ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಗೆ ಸಹಾಯವಾಗಲಿಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ವರ್ಚಸ್ಸು!

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಭಾರೀ ...
ಸಿದ್ದರಾಮಯ್ಯ
ಸಿದ್ದರಾಮಯ್ಯ
ಮೈಸೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಭಾರೀ ಹಿನ್ನಡೆಯಾಗಿದೆ. ಮೈಸೂರು ನಗರ ಕಾರ್ಪೋರೇಷನ್ ಚುನಾವಣೆಯಲ್ಲಿ ಬಹುಮತ ಸಾಬೀತು ಪಡಿಸಲು  ವಿಫಲವಾಗಿದೆ.
ಕೇವಲ ಮ್ಯಾಜಿಕ್ ನಂಬರ್ ಪಡೆಯುವಲ್ಲಿ ಮಾತ್ರ  ಕಾಂಗ್ರೆಸ್ ವಿಫಲವಾಗಿಲ್ಲ, ಬಿಜೆಪಿ ಏಕೈಕ ಪ್ರಬಲ ವಿರೋಧ ಪಕ್ಷವಾಗಿ ಹೊರಬರಲು ಸಹಾಯವಾಗಿದೆ,. 65 ಸೀಟುಗಳಲ್ಲಿ  ಬಿಜೆಪಿ 22 ಪಡೆದಿದೆ ಕಾಂಗ್ರೆಸ್ 19 ಮತ್ತು ಜೆಡಿಎಸ್ 18 ಬಿಎಸ್ ಪಿ 1 ಹಾಗೂ 5 ಸ್ವತಂತ್ರ್ಯ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
ಕಾರ್ಪೋರೇಷನ್ ಸಿದ್ದರಾಮಯ್ಯ ಪ್ರತಿಷ್ಠೆಯ ವಿಷಯವಾಗಿತ್ತು, ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ  ಸೋಲನುಭವಿಸಿದ ಸಿದ್ದರಾಮಯ್ಯಗೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಪ್ರತಿಷ್ಠೆಯಾಗಿತ್ತು. ಪಕ್ಷದ ಮುಖಂಡರಿಗೆ ಆ ಮೂಲಕ ಸಮರ್ಥ ಸಂದೇಶ ನೀಡುವುದು ಬೇಕಾಗಿತ್ತು. ಜೊತೆಗೆ ತನ್ನ ಸಾಂಪ್ರಾದಾಯಿಕ ವಿರೋಧಿ ಜೆಡಿಎಸ್ ಗೂ ಕೂಡ ತಮ್ಮ ತೋಳ್ಬಲ ತೋರಿಸುವಲ್ಲಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಸೋಲಿನಿಂದ ಇನ್ನು ಹೊರಬಾರದ ಸಿದ್ದರಾಮಯ್ಯಗೆ ಮತ್ತೊಂದು ಹಿನ್ನಡೆಯಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಶಾಸಕರಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು, ಜೊತೆಗೆ ವಯಕ್ತಿಕವಾಗಿ ಸಿದ್ದರಾಮಯ್ಯ ಹಲವು ಸಭೆಗಳಲ್ಲಿ ಪಾಲ್ಗೊಂಡು ಖುದ್ದು ಹಾಜರಾಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ತಪ್ಪು ಮತ್ತೆ ಇಲ್ಲಿ ಮರು ಕಳಿಸದಂತೆ ನೋಡಿಕೊಳ್ಳಲು ಸಿದ್ಧರಾಗಿದ್ದರು, ಆದರೆ ಸ್ಥಳೀಯ ಸಮಸ್ಯೆ, ಜಾತಿ ಮುಂತಾದ ಹಲವು ಕಾರಣಗಳಿಂದಾಗಿ ಸಿದ್ದರಾಮಯ್ಯ ಅಹಿಂದ ಕಾರ್ಡ್ ಪ್ಲೇ ಮಾಡಲು ವಿಫಲರಾಗಿದ್ದಾರೆ,
ಕೃಷ್ಣ ರಾಜ ಕ್ಷೇತ್ರದ 20 ರಲ್ಲಿ 11 ಸೀಟುಗಳನ್ನು ಬಿಜೆಪಿ ಗೆದ್ದಿದೆ, ನರಸಿಂಹ ರಾಜ ಕ್ಷೇತ್ರದಲ್ಲಿ 23 ರಲ್ಲಿ 13 ಕಾಂಗ್ರೆಸ್ ಪಾಲಾಗಿದೆ. 
ಸ್ಥಳೀಯ ಸಂಸ್ಥೆ ಚುನಾವಣೆ ಸೋಲು ಸಿದ್ದರಾಮಯ್ಯ ವರ್ಚಸ್ಸಿಗೆ ಅತಿ ದೊಡ್ಡ ಹೊಡೆತ ನೀಡಿದೆ. ಅತಂತ್ರ ಜನಾದೇಶದಿಂದಾಗಿ ಮೈಸೂರಿನಲ್ಲಿ ಮತ್ತೆ ಕಾಂಗ್ರೆಸ್ ಜೆಡಿಎಸ್ ಜೊತೆ ದೋಸ್ತಿ ಬಯಸುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com