ಲೋಕಸಭೆ ಚುನಾವಣೆ: ಜೆಡಿಎಸ್ ಜೊತೆ ಮೈತ್ರಿ ನಡುವೆಯೂ 28 ಕ್ಷೇತ್ರಗಳಲ್ಲಿ ಗೆಲ್ಲುವ ಕುದುರೆಗಾಗಿ 'ಕೈ' ಹುಡುಕಾಟ!

ಮುಂಬರುವ ಲೋಕಸಭೆ ಚುನಾವಣೆಗಾಗಿ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಜೆಡಿಎಸ್ ಜೊತೆಗಿನ ಮೈತ್ರಿ ನಡುವೆಯೂ ರಾಜ್ಯದ 28 ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳ ....
ಕೆ,ಸಿ ವೇಣುಗೋಪಾಲ್
ಕೆ,ಸಿ ವೇಣುಗೋಪಾಲ್
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗಾಗಿ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಜೆಡಿಎಸ್ ಜೊತೆಗಿನ ಮೈತ್ರಿ ನಡುವೆಯೂ ರಾಜ್ಯದ 28 ಕ್ಷೇತ್ರಗಳಲ್ಲಿ ಸೂಕ್ತ  ಅಭ್ಯರ್ಥಿಗಳ ಆಯ್ಕೆಗೆ ಹುಡುಕಾಟ ನಡೆಸಿದೆ.
ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿರುವ 2 ದಿನದ ಸಭೆಯಲ್ಲಿ  ಜಿಲ್ಲಾ ಮುಖಂಡರುಗಳು ಹಾಗೂ ಶಾಸಕರುಗಳ ಜೊತೆ  ಚರ್ಚೆ ನಡೆಸಿತು, 
ಎಐಸಿಸಿ ಪ್ರಧಾನ ಕಾರ್ಯದರ್ಶಿ,ಕೆ.ಸಿ ವೇಣುಗೋಪಾಲ್ ನೇತೃತ್ವದಲ್ಲಿ  ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ. ಡಿಸಿಎಂ ಜಿ.ಪರಮೇಶ್ವರ್,  ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು,  ಈ ವೇಳೆ ಹುಬ್ಬಳ್ಳಿ- ಧಾರವಾಡ, ಚಿತ್ರದುರ್ಗ,ಗದಗ-ಹಾವೇರಿ,  ಕೋಲಾರ ಮತ್ತು, ತುಮುಖೂರು ಜಿಲ್ಲಾ ಮುಖಂಡರುಗಳ ಜೊತೆ ಸರಣಿ ಸಭೆ ನಡೆಸಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲಾಯಿತು.
ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳು ಇನ್ನೂ ಸೀಟು ಹಂಚಿಕೆ ಬಗ್ಗೆ ಚರ್ಚಿಸಿಲ್ಲ,  ಹುಬ್ಬಳ್ಳಿಯಿಂದ ವಿನಯ್ ಕುಮಾರ್ ಕುಲಕರ್ಣಿಗೆ ಸೀಟು ನೀಡುವಂತೆ ಒತ್ತಾಯಿಸಲಾಗಿದೆ, ಜೊತೆಗೆ ಹಿಂದಳಿಹ ವರ್ಗಕ್ಕೇ ಸೇರಿದ, ಹಾಗೂ ಲಿಂಗಾಯತ ಸಮುದಾಯಕ್ಕೆ ಸೇರಿದವರಿಗೆ ಸೀಟು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ  ಶಿವಮೂರ್ತಿ ನಾಯಕ್ ಅವರಿಗೆ ಸೀಟು ನೀಡದಂತೆ ಹಿರಿಯ  ಕಾಂಗ್ರೆಸ್ ಮುಖಂಡ ಕೆ.ಎಸ್ ಬಸವರಾಜು ಆಗ್ರಹಿಸಿದ್ದಾರೆ..
ಮಾಜಿ ಸಚಿವ ಎಚ್.ಕೆ  ಪಾಟೀಲ್, ಅವರು ಕೂಡ ಲೋಕಸಭೆ ಚುನಾವಣಾ ಸೀಟಿನ ಆಕಾಂಕ್ಷಿಯಾಗಿದ್ದಾರೆ, ಜಿಲ್ಲಾ ನಾಯಕರುಗಳ ಅದೇಶವನ್ನು ಗಣನೆಗೆ ತೆಗೆದು ಕೊಂಡು ಎಂರಡು ಮೂರು ಹೆಸರಗಳನ್ನು ಫೈನಲ್ ಮಾಡಿ  ಹೈ ಕಮಾಂಡ್ ಗೆ ಕಳುಹಿಸಲಾಗುವುದು, ಅಲ್ಲಿಂದ ಫೈನಲ್ ಮಾಡುತ್ತಾರೆ ಎಂದು ಜಿ ಪರಮೇಶ್ವರ್ ತಿಳಿಸಿದ್ದಾರೆ,
ಸದ್ಯ ಹಾಲಿ ಇರುವ ಸಂಸದರಿಗೆ ಟಿಕೆಟ್ ಕೊಡುವ ಜೊತೆಗೆ ಗೆಲ್ಲುವ ಅಭ್ಯರ್ಥಿಗಳಿಗೆ ಸೀಟು ಕೊಡಲು ಕಾಂಗ್ರೆಸ್ ರಣ ತಂತ್ರ ಹೆಣೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com