ನರೇಂದ್ರ ಮೋದಿ ಮತ್ತೆ ಪಿಎಂ ಆಗುವುದನ್ನು ತಪ್ಪಿಸಲು ಹಿಡಿದಿರುವ ನೆಗೆಟಿವ್ ಹಾದಿ ಇದಾಗಿದೆ. ಮಹಾ ಘಟ್ ಬಂಧನ್ ಪ್ರಧಾನಿ ಹುದ್ದೆಯ ಪರ್ಯಾಯ ಹೆಸರಾಗಿದೆ,ತ ಪ್ರಾದೇಶಿಕ ಪಕ್ಷಗಳಿಗೆ ಇದರಿಂದ ಹಿನ್ನಡೆಯಾಗಲಿದೆ. ಮೋದಿ ವಿರೋಧಿಸುವವರು ಪರ್ಯಾಯ ನಾಯಕನ ಜೊತೆ ಬರಬೇಕು, ಇದು ಮೋದಿ V/S ಇತರ 20 ಮಂದಿಯಾಗಿದೆ, ಮುಖಂಡನಿಲ್ಲದ ಪಕ್ಷಗಳು ಬೇಕೇ ಅಥವಾ ಸಮರ್ಥ ನಾಯಕನಿರುವ ಬಿಜೆಪಿ ಬೇಕೆ ಎಂಬುದನ್ನು ಜನರು ನಿರ್ಧರಿಸಲಿದ್ದಾರೆ. ಚುನಾವಣೆ ನಂತರ ಪ್ರಧಾನಿ ಅಭ್ಯರ್ಥಿ ಆಯ್ಕೆ ಮಾಡುವುದಾಗಿ ಮಹಾಘಟಬಂಧನದ ನಾಯಕರು ಹೇಳುತ್ತಿದ್ದಾರೆ, ವಿಪಿ ಸಿಂಗ್, ಚರಣ್ ಸಿಂಗ್, ದೇವೇಗೌಡ ಹಾಗೂ ಗುಜ್ರಾಲ್ ಅವಧಿಯಲ್ಲಿ ಏನೇನು ನಡೆಯಿತು ಎಂಬುದನ್ನು ನಾವು ನೋಡಿದ್ದೇವೆ. ದೇಶಕ್ಕೆ ಸ್ಥಿರ ಸರ್ಕಾರ ಬೇಕು.