ಹಳೇಯ ಮೈಸೂರು ಭಾಗದಲ್ಲಿ ಜೆಡಿಎಸ್ ವಿಜಯ ಯಾತ್ರೆ: ಕಾಂಗ್ರೆಸ್ ವೆಚ್ಚದಲ್ಲಿ ಬಿಜೆಪಿ ಗೆಲುವು!

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನ ವಿಜಯ ಯಾತ್ರೆ ಮುಂದುವರಿಸಿದೆ, ನಿನ್ನೆ ಹೊರಬಿದ್ದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದಲ್ಲಿ ಜೆಡಿಎಸ್ ಕಾಂಗ್ರೆಸ್ ಗೆ ಸೆಡ್ಡು ಹೊಡೆದಿದೆ.
ಕಾರ್ಯಕರ್ತರ ವಿಜಯೋತ್ಸವ
ಕಾರ್ಯಕರ್ತರ ವಿಜಯೋತ್ಸವ
ಮೈಸೂರು: ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನ ವಿಜಯ ಯಾತ್ರೆ ಮುಂದುವರಿಸಿದೆ, ನಿನ್ನೆ ಹೊರಬಿದ್ದ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದಲ್ಲಿ ಜೆಡಿಎಸ್ ಕಾಂಗ್ರೆಸ್ ಗೆ ಸೆಡ್ಡು ಹೊಡೆದಿದೆ.
ಬಿಜೆಪಿ ಕೂಡ ಹಿಂದೆ ಬೀಳದೆ ಈ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಪೆಟ್ಟು ನೀಡಿದೆ,  ರಾಜ್ಯ ಮಟ್ಟದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಗೆ ಕಾಂಗ್ರೆಸ್ ಬೆಲೆ ತೆತ್ತಿದೆ.ಆದರೂ ಕೆಲ ಕಡೆ ಕಾಂಗ್ರೆಸ್ ತನ್ನ ಹಿಡಿತ ಸಾಧಿಸಿದೆ.
ಮೈಸೂರು ಭಾಗದಲ್ಲಿ  ಜೆಡಿಎಸ್ ಪ್ರಬಲ ಪಕ್ಷವಾಗಿ ಹೊರ ಹೊಮ್ಮಿವೆ,  ಮಾಜಿ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರವಾದ ಮೈಸೂರಿನಲ್ಲಿ ಜೆಡಿಎಸ್ ಬಿಗಿ ಹಿಡಿತ ಸಾಧಿಸಿದೆ, ಚಾಮರಾಜನಗರ ಪುರಸಭೆಯಲ್ಲಿ ಗಣನೀಯವಾಗಿ ಫಲಿತಾಂಶ ಗಳಿಸಿದೆ, ಮಂಡ್ಯ ಮತ್ತು ಹಾಸನದಲ್ಲಿ ಹಿಂದಿನ ಚುನಾವಣೆಗಳಿಗಿಂತ ಈ ಭಾರಿ  ಉತ್ತಮ ಪ್ರದರ್ಶನ ನೀಡಿದೆ.
ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ಜೆಡಿಎಸ್ ಹಿಂದೆಂದಿಗಿಂತಲೂ ಹೆಚ್ಚಿನ ಸ್ಛಾನ ಗಳಿಸಿದೆ. ಮಧುಗಿರಿ ಹೊರತುಪಡಿಸಿ ಉಳಿದೆಲ್ಲಾ ಕಡೆ ಹೆಚ್ಚಿನ ಸ್ಥಾನ ಗಳಿಸಿದೆ,. ತುಮಕೂರು ಕಾರ್ಪೋರೇಷನ್ ನಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ. 
ಮೈಸೂರು, ಮತ್ತು ಹಾಸನಗಳಲ್ಲಿ ಬಿಜೆಪಿ ಪ್ರಧಾನ ವಿರೋಧ ಪಕ್ಷವಾಗಿ ಹೊರ ಹೊಮ್ಮಿದೆ, ಮೈಸೂರು ಸೇರಿದಂತೆ ಹಲವು ಕಡೆ ಕಾಂಗ್ರೆಸ್ ಅಧಿಕಾರಕ್ಕಾಗಿ ಜೆಡಿಎಸ್ ಮೇಲೆ ಅವಲಂಬಿತವಾಗಿದೆ. 
