ಜಾರಕಿಹೊಳಿ ಬ್ರದರ್ಸ್ ಬೇಡಿಕೆಗಳಿಗೆ ಸಿಎಂ ಕುಮಾರಸ್ವಾಮಿ ಬಹುತೇಕ ಒಪ್ಪಿಗೆ!

ಜಾರಕಿಹೊಳಿ ಸಹೋದರರು ಸಮ್ಮಿಶ್ರ ಸರ್ಕಾರದಲ್ಲಿ ಸೃಷ್ಟಿಸಿದ್ದ ರಾಜಕೀಯ ಬಿಕ್ಕಟ್ಟು ಸದ್ಯಕ್ಕೆ ಶಮನವಾದಂತೆ ಕಾಣುತ್ತಿದೆ. ಸಿಎಂ ಕುಮಾರ ಸ್ವಾಮಿ ಅವರ ಸಂಧಾನ ,....
ಕುಮಾರಸ್ವಾಮಿ ಮತ್ತು ರಮೇಶ್ ಜಾರಕಿಹೊಳಿ
ಕುಮಾರಸ್ವಾಮಿ ಮತ್ತು ರಮೇಶ್ ಜಾರಕಿಹೊಳಿ
ಬೆಂಗಳೂರು: ಜಾರಕಿಹೊಳಿ ಸಹೋದರರು ಸಮ್ಮಿಶ್ರ ಸರ್ಕಾರದಲ್ಲಿ ಸೃಷ್ಟಿಸಿದ್ದ ರಾಜಕೀಯ ಬಿಕ್ಕಟ್ಟು ಸದ್ಯಕ್ಕೆ ಶಮನವಾದಂತೆ ಕಾಣುತ್ತಿದೆ. ಸಿಎಂ ಕುಮಾರ ಸ್ವಾಮಿ ಅವರ ಸಂಧಾನ ಸಕ್ಸಸ್ ಆಗಿದ್ದು, ಭಿನ್ನಮತ ಸದ್ಯಕ್ಕೆ ಬಗೆಹರಿದಿದೆ ಎನ್ನಲಾಗಿದೆ.
ಇಂದು ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ಜಾರಕಿಹೊಳಿ ಸಹೋದರರನ್ನು ಸಿಎಂ ಕುಮಾರ ಸ್ವಾಮಿ ಭೇಟಿ ಮಾಡಿ ಸುಮಾರು 2 ಗಂಟೆಗಳ ಕಾಲ ಚರ್ಚೆ ನಡೆಸಿದರು. ಚರ್ಚೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಪ್ರಮುಖ ಬೇಡಿಕೆಗಳನ್ನಿಟ್ಟಿದ್ದು, ಅದಕ್ಕೆ ಕುಮಾರ ಸ್ವಾಮಿ ಸಮ್ಮಿತಿ ಸೂಚಿಸಿದ್ದಾರೆ ಎನ್ನಲಾಗಿದೆ.
ಸರ್ಕಾರದ ಮಟ್ಟದಲ್ಲಿ ಯಾವುದೇ ಕೆಲಸ ಆಗುತ್ತಿರಲಿಲ್ಲ, ಈಗ ಕೆಲಸ ಮಾಡಿಕೊಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಹೀಗಾಗಿ ಸಮಸ್ಯೆ ಬಗೆಹರಿದಿದೆ, ನಾವು ಯಾವ ರೆಸಾರ್ಟ್ ಗೂ ಹೋಗುವುದಿಲ್ಲ ಎಂದು  ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. 
ಜೊತೆಗೆ ನಮ್ಮಲ್ಲಿ ಒಬ್ಬರನ್ನು ಡಿಸಿಎಂ ಮಾಡಬೇಕು, ಬಳ್ಳಾರಿಯಿಂದ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಡಿ.ಕೆ ಶಿವಕುಮಾರ್ ಅವರು ಬಳ್ಳಾರಿ ರಾಜಕೀಯದಲ್ಲಿ ತಲೆ ಹಾಕದಂತೆ ನಿಯಂತ್ರಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ,
ಹೇಳಿದ ಅಧಿಕಾರಿಗಳ ವರ್ಗಾವಣೆ, ಪೌರಾಡಳಿತ ಇಲಾಖೆಗೆ ಹೆಚ್ಚಿನ ಅನುದಾನ ಹಾಗೂ ವಾಲ್ಮೀಕಿ ಸಮುದಾಯದವರಿಗೆ ಸಚಿವ ಸ್ಥಾನ ನೀಡಲು ಸಿಎಂ ಸಮ್ಮತಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ನಿಗದಿಯಂತೆ ನಾಳೆ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡುವುದಾಗಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸಿಎಂ ಕುಮಾರ ಸ್ವಾಮಿ ಭೇಟಿಯ ನಂತರ ಜಾರಕಿಹೊಳಿ ಸಹೋದರರು ಒಟ್ಟಿಗೆ ಒಂದೇ ಕಾರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನೆಗೆ ತೆರಳಿದ್ದಾರೆ.  ಜಾರಕಿಹೊಳಿ ಸಹೋದರರ ಭೇಟಿ ನಂತರ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com