ಭಾವುಕತೆ ನನ್ನ ರಕ್ತದಲ್ಲೇ ಇದೆ, ಜನರಿಗೆ ನನ್ನ ಬಗ್ಗೆ ಅನುಕಂಪವಿದೆ: ಸಿಎಂ ಕುಮಾರಸ್ವಾಮಿ

ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಸಮಸ್ಯೆಗಳು ದಿನದಿನಕ್ಕೂ ಹೆಚ್ಚುತ್ತಿದ್ದು, ಭಾವುಕರಾಗಿ ಒತ್ತಡವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹಿರಂಗವಾಗಿಯೇ ....
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
ಬೆಂಗಳೂರು: ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಸಮಸ್ಯೆಗಳು ದಿನದಿನಕ್ಕೂ ಹೆಚ್ಚುತ್ತಿದ್ದು, ಭಾವುಕರಾಗಿ ಒತ್ತಡವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದಾರೆ. 
ಭಾವುಕತೆ ಎಂಬುದು ನನ್ನ ರಕ್ತದಲ್ಲೇ ಇದೆ. ನನ್ನ ಬಗ್ಗೆ ಜನರಿಗೆ ಅನುಕಂಪ ಇದೆ ಎಂದು ಹೇಳಿದ್ದಾರೆ. ನೀವು ಈ ರೀತಿ ಭಾವುಕವಾಗಿ ವರ್ತಿಸುವ ಮೂಲಕ 'ದುರಂತ ನಾಯಕ' ಎನಿಸಿಕೊಳ್ಳಲು ಬಯಸುತ್ತೀರಾ ಹಾಗೂ ಜನರು ಇದನ್ನು ಒಪ್ಪಿಕೊಳ್ಳುತ್ತಾರಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ದುರಂತ ನಾಯಕರು ಯಶಸ್ವಿಯಾಗಿದ್ದಾರೆ. ನೀವು ಅದನ್ನು ಸಿನಿಮಾದಲ್ಲಿ ನೋಡಿರಬಹುದು ಎಂದು ಹೇಳಿದ್ದಾರೆ. 
ಭಾವುಕತೆ ನನ್ನ ದೌರ್ಬಲ್ಯ. ಅದು ನನ್ನ ರಕ್ತದಲ್ಲೇ ಇದೆ. ಅದರ ನಿಯಂತ್ರಣ ನನಗೆ ಬಹಳ ಕಷ್ಟ. ನನಗೆ ಜನರ ಅನುಕಂಪ ಸಿಕ್ಕಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. 
ಕಾಂಗ್ರೆಸ್ಸಿನಲ್ಲಿರುವ ಸಿದ್ದರಾಮಯ್ಯ ಅವರು ಕೆಲ ಬೆಂಬಲಿಗರು ಸಾರ್ವಜನಿಕವಾಗಿ, ಸಿದ್ದರಾಮಯ್ಯ ಅವರೇ ಈಗಲೂ ನಮ್ಮ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಅದರಿಂದ ಕುಮಾರಸ್ವಾಮಿ ಸಿಟ್ಟಾಗಿದ್ದರು. 
ಈ ರೀತಿ ಆದರೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ನಾನು ಸಿದ್ಧ ಎಂದು ಹೇಳಿದ್ದರು. ಕಳೆದ ವರ್ಷ ಜುಲೈನಲ್ಲಿ ಕಣ್ಣೀರಿಡುತ್ತಾ ಮಾತನಾಡಿದ್ದ ಕುಮಾರಸ್ವಾಮಿ, ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಸಂತೋಷವಾಗಿಯೇನೂ ಇಲ್ಲ. ವಿಷಕಂಠ (ಶಿವ)ನ ರೀತಿಯಲ್ಲಿ ವಿಷವನ್ನು ನುಂಗಿಕೊಂಡು ಈ ಸ್ಥಾನದಲ್ಲಿ ಇದ್ದೇನೆ ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com