ಮಿಟೂ ಆರೋಪ ಬಂದರೆ ಅದನ್ನು ಎದುರಿಸುವ ಶಕ್ತಿ ಇದೆ: ಹೆಚ್ ಡಿ ಕುಮಾರಸ್ವಾಮಿ

ಶಾಸಕ ಕುಮಾರ್ ಬಂಗಾರಪ್ಪನವರ ಕೀಳು ಮಟ್ಟದ ಹೇಳಿಕೆಗೆ ಏಕೆ ಪ್ರತಿಕ್ರಿಯೆ ನೀಡಲಿ ಎಂದು ಸಿಎಂ ...
ಸಿಎಂ ಹೆಚ್ ಡಿ ಕುಮಾರಸ್ವಾಮಿ(ಸಂಗ್ರಹ ಚಿತ್ರ)
ಸಿಎಂ ಹೆಚ್ ಡಿ ಕುಮಾರಸ್ವಾಮಿ(ಸಂಗ್ರಹ ಚಿತ್ರ)

ಬೆಂಗಳೂರು: ಶಾಸಕ ಕುಮಾರ್ ಬಂಗಾರಪ್ಪನವರ ಕೀಳು ಮಟ್ಟದ ಹೇಳಿಕೆಗೆ ಏಕೆ ಪ್ರತಿಕ್ರಿಯೆ ನೀಡಲಿ ಎಂದು ಸಿಎಂ ಕುಮಾರಸ್ವಾಮಿ ಕೇಳಿದ್ದಾರೆ.

ನಿನ್ನೆ ಶಿವಮೊಗ್ಗದಲ್ಲಿ ಶಾಸಕ ಕುಮಾರ ಬಂಗಾರಪ್ಪ, ಮುಖ್ಯಮಂತ್ರಿಗಳೇ ನಿಮ್ಮ ಮೇಲೂ ಮಿಟೂ ಆರೋಪ ಕೇಳಿಬರಬಹುದು, ಎಚ್ಚರವಾಗಿರಿ, ರಾಧಿಕಾ ಕುಮಾರಸ್ವಾಮಿಯವರನ್ನು ನೀವು ಸಾರ್ವಜನಿಕವಾಗಿ ಪತ್ನಿ ಎಂದು ಏಕೆ ಒಪ್ಪಿಕೊಳ್ಳುತ್ತಿಲ್ಲ ಎಂದು ವೈಯಕ್ತಿಕವಾಗಿ ಟೀಕಿಸಿದ್ದರು.

ಈ ಬಗ್ಗೆ ಬೆಂಗಳೂರಿನಲ್ಲಿ ಸಿಎಂ ಬಳಿ ಪತ್ರಕರ್ತರು ಪ್ರಶ್ನೆ ಕೇಳಿದಾಗ, ಯಾಕ್ರೀ ಅದೆಲ್ಲ, ಯಾರ್ರೀ ಅದು, ಚುನಾವಣೆ ಟೈಮಲ್ಲಿ ಪರ್ಸನಲ್ ವಿಷಯ ಎಲ್ಲ ಯಾಕೆ, ಚುನಾವಣೆ ಬಗ್ಗೆ ಕೇಳಿ, ಮಾತನಾಡುತ್ತೇನೆ, ಯಾರೋ ಕೇಳಿದ್ದನ್ನು, ತೀರಾ ಖಾಸಗಿ ವಿಷಯಗಳನ್ನು ಚರ್ಚೆ ಮಾಡಲ್ಲ ಎಂದು ಗರಂ ಆಗಿಯೇ ಉತ್ತರ ಕೊಟ್ಟರು.

ಸುದ್ದಿಗಾರರು ಮತ್ತೆ ಕುಮಾರಸ್ವಾಮಿಯವರನ್ನು ಕೆಣಕಿದಾಗ, ನೋಡಿ, ನೀವು ಏನಾದ್ರು ಚುನಾವಣೆ ಬಗ್ಗೆ ರಾಜಕೀಯವಾಗಿ ಚರ್ಚೆ ಮಾಡಿ ಅಂದ್ರೆ ಚರ್ಚೆ ಮಾಡ್ತೇನೆ. ಚುನಾವಣೆ ವಿಷಯದಲ್ಲಿ ಬೇರೆ ಖಾಸಗಿ ವಿಷಯ ಮಾತನಾಡುವುದು ಅವರ ಕೀಳು ಮಟ್ಟದ ಅಭಿರುಚಿಯನ್ನು ತೋರಿಸುತ್ತದೆ, ಅದಕ್ಕೆ ನಾನು ಏಕೆ ಉತ್ತರ ಕೊಡಲಿ ಎಂದರು.

ಮಿಟೂ ಆರೋಪ ಬಂದರೆ ಏನು ಮಾಡ್ತೀರಿ ಎಂದು ಮತ್ತೆ ಸುದ್ದಿಗಾರರು ಕೇಳಿದರು. ಆಗ ಸಿಎಂ ಅಂತಹ ಆರೋಪಗಳನ್ನು ಬಂದರೆ ಅದನ್ನು ಎದುರಿಸುವ ಶಕ್ತಿ ಇದೆ, ನಾನು ಯಾವುದೇ ತಪ್ಪುಗಳು ಮಾಡದಿರುವುದರಿಂದ ಅದನ್ನು ಎದುರಿಸುವಂತಹ ಶಕ್ತಿ ಇದೆ, ಬೇರೆ ಏನಾದರೂ ವಿಷಯಗಳಿದ್ದರೆ ಚರ್ಚೆ ಮಾಡಿ ಎಂದು ವಿಷಯವನ್ನು ಕೊನೆಗೊಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com