ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ ದೇವೇಗೌಡ
ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ ದೇವೇಗೌಡ

ಉಪಚುನಾವಣೆಗಾಗಿ ಒಂದಾದ ಗುರು-ಶಿಷ್ಯ: ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ-ದೇವೇಗೌಡ!

ಕಳೆದ 12 ವರ್ಷಗಳಿಂದ ಬದ್ದ ರಾಜಕೀಯ ವೈರಿಗಳಾಗಿದ್ದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಬಳ್ಳಾರಿ ಲೋಕಸಭೆ ...
ಬಳ್ಳಾರಿ: ಕಳೆದ 12 ವರ್ಷಗಳಿಂದ ಬದ್ದ ರಾಜಕೀಯ ವೈರಿಗಳಾಗಿದ್ದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಬಳ್ಳಾರಿ ಲೋಕಸಭೆ ಉಪ ಚುನಾವಣೆಗಾಗಿ ಒಂದಾಗಿದ್ದಾರೆ, ಕಾಂಗ್ರೆಸ್ ಅಭ್ಯರ್ಥಿ ವಿ,ಎಸ್ ಉಗ್ರಪ್ಪ ಪರ ಇಬ್ಬರು ಒಗ್ಗೂಡಿ ಪ್ರಚಾರ ನಡೆಸಿದ್ದಾರೆ.
ಕೂಡ್ಲಿಗಿಯಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಸುಮಾರು 3,ಸಾವಿರ ಮಂದಿ ನೆರೆದಿದ್ದರು. ನವೆಂಬರ್ 3 ರಂದು ನಡೆಯುವ ಉಪ ಚುನಾವಣೆ ಪ್ರಚಾರಕ್ಕಾಗಿ ಕಾಂಗ್ರೆಸ್ ಜೆಡಿಎಸ್ ನಾಯಕರು ಭಾಗವಹಿಸಿದ್ದರು,. ಮಲ್ಲಿಕಾರ್ಜುನ ಖರ್ಗೆ, ಡಿ.ಕೆ ಶಿವಕುಮಾರ್, ಬಿ.ಕೆ ಹರಿಪ್ರಸಾದ್ ಮತ್ತು ಸತೀಶ್ ಜಾರಕಿಹೊಳಿ ಉಗ್ರಪ್ಪ ಪರ ಪ್ರಚಾರ ನಡೆಸಿದ್ದಾರೆ, 
ವೇದಿಕೆ ಮೇಲೆ ಇಬ್ಬರು ಪರಸ್ಪರ ಶುಭಾಶಯ ಹಂಚಿಕೊಂಡರು. ಜೊತೆಗೆ ಕೈ ಕುಲುಕಿದರು. ಒಟ್ಟಿಗೆ ಕುಳಿತುಕೊಂಡು ಉಭಯ ಕುಶಲೋಪರಿ ವಿಚಾರಿಸಿದರು, ಇಬ್ಬರೂ ಸೇರಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿದರು. ಅಲ್ಲದೆ ಉತ್ತಮ ಆಡಳಿತಕ್ಕೆ ಮೈತ್ರಿ ಪಕ್ಷಗಳ ಅಭ್ಯರ್ಥಿಯನ್ನು ಬೆಂಬಲಿಸಿ ಎಂದರು. 
ಸಭೆಯಲ್ಲಿ ಮಾತನಾಡಿದ ದೇವೇಗೌಡ "ರಾಜಕೀಯವಾಗಿ ಸಿದ್ದರಾಮಯ್ಯ ಹಾಗೂ ದೇವೇಗೌಡರು ಮೊದಲು ಹೊಡೆದಾಡಿದ್ದರೂ ಈಗೇನು ಒಂದೇ ವೇದಿಕೆಯಲ್ಲಿ ಸೇರಿಕೊಂಡಿದ್ದಾರೆ ಎಂದು ತಪ್ಪು ಭಾವಿಸಬೇಡಿ. ನನಗೆ ಪ್ರತಿಷ್ಠೆ ಇಲ್ಲ, ಈ ದೇಶದ ಭವಿಷ್ಯದ ದೃಷ್ಟಿಯಿಂದ ಜೊತೆಯಾಗಿದ್ದೇವೆ' ಎಂದರು. 
ಈ ಉಪ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆದ್ದರೆ ಹಿಂದೂಸ್ತಾನದ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ. ಈ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದ್ದು, ಕೇಂದ್ರದಲ್ಲಿಯೂ ಮುಂದೆ ಮೈತ್ರಿ ಸರ್ಕಾರವೇ ಆಡಳಿತ ನಡೆಸೋದು ಶತಸಿದ್ಧ ಎಂದರು.
ಸಿದ್ದರಾಮಯ್ಯ ಸರ್ಕಾರ 5 ವರ್ಷ ಜನಪರ ಕಾರ್ಯಕ್ರಮ ನೀಡಿದೆ. ಇದನ್ನು ಜನತೆ ಮರೆತಿಲ್ಲ. ಹೀಗಾಗಿ ಈ ಉಪಚುನಾವಣೆಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ಯೋಜನೆ ಹಾಗೂ ಸಾಧನೆಗಳನ್ನೇ ಮುಂದಿಟ್ಟು ಪ್ರಚಾರ ನಡೆಸಲಾಗುತ್ತಿದೆ. ನಾವು ಗೆಲ್ಲುತ್ತೇವೆಂಬ ವಿಶ್ವಾಸವಿದೆ ಎಂದರು.
ಇನ್ನೂ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಬಳ್ಳಾರಿ ಗಣಿ ಧಣಿ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು. ರೆಡ್ಡಿ ತಮ್ಮ ಹೇಳಿಕೆಯಲ್ಲಿ ತಾವು ಒಬ್ಬ ಸಂತ್ರಸ್ತ. ಸಿದ್ದರಾಮಯ್ಯ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ, ಅವರು ಲೋಕಾಯುಕ್ತ ವರದಿಯನ್ನು ಮರೆತಿದ್ದಾರೆಯೇ? ಅಕ್ರಮ ಗಣಿಗಾರಿಕೆ ಮಾಡದಿದ್ದರೇ ಅಷ್ಟೊಂದು ಪ್ರಮಾಣದ ಹಣ ಹೇಗೆ ಸಂಪಾದಿಸಿದರು,ಎಂದು ಪ್ರಶ್ನಿಸಿದ್ದಾರೆ.,
ಬಳ್ಳಾರಿ ಜನ 15 ವರ್ಷಗಳ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ, ಶಾಂತ ಅವರ ಸೋಲು ಖಚಿತವಾಗಿದ್ದು, ಉಗ್ರಪ್ಪ ಜಯಗಳಿಸಲಿದ್ದಾರೆ ಎದು ಭರವಸೆ ವ್ಯಕ್ತ ಪಡಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com