ಮಂಡ್ಯ: ನಾಪತ್ತೆಯಾಗಿದ್ದ ಜೆಡಿಎಸ್ ಶಾಸಕ ದಿಢೀರ್ ಪ್ರತ್ಯಕ್ಷ!

ಕೆ. ಆರ್ . ಪೇಟೆ ಜೆಡಿಎಸ್ ಶಾಸಕ ನಾರಾಯಣ ಗೌಡ ಅಶ್ಚರ್ಯಕರ ರೀತಿಯಲ್ಲಿ ಮಂಡ್ಯದಲ್ಲಿ ನಿನ್ನೆ ಪ್ರತ್ಯಕ್ಷರಾಗಿದ್ದಾರೆ.
ನಾರಾಯಣಗೌಡ
ನಾರಾಯಣಗೌಡ
Updated on

ಮಂಡ್ಯ: ಕಳೆದೆರಡು ದಿನಗಳ ಹಿಂದೆ ಅನಾರೋಗ್ಯದ ನೆಪವೊಡ್ಡಿ ಮುಂಬೈಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ವಾಟ್ಸಾಪ್ ನಲ್ಲಿ  ವಿಡಿಯೋ ಸಂದೇಶ ಕಳುಹಿಸಿದ್ದ ಕೆ. ಆರ್ . ಪೇಟೆ  ಜೆಡಿಎಸ್ ಶಾಸಕ ನಾರಾಯಣ ಗೌಡ ಅಶ್ಚರ್ಯಕರ ರೀತಿಯಲ್ಲಿ ಮಂಡ್ಯದಲ್ಲಿ ನಿನ್ನೆ ಪ್ರತ್ಯಕ್ಷರಾಗಿದ್ದಾರೆ.

ಪೊಜಾ ಕಾರ್ಯಕ್ರಮವೊಂದರಲ್ಲಿ ನಾರಾಯಣಗೌಡ ಕಾಣಿಸಿಕೊಂಡಿದ್ದಾರೆ. ಕೆಲದಿನಗಳಿಂದ ನಾಪತ್ತೆಯಾಗಿದ್ದ  ನಾರಾಯಣಗೌಡ ಬಜೆಟ್ ಮಂಡನೆ ದಿನ ಸದನಕ್ಕೆ ಆಗಮಿಸುತ್ತಾರೆ ಎಂದು ಪಕ್ಷದ ವರಿಷ್ಠರು ಭರವಸೆ ವ್ಯಕ್ತಪಡಿಸಿದರಾದರೂ ಅವರು ಬಜೆಟ್  ಕಲಾಪಕ್ಕೂ  ಬಾರದೆ ದೂರ ಉಳಿದಿದ್ದರು.

ಕಳೆದ ನಾಲ್ಕು ದಿನಗಳಿಂದ ನಾರಾಯಣಗೌಡ ಯಾವುದೇ ಜೆಡಿಎಸ್ ನಾಯಕರ ಕೈಗೂ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಸಂಬಂಧಿಕರೊಬ್ಬರ ಪೂಜಾ ಕಾರ್ಯಕ್ರಮದಲ್ಲಿ ಅವರು ದಿಢೀರ್ ಪ್ರತ್ಯಕ್ಷರಾಗುತ್ತಿದ್ದಂತೆ  ಜೆಡಿಎಸ್ ಕಾರ್ಯಕರ್ತರು, ರಾಜಕೀಯ ಮುಖಂಡರು ಆಶ್ಚರ್ಯಗೊಂಡಿದ್ದಾರೆ.ನಂತರ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಅವರು ತೆರಳಿದ್ದಾರೆ.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಾರಾಯಣಗೌಡ, ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಚಿತ್ರ ಹಾಗೂ ವಿಡಿಯೋ ತೆಗೆಯದಂತೆ  ಮನವಿ ಮಾಡಿಕೊಂಡಿದ್ದಾರೆ. ಆದರೆ, ಬಜೆಟ್ ಅಧಿವೇಶನದಲ್ಲಿ ಏಕೆ ಪಾಲ್ಗೊಳ್ಳುತ್ತಿಲ್ಲ ಎಂಬುದರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com