ರಮೀಳಾ ಉಮಾಶಂಕರ್ ನಿಧನ: ಉಪಮೇಯರ್ ಸ್ಥಾನಕ್ಕಾಗಿ ಲಾಬಿ; ಯಾರಿಗೊಲಿಯಲಿದ್ದಾಳೆ ಅದೃಷ್ಟ ಲಕ್ಷ್ಮಿ?

ಉಪ ಮೇಯರ್ ರಮೀಳಾ ಉಮಾಶಂಕರ್ ನಿಧನವಾಗಿ ಇನ್ನು ವಾರ ಕಳೆದಿಲ್ಲ, ಈಗಾಗಲೆ ಬಿಬಿಎಂಪಿ ಉಪ ಮೇಯರ್ ಹುದ್ದೆಗಾಗಿ ಲಾಬಿ ಆರಂಭಿಸಿದ್ದಾರೆ, ...
ರಮೀಳಾ ಉಮಾಶಂಕರ್
ರಮೀಳಾ ಉಮಾಶಂಕರ್
ಬೆಂಗಳೂರು: ಉಪ ಮೇಯರ್ ರಮೀಳಾ ಉಮಾಶಂಕರ್ ನಿಧನವಾಗಿ ಇನ್ನು ವಾರ ಕಳೆದಿಲ್ಲ, ಈಗಾಗಲೆ ಬಿಬಿಎಂಪಿ ಉಪ ಮೇಯರ್ ಹುದ್ದೆಗಾಗಿ ಲಾಬಿ ಆರಂಭಿಸಿದ್ದಾರೆ, ಜೆಡಿಎಸ್ ಆಕಾಂಕ್ಷಿಗಳಲ್ಲಿ ಉಪ ಮೇಯರ್ ಸ್ಥಾನಕ್ಕಾಗಿ ಭಾರೀ ಪ್ರಮಾಣದಲ್ಲಿ ಲಾಬಿ ಆರಂಭವಾಗಿದೆ, ಬಿಜೆಪಿ ಕೂಡ ಮತ್ತೆ ಅದೃಷ್ಟ ಪರೀಕ್ಷೆಗಿಳಿಯುವ ಸಾಧ್ಯತೆಯಿದೆ.
ಚುನಾವಣಾ ಸ್ಥಾಯಿ ಸಮಿತಿ ಸದಸ್ಯರ ಜೊತೆಯಲ್ಲಿ  ನವೆಂಬರ್ ತಿಂಗಳಲ್ಲಿ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ, ಈ ಸಂಬಂಧ ಬಿಬಿಎಂಪಿ ಆಯುಕ್ತ ಪ್ರಾದೇಶಿಕ ಚುನಾವಣಾ ಅಧಿಕಾರಿಗೆ ಮನವಿ ಮಾಡಿದ್ದಾರೆ.
ಶುಕ್ರವಾರ ಬೆಳಗ್ಗೆ ಜೆಡಿಎಸ್ ನ ಉಪ ಮೇಯರ್ ರಮೀಳಾ ಉಮಾಶಂಕರ್ ಹೃದಯಘಾತದಿಂದ ಸಾವನ್ನಪ್ಪಿದ್ದರು,  ಅವರು ಉಪಮೇಯರ್ ಆಗಿ ಅಧಿಕಾರ ಸ್ವೀಕರಿಸಿ ಕೇವಲ ಒಂದು ವಾರ ಮಾತ್ರ ಕಳೆದಿತ್ತು, ಈ ವರ್ಷ ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಸೇರಿದವರಿಗೆ ಮೀಸಲಾಗಿದ್ದರಿಂದ ಯಾರು ಬೇಕಾದರೂ ಉಪ ಮೇಯರ್ ಆಗಬಹುದಾಗಿದೆ.
