ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ: ದೋಸ್ತಿ ಪಕ್ಷಗಳ ಬಲ ಪ್ರದರ್ಶನ: ಬಿಜೆಪಿಯಲ್ಲಿ ತಲ್ಲಣ!

ಸೋಮವಾರ ಪ್ರಕಟವಾದ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಮುಂಬರುವ ಲೋಕಸಭೆ ಚುನಾವೆಣೆಯ ದಿಕ್ಸೂಚಿ ಎಂದು ರಾಜ್ಯದ ಮೂರು ಪ್ರಮುಖ ...
ದೋಸ್ತಿ ಪಕ್ಷಗಳ ಬಲ ಪ್ರದರ್ಶನ: ಬಿಜೆಪಿಯಲ್ಲಿ ತಲ್ಲಣ
ದೋಸ್ತಿ ಪಕ್ಷಗಳ ಬಲ ಪ್ರದರ್ಶನ: ಬಿಜೆಪಿಯಲ್ಲಿ ತಲ್ಲಣ
ಬೆಂಗಳೂರು: ಸೋಮವಾರ ಪ್ರಕಟವಾದ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಮುಂಬರುವ ಲೋಕಸಭೆ ಚುನಾವೆಣೆಯ ದಿಕ್ಸೂಚಿ ಎಂದು ರಾಜ್ಯದ ಮೂರು ಪ್ರಮುಖ ಪಕ್ಷಗಳು  ಪರಿಗಣಿಸಿಲ್ಲ. 2,662 ವಾರ್ಡ್ ಗಳಲ್ಲಿ ಕಾಂಗ್ರೆಸ್  982 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿ ಅತ್ಯಂತ ದೊಡ್ಡ ಪಕ್ಷವಾಗಿದೆ.
ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡ ಕಾರಣದಿಂದಾಗಿ ತಳಮಟ್ಟದಲ್ಲಿ ಪಕ್ಷ ಬಲಹೀನಗೊಳ್ಳುತ್ತಿದೆ ಎಂದು ಊಹಾ ಪೋಹಗಳನ್ನು ತಿರಸ್ಕರಿಸಿದೆ,.  ಸಾಂಪ್ರಾದಾಯಿಕವಲ್ಲದ ಕೆಲವು ಕ್ಷೇತ್ರಗಳಲ್ಲಿ  ಬಿಜೆಪಿ ತನ್ನ ಹೆಜ್ಜೆ ಗುರುತು ಮೂಡಿಸಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಈ ಫಲಿತಾಂಶ ಒಂದು ಪಾಠ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ದೋಸ್ತಿ ಪಕ್ಷಗಳನ್ನು ಬಿಜೆಪಿ ಸುಲಭವಾಗಿ ಪರಿಗಣಿಸುವಂತಿಲ್ಲ.
929 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ, 105 ಸ್ಥಳೀಯ ಸಂಸ್ಥೆ ಗಳಲ್ಲಿ 37 ರಲ್ಲಿ ಸ್ವತಂತ್ರ್ಯವಾಗಿ ಹಾಗೂ 12 ರಲ್ಲಿ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಬೇಕಾಗುತ್ತಾದೆ. 
31 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ್ಯವಾಗಿ ಅಧಿಕಾರ ಹೊಂದಬಹುದಾಗಿದೆ, 12 ರಲ್ಲಿ ಜೆಡಿಎಸ್ ಮುಂದಿದ್ದು, ಉಳಿದ ಸ್ಥಳೀಯ ಸಂಸ್ಥೆಗಳು ಅತಂತ್ರವಾಗಿವೆ, 
ಹಲವು ಸ್ಥಳಗಳಲ್ಲಿ ದೋಸ್ತಿ ಪಕ್ಷಗಳ ಫ್ರೆಂಡ್ಲಿ ಫೈಟ್ ನಿಂದ ಬಿಜೆಪಿಗೆ ನಷ್ಟವಾಗಿದೆ. ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಚುನಾವಣಾ ಪೂರ್ವ ಮೈತ್ರಿಯಿಂದ ಪ್ರಮುಖ ಪಾಠ ಕಲಿಯಬೇಕಿದೆ, ಜೊತೆಗೆ ರಾಜ್ಯ ಬಿಜೆಪಿ ಘಟಕದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಗೋಚರವಾಗುತ್ತಿದೆ ಎಂದು ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ ಹೇಳಿದ್ದಾರೆ.
ನಾವು ಒಟ್ಟಿಗೆ ಹೋರಾಡುವುದಿಲ್ಲ, ಬದಲಿಗೆ ನಮ್ಮ ಸಮ್ಮಿಶ್ರ ಸರ್ಕಾರದ ಧರ್ಮವನ್ನು ಪಾಲಿಸುತ್ತೇವೆ, ಜೊತೆಯಾಗಿ ಪ್ರಚಾರ ಮಾಡುವುದಿಲ್ಲ,  ಆದರೆ  ಒಬ್ಬರಿಗೆ ಇನ್ನೊಬ್ಬರು ಗೌರವ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com