ಮಂಡ್ಯದಲ್ಲಿ 35 ಸೀಟುಗಳ ಪೈಕಿ ಜೆಡಿಎಸ್ 18 ರಲ್ಲಿ ಜಯಗಳಿಸಿದೆ. ಕಾಂಗ್ರೆಸ್ 10, ಬಿಜೆಪಿ 2 ಸ್ಥಾನ ಪಡೆದಿದೆ. 5 ಮಂದಿ ಸ್ವತಂತ್ರ್ಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.  ಪಾಂಡವಪುರದಲ್ಲಿ 23 ರಲ್ಲಿ 18 ಸ್ಥಾನ ಗೆಲ್ಲುವ ಮೂಲಕ ಜೆಡಿಎಸ್ ಕಾಂಗ್ರೆಸ್ ಅಧಿಕಾರ ಕಸಿದುಕೊಂಡಿದೆ, ಮದ್ದೂರಿನಲ್ಲಿ 23 ಸೀಟುಗಳಲ್ಲಿ 18 ರಲ್ಲಿ ಜೆಡಿಎಸ್ ಜಯಗಳಿಸಿದೆ, ಈ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲೂ ಬಿಜೆಪಿ ತನ್ನ ಖಾತೆ ತೆರೆದಿದೆ., 
ಮಾಜಿ ಸಚಿವ ಎನ್ ಚಲುವರಾಯ ಸ್ವಾಮಿ ತವರು ಕ್ಷೇತ್ರವಾದ ನಾಗಮಂಗಲದಲ್ಲಿ  ಜೆಡಿಎಸ್ 23 ರಲ್ಲಿ 12 ಸ್ಥಾನ ಗಳಿಸಿದೆ, ಬೆಳ್ಳೂರಿನಲ್ಲಿ ಕಾಂಗ್ರೆಸ್ ಜಯಗಳಿಸಿದೆ.
ಕೊಳ್ಳೇಗಾಲ ಮತ್ತು ಚಾಮರಾಜನಗರ ನಗರಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಎರಡೂ ಕ್ಷೇತ್ರಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಚಿವ ಪುಟ್ಟರಂಗ ಶೆಟ್ಟಿಗೆ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಚಾಮರಾಜನಗರ ನಗರಸಭೆಯ ಒಟ್ಟು 31 ವಾರ್ಡ್ ಗಳ ಪೈಕಿ ಬಿಜೆಪಿ 15  ವಾರ್ಡ್ ಗಳನ್ನು ಗೆಲ್ಲುವ ಮೂಲಕ ಅತೀದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಕಾಂಗ್ರೆಸ್ 8 ಸ್ಥಾನವನ್ನು ಪಡೆದಿದ್ದು, 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಉಳಿದಂತೆ ಎಸ್‍ಡಿಪಿಐ 6, ಬಿಎಸ್‍ಪಿ 1 ಮತ್ತು ಪಕ್ಷೇತರ ಇಬ್ಬರು ಅಭ್ಯರ್ಥಿಗಳು ಇಲ್ಲಿ ಜಯಗಳಿಸಿದ್ದಾರೆ. 15 ಸ್ಥಾನ ಗಳಿಸಿರುವ ಬಿಜೆಪಿಗೆ ಅಧಿಕಾರಕ್ಕೇರಲು ಇನ್ನೂ 1 ಸ್ಥಾನದ ಅವಶ್ಯಕತೆ ಇದೆ. 
ಕೊಳ್ಳೇಗಾಲ ನಗರಸಭೆಯ ಒಟ್ಟು 32 ಸ್ಥಾನಗಳ ಪೈಕಿ ಜೆಡಿಎಸ್ 18ರಲ್ಲಿ ಗೆಲುವಿನ ನಗೆ ಬೀರಿದೆ. ಜೆಡಿಎಸ್ ಗೆ ತೀವ್ರ ಪೈಪೋಟಿ ನೀಡಿದ ಬಿಜೆಪಿ 12 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಇನ್ನು ಇಲ್ಲಿ ಕಾಂಗ್ರೆಸ್ 2 ಸ್ಥಾನಗಳಿಗೆ ಮಾತ್ರ ತೃಪ್ತಿ ಪಟ್ಟುಕೊಂಡಿದೆ. 
ಹಳೇ ಮೈಸೂರು ಭಾಗದಲ್ಲಿ  ಕಾಂಗ್ರೆಸ್ ಸೋಲು ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದೆ. ಕಾಂಗ್ರೆಸ್ ಪರ ಮತಗಳನ್ನು ಬಿಜೆಪಿ ಕಸಿದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com