ಸರ್ಕಾರ ಉರುಳಿಸಲು ಬಿಜೆಪಿ ಹವಾಲ ಹಣ ಬಳಸುತ್ತಿದೆ: ಸಿಎಂ ಕುಮಾರಸ್ವಾಮಿ ಆರೋಪ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಹವಾಲ ದಂಧೆ ಹಣವನ್ನು ಬಳಸುತ್ತಿದ್ದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ...
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಹವಾಲ ದಂಧೆ ಹಣವನ್ನು ಬಳಸುತ್ತಿದ್ದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ವ್ಯರ್ಥ ಪ್ರಯತ್ನ ನಡೆಸುತ್ತಿದೆ. ಶಾಸಕರ ಖರೀದಿಗೆ ಹವಾಲ ದಂಧೆ ಹಣ ಬಳಸುತ್ತಿದೆ. ಇದಕ್ಕಾಗಿ ಬಿಜೆಪಿ ಯಾರನ್ನ ಬಳಸಿಕೊಳ್ಳುತ್ತಿದೆ. ಹಣ ಎಲ್ಲಿ ಸಂಗ್ರಹವಾಗಿದೆ. ಅದರ ಕಿಂಗ್ ಪಿನ್ ಯಾರು ಎನ್ನುವುದು ಗೊತ್ತಿದೆ. 
ಬಿಜೆಪಿಯ ಪ್ರಯತ್ನಗಳನ್ನು ನೋಡಿಕೊಂಡು ನಾನು ಸುಮ್ಮನೇ ಕೂರುವುದಿಲ್ಲ. ನಾನು ಸರ್ಕಾರ ಉಳಿಸಲು ಕಾನೂನು ದೃಷ್ಟಿಯಲ್ಲಿ ಯಾವ ಪ್ರಯತ್ನ ಮಾಡಬೇಕೊ ಅದನ್ನು ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. 
ಬಿಬಿಎಂಪಿ ಕಚೇರಿಗೆ ಬೆಂಕಿ ಹಾಕಿ ಕಡತ ಸುಟ್ಟವರು, ಕಾಫಿ ಎಸ್ಟೇಟ್ ಮಾರಿ ಸ್ವಂತ ಹೆಂಡತಿ ಮಕ್ಕಳಿಗೆ ಗುಂಡಿಟ್ಟು ಕೊಂದವರು, ಇಸ್ಪಿಟ್ ದಂಧೆ ನಡೆಸುತ್ತಿದ್ದವರು ಶಾಸಕರ ಖರೀದಿಯ ಕಿಂಗ್ ಪಿನ್ ಗಳಾಗಿದ್ದಾರೆ ಎಂದು ಪರೋಕ್ಷವಾಗಿ ಫೈಟರ್ ರವಿ, ಜಿಮ್ ಸೋಮು, ಉದಯ್ ಗೌಡ, ಹೊಂಬಾಳೆ ವಿಜಯ್ ಕಿರಗಂದೂರು ವಿರುದ್ಧ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. 
ಬಿಜೆಪಿಯವರು ಸದ್ಯ ಅಡ್ವಾನ್ಸ್ ಪೇಮೆಂಟ್ ಮಾಡುತ್ತಿದ್ದಾರೆ. ಅವರು ರೆಸಾರ್ಟ್ ಆದರೂ ಮಾಡಲಿ, ಗುಡಿಸಲಾದರೂ ಮಾಡಲಿ. ನನಗೂ ಬಿಜೆಪಿ ಶಾಸಕರ ಸಂಪರ್ಕ ಇದೆ. ಆದರೆ ಮೈಸೂರು ಭಾಗದ ಶಾಸಕರನ್ನು ಟಚ್ ಮಾಡಲು ಹೋಗುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com