2017-18 ರಲ್ಲಿ ರಮೀಳಾ ಅವರಿಗೆ ಅವಕಾಶ ತಪ್ಪಿತ್ತು. ಜೆಡಿಎಸ್ ನಿಂದ ಪದ್ಮಾವತಿ ನರಸಿಂಹ ಮೂರ್ತಿ ಆಯ್ಕೆಯಾಗಿದ್ದರು. ಆ ವೇಳೆ ಪಕ್ಷದ ಮುಖಂಡರು ರಮೀಳಾ ಅವರಿಗೆ ಮುಂದಿನ ಬಾರಿ ಅವಕಾಶ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಅದರಂತೆ ಈ ಬಾರಿ ಕೊಟ್ಟರು, ಆದರೆ ದುರಾದೃಷ್ಟ ವಶಾತ್ ಆಕೆ ಸಾವನ್ನಪ್ಪಿದರು,
ನಾವು 15 ಮಂದಿ  ಕೌನ್ಸಿಲರ್ ಗಳು ಇದ್ದೇವೆ, ಅದರಲ್ಲಿ ನಾಲ್ಕು ಮಂದಿ ಉಪ ಮೇಯರ್ ಆಗಿದ್ದಾರೆ, ಹೇಮಲತಾ ಗೋಪಾಲಯ್ಯ,  ಎಂ, ಆನಂದ್, ಪದ್ಮಾವತಿ ನರಸಿಂಹಮೂರ್ತಿ, ಮತ್ತು ರಮೀಳಾ,.
ಸಾಮಾನ್ಯ ವರ್ಗದವರಿಗೆ ಉಪಮೇಯರ್ ಸ್ಥಾನ ಮೀಸಲಾಗಿರುವುದರಿಂದ ಯಾವ ಕೌನ್ಸಿಲರ್ ಬೇಕಾದರೂ ಉಪ ಮೇಯರ್ ಆಗಬಹುದಾಗಿದೆ, ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ ಗೋಪಾಲಯ್ಯ  ನಾಗಪುರ ವಾರ್ಡ್ ನ ಭದ್ರೇಗೌಡ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನನ್ನ ಕ್ಷೇತ್ರದ ಒಭ್ಬರು ಉಪ ಮೇಯರ್ ಆಗಬೇಕೆಂದು ನಾನು ಬಯಸುತ್ತೇನೆ ಎಂದು ಗೋಪಾಲಯ್ಯ ಹೇಳಿದ್ದಾರೆ.
ಕಾವಲ್ ಬೈರಸಂದ್ರದ ನೇತ್ರ ನಾರಾಯಣಸ್ವಾಮಿ ಕೂಡ ರೇಸ್  ನಲ್ಲಿದ್ದಾರೆ, ಲಗ್ಗೆರೆಯ ಮಂಜುಳಾ ನಾರಾಯಣಸ್ವಾಮಿ ಹಾಗೂ ಬಿಟಿಎಂ ಲೇಔಟ್ ನ ಕೆ. ದೇವದಾಸ್ ಇತ್ತೀಚೆಗೆ ನಡೆದ ಉಪಮೇಯರ್ ಚುನಾವಣೆಯಲ್ಲಿ ರಮೀಳಾ ಅವರನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ಗೊಂಡು ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿದ್ದರು, ಆದರೆ ಕೊನೆ ಕ್ಷದಲ್ಲಿ ಬಿಜೆಪಿ ಹಿಂದೆ ಸರಿದ ಕಾರಣ  ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಅನಿವಾರ್ಯವಾಗಿ ಮತ ಹಾಕಿದ್ದರು. 
ಮತ್ತೊಮ್ಮೆ ಬಿಜೆಪಿ ಅದೃಷ್ಟ ಪರೀಕ್ಷೆಗಿಳಿಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಉಪಮೇಯರ್ ಚುನಾವಣೆಗೆ ಇನ್ನೂ ಸಮಯವಿದೆ, ಆಗ ನಿರ್ಧರಿಸಲಿದ್ದೇವೆ ಎಂದು ಬಿಜೆಪಿ ಕೌನ್ಸಿಲರ್ ಪದ್ಮನಾಭ ರೆಡ್ಡಿ ಹೇಳಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com