾ ಕುಮಾರಸ್ವಾಮಿ "ನನ್ನನ್ನು ಶಾಸಕಾರನ್ನಾಗಿಸಿದ ರಾಮನಗರ ಜನತೆಗೆ ಧನ್ಯವಾದಗಳು. ಎರಡನೇ ಬಾರಿ ಶಾಸಕಿಯಾಗುತ್ತಿದ್ದೇನೆ.ರಾಮನಗರ ಜನತೆಯ ನಿರೀಕ್ಷೆಯಂತೆ ಕೆಲಸ ಮಾಡುವೆ" ಎಂದಿದ್ದಾರೆ.
ಇದೇ ವೇಳೆ ಸಚಿವರಾಗುವಿರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅನಿತಾ "ನನಗೆ ಸಚಿವ ಸ್ಥಾನ ಸಿಗುವ ಕುರಿತಂತೆ ಯಾವ ಸ್ಪಷ್ಟತೆ ಇಲ್ಲ. ಅದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ" ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಬೀದರ್ ನಲ್ಲಿ ರೈತ ಸಂವಾದ ಕಾರ್ಯಕ್ರಮದಲ್ಲಿರುವ ಕಾರಣ ಪತ್ನಿಯ ಪ್ರಮಾಣವಚನ ಸ್ವೀಕಾರಕ್ಕೆ ಹಾಜರಾಗಿರಲಿಲ್ಲ. ಕಾರ್ಯಕ್ರಮದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರಮುಖರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com