ಮಂಡ್ಯ: ದೇವೇಗೌಡ-ಸಿದ್ದರಾಮಯ್ಯ ಒಗ್ಗಟ್ಟಿಗೆ ಸಿಗುತ್ತಿಲ್ಲ ಕಿಮ್ಮತ್ತು

ಸಾರ್ವಜನಿಕವಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಒಗ್ಗಟ್ಟಿನಿಂದ ಇದ್ದೇವೆ ಎಂದು ಮಾಜಿ ...
ಹೆಚ್ ಡಿ ದೇವೇಗೌಡ, ಸಿದ್ದರಾಮಯ್ಯ
ಹೆಚ್ ಡಿ ದೇವೇಗೌಡ, ಸಿದ್ದರಾಮಯ್ಯ

ಮಂಡ್ಯ: ಸಾರ್ವಜನಿಕವಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಒಗ್ಗಟ್ಟಿನಿಂದ ಇದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸಾರಿದ್ದರೂ ಕೂಡ ಅವರ ಚರಿಷ್ಮಾ ಮಂಡ್ಯ ಜಿಲ್ಲೆಯಲ್ಲಿ ಎರಡೂ ಪಕ್ಷಗಳ ತಳಮಟ್ಟದ ಕಾರ್ಯಕರ್ತರನ್ನು ಒಟ್ಟುಮಾಡುವಲ್ಲಿ ವಿಫಲವಾಗಿದೆ.

ಮಂಡ್ಯ ಲೋಕಸಭೆ ಕ್ಷೇತ್ರದ ಉಪ ಚುನಾವಣೆಗೆ ಸಿದ್ದವಾಗಿದ್ದರೂ ಕೂಡ ತಳಮಟ್ಟದಲ್ಲಿ ಕೆಲಸ ನಡೆಯುತ್ತಿಲ್ಲ.

ಮಂಡ್ಯ ಜಿಲ್ಲೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಗೆ ಸ್ಪರ್ಧಿಸಲು ಸ್ಥಾನ ಬಿಟ್ಟುಕೊಟ್ಟಿದ್ದು, ಮಾಜಿ ಸಚಿವ ಎಂ ಎಸ್ ಆತ್ಮಾನಂದ, ಚಂದ್ರಶೇಖರ್ ಮತ್ತು ಡಿಸಿಸಿ ಅಧ್ಯಕ್ಷ ಸಿ ಡಿ ಗಂಗಾಧರ್ ಸೇರಿದಂತೆ ಕೆಲ ನಾಯಕರು ಮಂಡ್ಯದಲ್ಲಿ ಪ್ರಚಾರದ ವೇಳೆ ಜೆಡಿಎಸ್ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳುವುದಾಗಲಿ, ಪ್ರಚಾರಕ್ಕಾಗಲಿ ಬರಲಿಲ್ಲ. ಇದಕ್ಕೆ ಕಾರಣ ಸ್ಥಳೀಯ ಮಂಡ್ಯದಲ್ಲಿ ದಶಕಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮಧ್ಯೆ ಭಿನ್ನಾಭಿಪ್ರಾಯಗಳಿವೆ. ಬಿಜೆಪಿಯನ್ನು ಎದುರಿಸಿ ಸೋಲಿಸಲು ಒಟ್ಟಾಗಿ ಒಗ್ಗಟ್ಟಿನಿಂದ ಸೆಣಸುತ್ತಿದ್ದೇವೆ ಎಂದು ತೋರಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸೇರುವ ಸಾರ್ವಜನಿಕ ಸಭೆಗಳಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯ ಬಾವುಟವನ್ನು ಪ್ರದರ್ಶಿಸಿರುವುದು.

