ಭಿನ್ನಮತೀಯ ಶಾಸಕರ ಮೇಲೆ ಕಾಂಗ್ರೆಸ್ ಬ್ರಹ್ಮಾಸ್ತ್ರ?

ರಾಜ್ಯ ಕಾಂಗ್ರೆಸ್ ಭಿನ್ನಮತವನ್ನು ಸರಿದೂಗಿಸಲು ಕಾಂಗ್ರೆಸ್ ಹಿರಿಯ ನಾಯಕರು ನಿರ್ಧರಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬಂಡಾಯ ಶಾಸಕರಿಗೆ ಎಚ್ಚರಿಕೆ ..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಭಿನ್ನಮತವನ್ನು ಸರಿದೂಗಿಸಲು ಕಾಂಗ್ರೆಸ್ ಹಿರಿಯ ನಾಯಕರು ನಿರ್ಧರಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬಂಡಾಯ ಶಾಸಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ,
ಈ ಮೊದಲು ಭಿನ್ನಮತೀಯ ಶಾಸಕರನ್ನು ಓಲೈಸಲು ಮುಂದಾಗುತ್ತಿದ್ದ ನಾಯಕರು ಈಗ ಯಾವುದೇ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಬಗ್ಗುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. 
ವಿವಿಧ ತಂತ್ರಗಗಳನ್ನು ಬಳಸಿ ಬೆದರಿಕೆ ಒಡ್ಡುವ ಶಾಸಕರ ವಿರುದ್ಧ  ಎಐಸಿಸಿ ಪ್ರಧಾನ ಕಾರ್ಯದರ್ಶಿ ಬ್ರಹ್ಮಾಸ್ತ್ರ  ಪ್ರಯೋಗಕ್ಕೆ ಮುಂದಾಗಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಉಸ್ತುವಾರಿ ಕೆ,ಸಿ ವೇಣುಗೋಪಾಲ್ ಭಾನುವಾರ ಭಿನ್ನಮತೀಯ ಶಾಸಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ,
ಮಾಜಿ ಸಿಎಂ ಸಿದ್ದರಾಮಯ್ಯ ಈ ಭಿನ್ನ ಶಾಸಕರೊಂದಿಗೆ ಚರ್ಚಿಸಿದ್ದಾರೆ,ಹಾಗೇಯೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಸಂಧಾನ ನಡೆಸಿದ್ದಾರೆ.
ಸೋಮವಾರ ರಾತ್ರಿ ಸಿದ್ದರಾಮಯ್ಯ ಶಾಸಕ ಎಂಟಿಬಿ ನಾಗರಾಜ್ ಜೊತೆ ಚರ್ಚಿಸಿದ್ದಾರೆ, ಮಂಗಳವಾರ ಕೂಡ ಮಿಟಿಂಗ್ ಮುಂದುವರಿಯಲಿದೆ. ಈ ನಡುವೆ ಬಿಜೆಪಿ ತನ್ನ ಆಪರೇಷನ್ ಕಮಲ ಕೈ ಬಿಟ್ಟಿರುವುದು ಸದ್ಯದ ಮಟ್ಟಿಗೆ ಕಾಂಗ್ರೆಸ್ ನಿಟ್ಟುಸಿರು ಬಿಡುವಂತಾಗಿದೆ.
ಬೆಳಗಾವಿಯಲ್ಲಿ ತಲೆದೋರಿದ್ದ ಜಾರಕಿಹೊಳಿ ಸಹೋದರರ ಮನಸ್ತಾಪ ಹಾಗೂ ಬಂಡಾಯವನ್ನು ತಣ್ಣಗಾಗಿಸುವಲ್ಲಿ ಸದ್ಯಕ್ಕೆ ಯಶಸ್ವಿಯಾಗಿದ್ದಾರೆ,  ಆದರೆ ಈಗ ಮತ್ತೆ ಎದುರಾಗಿರುವ ಭಿನ್ನಮತಿಯ ಶಾಸಕರ ಮನವಿಗೆ ಓಗೊಡಬಾರದೆಂದು ವೇಣುಗೋಪಾಲ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಆದೇಶಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com