'ಭೂ ಕಬಳಿಕೆ ವಿಷಯದಲ್ಲಿ ಎಚ್.ಡಿ ದೇವೇಗೌಡ ಮತ್ತವರ ಮಕ್ಕಳು ಪಿಎಚ್ ಡಿಗೆ ಅರ್ಹರು'

ಭೂ ಕಬಳಿಕೆ ವಿಷಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಕುಟಂಬ ಪಿಎಚ್‌ಡಿ ಗೆ ಅರ್ಹವಾಗಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ...
ಕುಮಾರಸ್ವಾಮಿ ಮತ್ತು ರೇವಣ್ಣ ಜೊತೆ ಎಚ್.ಡಿ ದೇವೇಗೌಡ
ಕುಮಾರಸ್ವಾಮಿ ಮತ್ತು ರೇವಣ್ಣ ಜೊತೆ ಎಚ್.ಡಿ ದೇವೇಗೌಡ
Updated on
ಬೆಂಗಳೂರು: ಭೂ ಕಬಳಿಕೆ ವಿಷಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಕುಟಂಬ ಪಿಎಚ್‌ಡಿ ಗೆ ಅರ್ಹವಾಗಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಲೇವಡಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುಟ್ಟಸ್ವಾಮಿ,  ಗೋವಿಂದ ಖಾರಜೋಳ, ಆರ್ ಅಶೋಕ್,  ಮ್ತು ಎನ್ ರವಿ ಕುಮಾರ್ ದೇವೇಗೌಡರ ಕುಟುಂಬದ ವಿರುದ್ಧ ಮಾಜಿ ಸಚಿವ ಎ.ಮಂಜು ಮಾಡಿದ ಭೂ ಹಗರಣ ಹಾಗೂ ಕುಮಾರಸ್ವಾಮಿ ವಿರುದ್ಧ ಈಗಾಗಲೇ ದಾಖಲಾಗಿರುವ ಪ್ರಕರಣಗಳ ಕಡತ ಪ್ರದರ್ಶನ ಮಾಡಿದರು.
ಭೂ ರಹಿತರು ಎಂದು ಘೋಷಿಸಿಕೊಂಡು ಹಾಸನದಲ್ಲಿ ದೇವೇಗೌಡರು ಹಾಗೂ ಅವರ ಪತ್ನಿ ಚನ್ನಮ್ಮ ಭೂ ಮಂಜೂರು ಮಾಡಿಸಿಕೊಂಡು ಅದನ್ನು ರೇವಣ್ಣ ಅವರಿಗೆ ವರ್ಗಾಯಿಸಿದ್ದಾರೆ. ಹಾಸನದ ಹೊಳೆನರಸಿಪುರದಲ್ಲಿ 82 ಎಕರೆ ಜಾಗವನ್ನು ಈ ರೀತಿ ಕಬಳಿಸಿದ್ದೀರಿ. ನಂತರ ಅದನ್ನು ಪ್ರಜ್ವಲ್ ರೇವಣ್ಣ ಹೆಸರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಜಂತಕಲ್ ಮೈನಿಂಗ್ ಪ್ರಕರಣದಲ್ಲಿ  40 ವರ್ಷಕ್ಕೆ ಪರವಾನಗಿ ನವೀಕರಣಗೊಳಿಸಲು ಕುಮಾರ ಸ್ವಾಮಿ ಅನುಮತಿ ನೀಡಿದ್ದಾರೆ, ಜಂತಕಲ್‌ ಮೈನಿಂಗ್‌ ಪ್ರಕರಣ ಸಂಬಂಧ ಭೂಗತ ಪಾತಕಿ ವಿನೋದ್‌ ಗೋಯಲ್‌ ಜತೆ ನೀವು ನಂಟಸ್ತಿಕೆ ಹೊಂದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com