ಮುಳುವಾಯ್ತಾ ಜಾರಕಿಹೊಳಿ ಸಹೋದರರ ಜೊತೆಗಿನ ಗುದ್ದಾಟ!: ಅಧ್ಯಕ್ಷೆ ಸ್ಥಾನದಿಂದ 'ಲಕ್ಷ್ಮಿ' ಪಲ್ಲಟ?

ಬೆಳಗಾವಿಯ ಜಾರಕಿಹೊಳಿ ಸಹೋದರರ ಜೊತೆಗಿನ ಬಹಿರಂಗ ಸಮರ ಹಾಗೂ ಇತ್ತೀಚೆಗೆ ಬಿಜೆಪಿಯ 30 ಕೋಟಿ ರು ಆಫರ್ ಬಗ್ಗೆ ಬಹಿರಂಗ ಪಡಿಸಿದ್ದ ಕರ್ನಾಟಕ ...
ಲಕ್ಷ್ಮಿ ಹೆಬ್ಬಾಳ್ಕರ್
ಲಕ್ಷ್ಮಿ ಹೆಬ್ಬಾಳ್ಕರ್
Updated on
ಬೆಂಗಳೂರು: ಬೆಳಗಾವಿಯ ಜಾರಕಿಹೊಳಿ ಸಹೋದರರ ಜೊತೆಗಿನ ಬಹಿರಂಗ ಸಮರ ಹಾಗೂ ಇತ್ತೀಚೆಗೆ ಬಿಜೆಪಿಯ 30 ಕೋಟಿ ರು ಆಫರ್ ಬಗ್ಗೆ ಬಹಿರಂಗ ಪಡಿಸಿದ್ದ ಕರ್ನಾಟಕ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಶೀಘ್ರವೇ ತಮ್ಮ ಹುದ್ದೆ ಕಳೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿ ರಾಜಕೀಯದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಕೈಗೊಂಡ ನಿರ್ಧಾರಗಳಿಂದ ಅವರೇ ಸಮಸ್ಯೆಗಳನ್ನು ಆಹ್ವಾನಿಸಿಕೊಂಡಿದ್ದಾರೆ, ಆದರೆ ಅಧ್ಯಕ್ಷೆ ಹುದ್ದೆ ಬದಲಾವಣೆ ನಿಯಮಿತ ಕ್ರಮ ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ.
ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಇದು ಸಂಭವನೀಯ ಪ್ರಕ್ರಿಯೆ, ಪ್ರತಿ ಮೂರು ವರ್ಷಕ್ಕೊಮ್ಮೆ ಬದಲಾವಣೆಯಾಗುತ್ತಿರುತ್ತದೆ ಎಂದು ಹೇಳಿದ್ದಾರೆ, ಆದರೆ ಜಾರಕಿಹೊಳಿ ಸಹೋದರರ ಜೊತೆಗಿನ ಸಂಘರ್ಷವೇ ಇದಕ್ಕೆಲ್ಲಾ ಕಾರಣ ಎಂದು ಹೇಳಲಾಗಿದೆ
ಬೆಳಗಾವಿ ಗ್ರಾಮೀಣ ಶಾಸಕಿಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಐದೂವರೆ ವರ್ಷ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದರು, ಅದಾದ ನಂತರ 2015 ರಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕವಾಗಿದ್ದರು, ಶಾಸಕಿಯಾಗಿ ತಮ್ಮ ಕ್ಷೇತ್ರದ ಬಗ್ಗೆ ಹೆಚ್ಚಿನ ಸಮಯ ನೀಡುವ ಅವಶ್ಯಕತೆಯಿದೆ, ಹೀಗಾಗಿ  ತಮ್ಮ ಬದಲಾವಣೆ ಅನಿವಾರ್ಯ ಎಂದು ಹೇಳಿದ್ದಾರೆ.
ಕಳೆದ 11-12 ವರ್ಷದಿಂದ ಕಾಂಗ್ರೆಸ್ ಪದಾದಿಕಾರಿಯಾಗಿ  ಕೆಲಸ ಮಾಡಿದ್ದೇನೆ, ಸದ್ಯ ನಾನು ಶಾಸಕಿ, ನನ್ನ ಕ್ಷೇತ್ರ ಹಾಗೂ ಜನತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು,ಒಬ್ಬರು  ಬೆಳೆಯಬೇಕು, ಕೇವಲ ಒಬ್ಬ ವ್ಯಕ್ತಿ ಕುರ್ಚಿಯನ್ನು ಆಕ್ರಮಿಸಿಕೊಂಡಿರಬಾರದು ಎಂದು ಲಕ್ಷ್ನಿ ಹೇಳಿದ್ದಾರೆ,
ಲಕ್ಷ್ಮಿ ಹೆಬ್ಬಾಳ್ಕರ್ ಬದಲಾವಣೆಯಿಂದಾಗಿ ಬೆಳಗಾವಿ ಲಿಂಗಾಯತ ಸಮುದಾಯ ಸ್ವಲ್ಪ ವಿಚಲಿತವಾಗುವ ಸಾಧ್ಯತೆಯಿದೆ,  ಜಾರಕಿಹೊಳಿ ಸಹೋದರರ ಜೊತೆಗಿಮ ಘರ್ಷಣೆ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಹಂತಕ್ಕೂ ತಲುಪಿತ್ತು, ಇತ್ತೀಚೆಗೆ ನಡೆದ ಘಟನೆಗಳಿಗೂ ಇದಕ್ಕೂ ಸಂಬಂಧವಿಲ್ಲ, ಕಾಂಗ್ರೆಸ್ ತನ್ನ ತತ್ವಗಳನ್ನು ಹೊಂದಿದೆ, ಅವರು ಉತ್ತಮ ಕೆಲಸ ಮಾಡಿದ್ದರೂ ಅವರನ್ನು ಬದಲಾವಣೆ ಮಾಡಲಾಗುತ್ತಿದೆ, ಅವರ ವಿರುದ್ಧ ಲಾಬಿ ನಡೆಸಿದವರಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಲಕ್ಷ್ಮಿ ಹೆಬ್ಬಾಳ್ಕರ್ ಲಿಂಗಾಯತ ಸಮುದಾಯದ ಪ್ರಬಲ ನಾಯಕಿಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com