ಬದಲಾದ ರಾಜಕೀಯ ಸನ್ನಿವೇಶದಲ್ಲಿ 'ಕೈ' ಹಿಡಿದ ಜೆಡಿಎಸ್: ಕಾಂಗ್ರೆಸ್ ಗೆ ಅಹಿಂದ ವೋಟ್ ಬ್ಯಾಂಕ್ ಕಳೆದುಕೊಳ್ಳುವ ಭಯ!

ಮಂಡ್ಯ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷ ಜೆಡಿಎಸ್ ಅಭ್ಯರ್ಥಿ ಎಲ್ ಆರ್ ಶಿವರಾಮೆಗೌಡ ಪರ ಪ್ರಚಾರ ಮಾಡುವಂತೆ ಹೈಕಮಾಂಡ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷ ಜೆಡಿಎಸ್ ಅಭ್ಯರ್ಥಿ ಎಲ್ ಆರ್ ಶಿವರಾಮೆಗೌಡ ಪರ ಪ್ರಚಾರ ಮಾಡುವಂತೆ ಹೈಕಮಾಂಡ್ ಆದೇಶದಂತೆ ಕಾಂಗ್ರೆಸ್ ನಾಯಕರು  ಮತಯಾಚನೆ ಮಾಡುತ್ತಿದ್ದಾರೆ. 
2006ರಲ್ಲಿ  ಒಕ್ಕಲಿಗ ಪ್ರಾಬಲ್ಯವಿರುವ ಮಂಡ್ಯ ಕ್ಷೇತ್ರದಲ್ಲಿ ಅಹಿಂದ ಮತಗಳು ಏಕೀಕರಣಗೊಂಡಿದ್ದವು, 2009 ಮತ್ತು 2013 ರ ಚುನಾವಣೆಯಲ್ಲಿ ಅಹಿಂದ ಮತಗಳು ಕಾಂಗ್ರೆಸ್  ಪರವಾಗಿದ್ದವು, ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ರಮ್ಯ ಗೆಲ್ಲಲು ಅಹಿಂದ ಮತಗಳು ಮೂಲಕ ಕಾರಣವಾಗಿದ್ದವು.
ರಮ್ಯಾ ಮಂಡ್ಯ ತೊರೆದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಸಿದ್ದರಾಮಯ್ಯ ದೇವೇಗೌಡ ಜೊತೆ ಕೈ ಜೋಡಿಸಿದ್ದಾರೆ, ಹೀಗಾಗಿ ಅಹಿಂದ ತನ್ನ ಗಮನ ಕಳೆದುಕೊಂಡಿದೆ. ಇನ್ನೂ ಜೆಡಿಎಸ್ ಗೂ ಕೂಡ ಕುರುಬರು, ದಲಿತರು, ವಿಶ್ವಕರ್ಮ ಮತ್ತು ಬೆಸ್ತ , ನಾಯಕ ಹಾಗೂ ಕುರುಬ ಸೇರಿದಂತೆ ಮತ್ತಿತರರ ಸಮುದಾಯದ ಬೆಂಬಲ ಸಿಗಲಿದೆ.
ದೇವೇಗೌಡ ಮತ್ತು ಸಿದ್ದರಾಮಯ್ಯ ಮತ್ತೆ ಒಂದಾಗಿರುವ ಹಿನ್ನೆಲೆಯಲ್ಲಿ ಅಹಿಂದ  ಕಾಂಗ್ರೆಸ್ ಪಾಲಾಗುವುದಕ್ಕೆ ಯಾವುದೇ ಸೂಕ್ತ ಕಾರಣ ಸಿಗುತ್ತಿಲ್ಲ. ಅಹಿಂದ ಮತಗಳು ವಿಭಜನೆಯಾಗುತ್ತಿವೆ, ಕಾಂಗ್ರೆಸ್ ಕಾರ್ಯಕರ್ತರು ಮತಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗಿದೆ, 
ಉಪ ಚುನಾವಣೆಯಲ್ಲಿ ನಾವು ಜೆಡಿಎಸ್ ಜೊತೆ ಹೋಗುತ್ತಿಲ್ಲ, ಇದುವರೆಗೂ ಕಾಂಗ್ರೆಸ್ ಅಥವಾ ಜೆಡಿಎಸ್ ನಾಯಕರು ತಮ್ಮನ್ನು ಸಂಪರ್ಕಿಸಿಲ್ಲ, ಒಗ್ಗಟ್ಟಾಗಿದ್ದ ಮತದಾರರು ಈಗ ಪ್ರತ್ಯೇಕವಾಗಿದ್ದಾರೆ, ಮತ ವಿಭಜನೆಯಾಗಿರುವುದು ದುರಾದೃಷ್ಟ ಎಂದು ಹಿಂದುಳಿದ ವರ್ಗದ ಯುವಕ ವಸಂತ್ ಎಂಬುವರು ಹೇಳಿದ್ದಾರೆ.
ಕೆಲವು ಆಹಿಂದ ನಾಯಕರು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದಾರೆ., ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ಸಿ ಮಹಾದೇವಪ್ಪ ದಲಿತರ ಜೊತೆ ಸಭೆ ನಡೆಸಿದ್ದಾರೆ. 
ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಲಾಭ ಪಡೆದುಕೊಳ್ಳಲು ಬಿಜೆಪಿ ಸಿದ್ದವಾಗುತ್ತಿದೆ.  ಅಹಿಂದ ಮತಗಳು ತಮ್ಮ ಪರವಾಗಿ ಬರುವ ಸಾಧ್ಯತೆಗಳಿವೆ, 
ಹಿಂದುಳಿದ ವರ್ಗಗಳ ಮತ ಕಳೆದು ಕೊಳ್ಳುವ ಭಯದಲ್ಲಿರುವ ಜೆಡಿಎಸ್ ಹಿಂದುಳಿದ ವರ್ಗಗಳ ವಾಯಕರ ಜೊತೆ ಸಭೆ ನಡೆಸುವುದಾಗಿ ಎಲ್ ಆರ್ ಶಿವರಾಮೆಗೌಡ ಹೇಳಿದ್ದಾರೆ, ಅಹಿಂದ ಮತಗಳು ವಿಭಜಿಸುವುದು ಅಥವಾ ಸ್ಥಳಂತಾರ ಗೊಂಡು ಬಿಜೆಪಿಗೆ ಹೋದರೆ ಜೆಡಿಎಸ್ ಗೆ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com