ಸಂಪುಟ ವಿಸ್ತರಣೆ ಮೂರನೇ ಬಾರಿ ಮುಂದೂಡಿಕೆ, ಪಿತೃಪಕ್ಷದ ನಂತರ ಎಂದ ಕಾಂಗ್ರೆಸ್!

ಸಂಪುಟ ವಿಸ್ತರಣೆಗಾಗಿ ಕಾಯುತ್ತಿದ್ದ ಕಾಂಗ್ರೆಸ್ ಶಾಸಕರಿಗೆ ಮತ್ತಷ್ಟು ನಿರಾಸೆಯಾಗಿದೆ, ಅಕ್ಟೋಬರ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ಮಾಡಲಾಗುವುದು ...
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಬೆಂಗಳೂರು: ಸಂಪುಟ ವಿಸ್ತರಣೆಗಾಗಿ ಕಾಯುತ್ತಿದ್ದ ಕಾಂಗ್ರೆಸ್ ಶಾಸಕರಿಗೆ ಮತ್ತಷ್ಟು ನಿರಾಸೆಯಾಗಿದೆ,  ಅಕ್ಟೋಬರ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ರಾಜ್ಯ ನಾಯಕರು ನೀಡಿರುವ ಹೇಳಿಕೆ ಆಕಾಂಕ್ಷಿಗಳಿಗೆ ತಣ್ಣಿರೆರಚಿದಂತಾಗಿದೆ.
ಸದ್ಯ ಪಿತೃಪಕ್ಷ ವಿದ್ದು ಅದಾದ ನಂತರ ಸಂಪುಟ ವಿಸ್ತರಮೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ, ಆ ಮೂಲಕ ಸಂಪುಟ ವಿಸ್ತರಣೆ ಮತ್ತೆ ಮೂರನೇ ಬಾರಿ ಮುಂದೂಡಿದಂತಾಗಿದೆ,. ಕಾಂಗ್ರೆಸ್ ನಲ್ಲಿ ಆರು ಸಚಿವ ಸ್ಥಾನ ಬಾಕಿ ಉಳಿದಿದೆ. 
ಕೇವಲ ಎಚ್.ಡಿ ರೇವಣ್ಣ ಮಾತ್ರವಲ್ಲ  ನಮ್ಮ ಪಕ್ಷದ ಇತರೇ ಶಾಸಕರು ಕೂಡ  ಜ್ಯೋತಿಷ್ಯ ನಂಬುತ್ತಾರೆ, ಹೀಗಾಗಿ ಅಕ್ಟೋಬರ್ ಮೊದಲ ವಾರದ ನಂತರ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕಳೆದ ವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ  ಸೆಪ್ಟಂಬರ್ ಕೊನೆಯ ವಾರದಲ್ಲಿ  ಮಾಡುವುದಾಗಿ ನಿರ್ಧರಿಸಿಲಾಗಿತ್ತು,  ಆದರೆ ವಿಧಾನ ಪರಿಷತ್ ಉಪಚುನಾವಣೆ ಕಾರಣ ಅಕ್ಟೋಬರ್ ಮೊದಲ ವಾರಕ್ಕೆ ಮುಂದೂಡಲಾಗಿದೆ. 
ನಿನ್ನೆ ತಮಿಳುನಾಡಿಗೆ ಭೇಟಿ ನೀಡಿದ್ದ ವೇಳೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಕೂಡ ಅಕ್ಟೊಬರ್ 10 ರ ನಂತರ ಸಂಪುಟ ವಿಸ್ತರಣೆಯಾಗುತ್ತದೆ ಎಂದು ಹೇಳಿದ್ದಾರೆ, ವಿಶೇಷವಾಗಿ ಕಾಂಗ್ರೆಸ್ ಶಾಸಕರು ಹೈಕಮಾಂಡ್ ಯಾರನ್ನು ಸಂಪುಟಕ್ಕೆ ಸೇರಿಸುತ್ತಾರೆ ಎಂಬ ಬಗ್ಗೆ ಕಾಯುತ್ತಿದ್ದಾರೆ.
ಎಂಬಿ ಪಾಟೀಲ್, ರಾಮಲಿಂಗಾರೆಡ್ಡಿ, ಎಚ್,ಕೆ ಪಾಟೀಲ್ ಮತ್ತು ರೋಷನ್ ಬೇಗ್  ಮುಂತಾದ ಹಿರಿಯ ನಾಯಕರು ಸಂಪುಟಕ್ಕೆ ಸೇರಲು ಕಾಯುತ್ತಿದ್ದಾರೆ, ಶಾಸಕರಾದ ಪರಮೇಶ್ವರ್ ನಾಯಕ್, ನಾಗೇಂದ್ರ ಮತ್ತು ಎಂಟಿಬಿ ನಾಗರಾಜ್ ಕೂಡ ಸಂಪುಟಕ್ಕೆ ಸೇರಲು ಲಾಬಿ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com