ಸಿದ್ದರಾಮಯ್ಯ-ರಾಹುಲ್ ಗಾಂಧಿ
ರಾಜಕೀಯ
ಮಾಂಸ ತಿಂದು ಸಿದ್ದರಾಮಯ್ಯ ಮಂಜುನಾಥನ ದರ್ಶಿಸಿ ಅಧಿಕಾರ ಕಳೆದುಕೊಂಡ್ರು, ಇನ್ನು ರಾಹುಲ್ ಗಾಂಧಿ ಕತೆ!
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಂಸ ತಿಂದು ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದಿದ್ದರಿಂದಲೇ ಅಧಿಕಾರ ಕಳೆದುಕೊಂಡರು...
ವಿಜಯಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಂಸ ತಿಂದು ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದಿದ್ದರಿಂದಲೇ ಅಧಿಕಾರ ಕಳೆದುಕೊಂಡರು. ಇನ್ನು ಚಿಕನ್ ಸೂಪ್ ಕುಡಿದು ಮಾನಸ ಸರೋವರ ಯಾತ್ರೆ ನಡೆಸಿದ ರಾಹುಲ್ ಗಾಂಧಿ ಕತೆ ಏನಾಗಲಿದೆ ಎಂದು ಕಾದುನೋಡಿ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾನಸ ಸರೋವರ ಯಾತ್ರೆ ಕೈಗೊಂಡಿದ್ದರು. ಈ ವೇಳೆ ಅವರು ಚಿಕನ್ ಸೂಪ್ ಕುಡಿದು ಯಾತ್ರೆ ನಡೆಸಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಯಾವ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸನಗೌಡ ಅವರು ಮಾಂಸ ತಿನ್ನದೇ ಮಂಜುನಾಥನ ದರ್ಶನ ಮಾಡಿದ್ದರೆ, ಸಿದ್ದರಾಮಯ್ಯ ಅಧಿಕಾರದಲ್ಲಿ ಉಳಿಯುತ್ತಿದ್ದರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್ ಯಾವುದನ್ನು ಮಾಡಿದರೂ ಶ್ರದ್ಧೆಯಿಂದ ಮಾಡಲಿ ನಾಯಕೀಯವಾಗಿ ಮಾಡಬಾರದು ಎಂದರು.
ಇನ್ನು ರಾಜೀವ್ ಗಾಂಧಿ ಕೊಂದವರು ಮಾತ್ರ ದೇಶದ್ರೋಹಿಗಳು. ಮೋದಿ ಹತ್ಯೆಗೆ ಸಂಚು ನಡೆದರೂ ವಿರೋಧ ಪಕ್ಷದ ಯಾರೊಬ್ಬರಲ್ಲೂ ಈ ಬಗ್ಗೆ ಆತಂಕವಿಲ್ಲ. ಪ್ರಧಾನಮಂತ್ರಿ ಹುದ್ದೆ ಯಾವಾಗಲೂ ಒಂದೇ ಸ್ಥಾನಮಾನ ಹೊಂದಿರುತ್ತದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