3 ನಿಮಿಷಕ್ಕೆ ಹೀಗೆ... ಇನ್ನೂ ಪೂರ್ತಿ ಆಡಿಯೋ ಟೇಪ್ ರಿಲೀಸ್ ಮಾಡಿದ್ರೆ ಹೇಗೆ?

ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಬಿಎಸ್ ