ನನಗೆ 'ಮಣ್ಣಿನ ಮಗ' ಬಿರುದು ಕೊಟ್ಟಿದ್ದು ಜನರು, ಸರ್ಕಾರ ಅಲ್ಲ; ಹೆಚ್ ಡಿ ದೇವೇಗೌಡ

ಮಣ್ಣಿನ ಮಗ ಎಂದು ತಮಗೆ ಜನತೆ ಕೊಟ್ಟ ಬಿರುದು, ಅದು ಸರ್ಕಾರ ಕೊಟ್ಟದ್ದಲ್ಲ...
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ
Updated on: 

ಹಾಸನ: ಮಣ್ಣಿನ ಮಗ ಎಂದು ತಮಗೆ ಜನತೆ ಕೊಟ್ಟ ಬಿರುದು, ಅದು ಸರ್ಕಾರ ಕೊಟ್ಟದ್ದಲ್ಲ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.

ನಿನ್ನೆ ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಲ್ಲಾ ಅಭಿವೃದ್ಧಿಯ ಕೆಲಸಗಳು ತಮ್ಮಿಂದಲೇ ಆಗಿದ್ದು ಎಂದು ಪ್ರಧಾನಿಯವರು ಮಾತನಾಡುವುದನ್ನು ನಿಲ್ಲಿಸಬೇಕು ಎಂದರು. ಅಲ್ಲದೆ ಸಂಸತ್ತು ಕಲಾಪದಲ್ಲಿ ಪ್ರಧಾನಿಯವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಬಜೆಟ್ ನಲ್ಲಿ ಮೈಸೂರು ಭಾಗ ನಿರ್ಲಕ್ಷ್ಯ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡಿಸಿರುವ ಬಜೆಟ್ ನಲ್ಲಿ ಮೈಸೂರು ಭಾಗವನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಎಸ್ ಎ ರಾಮದಾಸ್ ಆರೋಪಿಸಿದ್ದಾರೆ.

ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಲು ಘನತ್ಯಾಜ್ಯ ನಿರ್ವಹಣಾ ಘಟಕ ಮತ್ತು ಹಣ ಬೇಕೆಂದು ನಾವು ಕೇಳಿದ್ದೆವು. ಆದರೆ ಬಜೆಟ್ ನಲ್ಲಿ ಅದನ್ನು ಘೋಷಣೆ ಮಾಡಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com