ಮೇಯರ್ ಚುನಾವಣೆ ವೈಫಲ್ಯ ಹಿನ್ನೆಲೆ: ಬೆಂಗಳೂರು ಘಟಕದ ಬಲವರ್ಧನೆಗೆ ಮುಂದಾದ ಬಿಜೆಪಿ

ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ವೈಫಲ್ಯ ಅನುಭವಿಸಿದ ಬಳಿಕ ಬಿಜೆಪಿ ತನ್ನ ಬೆಂಗಳೂರು ಘಟಕದ ಕಾರ್ಯವೈಖರಿಯ ಸಮೀಪ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ.
ಬೆಂಗಳೂರು ಬಿಜೆಪಿ ಕಛೇರಿ
ಬೆಂಗಳೂರು ಬಿಜೆಪಿ ಕಛೇರಿ
ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ವೈಫಲ್ಯ ಅನುಭವಿಸಿದ ಬಳಿಕ ಬಿಜೆಪಿ ತನ್ನ ಬೆಂಗಳೂರು ಘಟಕದ ಕಾರ್ಯವೈಖರಿಯ ಸಮೀಪ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ. 2019 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ನಗರ ಘಟಕವನ್ನು ಹೆಚ್ಚು ಕ್ರಿಯಾಶೀಲಗೊಳಿಸುವ, ಪುನರುಜ್ಜೀವಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿರುವ ಬಿಜೆಪಿ ವೈಫಲ್ಯಗಳನ್ನು ಹಿಂದಿಕ್ಕಿ ಹೊಸ ಕಾರ್ಯಕ್ರಮ ರೂಪಿಸಲು ಮುಂದಾಗಿದೆ.ಇದಕ್ಕಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಉನ್ನತ ನಾಯಕರು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ.
ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನ ಪಕ್ಷವು ಹೆಚ್ಚು ಹೆಚ್ಚು ನೈತಿಕ ಹೋರಾಟಗಳಿಂದ ಜನಸಾಮಾನ್ಯರ ಒಲವು ಗಳಿಸಿಕೊಳ್ಳಲು ತೀರ್ಮಾನಿಸಿದೆ.ಬೆಂಗಳೂರಿನಲ್ಲಿ ಬಿಜೆಪಿ ಬಲ 2008 ರಲ್ಲಿ 16ರಷ್ಟಿದ್ದದ್ದು  2013 ರಲ್ಲಿ 12 ಸ್ಥಾನಗಳಿಗೆ ಇಳಿದಿತ್ತು.ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳನ್ನು ಗೆದ್ದಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸವಾಲನ್ನು ಎದುರಿಸಲಿರುವ ಬಿಜೆಪಿ ರಾಜ್ಯ ರಾಜಧಾನಿಯಲ್ಲಿ ತನ್ನ ಘಟಕವನ್ನು ಇನ್ನಷ್ಟು ಬಲವರ್ಧನೆಗೊಳಿಸಲು ಉತ್ಸುಕವಾಗಿದೆ.
ಎಂಎಲ್ಸಿ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್ ಹೇಳಿದಂತೆ , "ನಾವು ಬೆಂಗಳೂರಿನಲ್ಲಿ ಪಕ್ಷವನ್ನು ಬಲಪಡಿಸುವ ಕ್ರಮಗಳನ್ನು ಜಾರಿಗೆ ತರಲಿದ್ದೇವೆ." ಎಂದಿದ್ದಾರೆ. ಇನ್ನು ಮೊನ್ನೆ ನಡೆದಿದ್ದ ಮೇಯರ್ ಚುನಾವಣೆ ಕುರಿತಂತೆ ಮಾತನಾಡಿದ ಕುಮಾರ್  "ಅಧಿಕಾರಿಗಳ ಪಕ್ಷಪಾತದ ವರ್ತನೆಯನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ಸದಸ್ಯರು ತಡವಾಗಿ ಆಗಮಿಸಿದ್ದರೂ ಅವರಿಗೆ ಮತ ಚಲಾಯಿಸಲು ಅವಕ್ಶಾಅ ನೀಡಲಾಯಿತು." ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com