ಬಿಜೆಪಿಯಲ್ಲಿ ಬೆಂಕಿ ಬಿದ್ದಿದೆ, ಇನ್ನಷ್ಟು ವ್ಯಾಪಿಸಲಿದೆ : ಎಚ್.ಎಂ. ರೇವಣ್ಣ
ಬೆಂಗಳೂರು: ಉಪ ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಬಿಜೆಪಿಯಲ್ಲಿ ಸದ್ಯ ಬೆಂಕಿ ಬಿದ್ದಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ವ್ಯಾಪಿಸಲಿದೆ ಎಂದು ಮಾಜಿ ಸಚಿವ ಹೆಚ್ ಎಂ ರೇವಣ್ಣ ಹೇಳಿದ್ದಾರೆ.
ಕಾವೇರಿ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಅಸಮಧಾನ ಸ್ಪೋಟವಾಗಿದೆ. ಉಮೇಶ್ ಕತ್ತಿ ಈಗಾಗಲೇ ಕತ್ತಿ ಮಸೆಯುತ್ತಿದ್ದಾರೆ. ಶ್ರೀರಾಮುಲು ಕ್ಯಾಬಿನೆಟ್ ಸೇರಿದಂತೆ ಯಾವ ಸಭೆಗೂ ಹೋಗುತ್ತಿಲ್ಲ. ಇವರ ಕಥೆ ಇದಾದರೆ ಇದೀಗ ಶಾಸಕರಾಗಿ ಆಯ್ಕೆಯಾಗಿರುವವರು ಅಧಿಕಾರ ಬೇಕು ಎಂದು ಬಿಗಿ ಪಟ್ಟು ಹಿಡಿದಿದ್ದಾರೆ. ಅಧಿಕಾರ ಸಿಗದಿದ್ದರೆ ಮತ್ತೆ ಅವರು ತಮ್ಮ ಕೆಲಸ ಪ್ರಾರಂಭಮಾಡುತ್ತಾರೆ ಎಂದರು.
ಹಳಬರಿಗೆ ಅವಕಾಶ ಮಾಡಕೊಂಡಬೇಕೆಂದು ಬಿಜೆಪಿ ವರಿಷ್ಠ ಬಿ.ಎಲ್. ಸಂತೋಷ್ ಹೇಳಿದ್ದಾರೆ. ತಕ್ಷಣಕ್ಕೆ ಏನೂ ಹೇಳಲು ಸಾಧ್ಯವಿಲ್ಲ. ಜನರ ಅಭಿಪ್ರಾಯಕ್ಕೆ ನಾವು ಮನ್ನಣೆ ಕೊಡುತ್ತೇವೆ. ವಿರೋಧ ಪಕ್ಷದ ಕೆಲಸವನ್ನು ನಾವು ಮಾಡುತ್ತೇವೆ. ತಕ್ಷಣಕ್ಕೆ ಕಾಂಗ್ರೆಸ್ ಸರ್ಕಾರ ರಚಿಸುವ ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಆರೋಗ್ಯವಾಗಿದ್ದು, ಲವಲವಿಕೆಯಿಂದ ಎಲ್ಲರನ್ನೂ ಮಾತನಾಡುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಅವರ ಭೇಟಿಗೆ ಜನ ಬರುತ್ತಿದ್ದಾರೆ. ಎಷ್ಟು ಅಗತ್ಯವೋ ಅಷ್ಟು ಮಾತನಾಡುತ್ತಿದ್ದಾರೆ. ವೈದ್ಯರು ಒಂದು ವಾರ ವಿಶ್ರಾಂತಿಗೆ ಸೂಚಿಸಿದ್ದಾರೆ. ಒತ್ತಡ ತೆಗೆದುಕೊಳ್ಳಬೇಡಿ ಎಂದು ಸೂಚಿಸಿದ್ದಾರೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