ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ ೨ರಂದು ಜನಸಂಪರ್ಕ ಅಭಿಯಾನಕ್ಕೆ ಚಾಲನೆ ಸಿಗಲಿದ್ದು, ನವೆಂಬರ್ 19ಕ್ಕೆ ಅಭಿಯಾನ ಅಂತ್ಯಗೊಳ್ಳಲಿದೆ. ಮನೆಮನೆಗೆ ತೆರಳಿ ಚುನಾವಣೆಗೆ ದೇಣಿಗೆ ಸಂಗ್ರಹ, ಪ್ರತಿ ಬೂತ್ನಲ್ಲಿ ೧೦ ಸಾವಿರ ದೇಣಿಗೆ ಸಂಗ್ರಹಕ್ಕೆ ನಿರ್ಧರಿಸಲಾಗಿದ್ದು, ಒಟ್ಟು ದೇಣಿಗೆ ಸಂಗ್ರಹದಲ್ಲಿ ಶೇಕಡ 50 ರಷ್ಟು ಎಐಸಿಸಿಗೆ ಹೋಗಲಿದೆ. ಉಳಿದ ದೇಣಿಗೆ ಹಣ ಕೆಪಿಸಿಸಿ, ಜಿಲ್ಲಾ ಘಟಕ ಹಾಗೂ ಬ್ಲಾಕ್ ಗಳಿಗೆ ನೀಡಲಾಗುವುದು ಎಂದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.