ಮಂಡ್ಯ ಜಿಲ್ಲೆಯ ಯಳಿಯೂರು ಕ್ರಾಸ್ ನಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಚರ್ಚಿಸುವ ರಾಜೇ ಗೌಡ ಎಂಬ ಸ್ಥಳೀಯ, ಪಕ್ಷದ ನಾಯಕರ ನಾಡಿಮಿಡಿತ ಅರ್ಥಮಾಡಿಕೊಳ್ಳುವಲ್ಲಿ ಮತ್ತು ಅವರ ಹಿತಾಸಕ್ತಿಗಳನ್ನು ರಕ್ಶಿಸುವಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿಫಲವಾಗಿದ್ದಾರೆ. ಇದರಿಂದ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಗೋಡೆ ಇನ್ನಷ್ಟು ಮುಚ್ಚಲಿದೆ. ಮಂಡ್ಯದಲ್ಲಿ ಈ ಹಿಂದೆ ಹಲವು ಚುನಾವಣೆಗಳನ್ನು ಗೆದ್ದ ಕಾಂಗ್ರೆಸ್ ಜೆಡಿಎಸ್ ಗೆ ಸೀಟು ಬಿಟ್ಟುಕೊಡುವ ಅನಿವಾರ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಬೆಂಬಲಿಗ ಸ್ವಾಮಿ ಎಂಬುವವರು, ತಾವು ಮತ ಚಲಾಯಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ನಾನು ಮತ ಚಲಾವಣೆಯಿಂದ ದೂರ ಉಳಿಯಬಹುದು ಆದರೆ ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎನ್ನುತ್ತಾರೆ.

ವಾಸ್ತವವಾಗಿ ಹೇಳಬೇಕೆಂದರೆ ಮಂಡ್ಯ ಜಿಲ್ಲೆಯ ಹಲವು ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಜೆಡಿಎಸ್ ಜೊತೆ ಸೇರುವುದು ಇಷ್ಟವಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಒಕ್ಕಲಿಗರು ಮತ್ತು ಶಾಸಕರ ಬೆಂಬಲದಿಂದ ಸುಲಭವಾಗಿ ಜಯ ಗಳಿಸಿದರೂ ಕೂಡ ಭವಿಷ್ಯದಲ್ಲಿ ಈ ಹೊಂದಾಣಿಕೆ ಕುರಿತು ನಾಯಕರು ಯೋಚಿಸಬೇಕಾಗಬಹುದು.
ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಪರ ಸಂಸದ ಡಿ ಕೆ ಸುರೇಶ್ ಪ್ರಚಾರ ಮಾಡುತ್ತಿದ್ದರೆ, ಮಾಜಿ ಸಚಿವ ಎನ್ ಚೆಲುವರಾಯಸ್ವಾಮಿ, ಪಿ ಎಂ ನರೇಂದ್ರ ಸ್ವಾಮಿ, ಮಾಜಿ ಶಾಸಕ ರಮೇಶ್ ಬಂಡಿಸಿದ್ದೆ ಗೌಡ ಪ್ರಚಾರ ಕಾರ್ಯಕ್ಕೆ ಇಳಿದಿಲ್ಲ.

ನಮ್ಮ ಕಾರ್ಯಕರ್ತರ ಮೇಲೆ ದಾಳಿ ನಡೆಸುವುದು, ಕಿರುಕುಳ ನೀಡುವುದು, ಅವಮಾನ ಮಾಡುವುದು ಇತ್ಯಾದಿ ಮಾಡಿದರೆ ನಾವು ಸಹಿಸಲು ಹೇಗೆ ಸಾಧ್ಯ? ಎಂದು ರಮೇಶ್ ಬಂಡಿಸಿದ್ದೇಗೌಡ ಅವರ ಬೆಂಬಲಿಗ ರವಿ ಕೇಳುತ್ತಾರೆ. ಇವೆನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ನಾಯಕರು ಚೆಲುವರಾಯಸ್ವಾಮಿ ಪರ ಘೋಷಣೆ ಕೂಗುತ್ತಿದ್ದು ಬಹಿರಂಗವಾಗಿ ಅವರನ್ನು ಶ್ಲಾಘಿಸುತ್ತಿದ್ದಾರೆ ಹಾಗೂ ಬಿಜೆಪಿ ಅಭ್ಯರ್ಥಿ ಡಾ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com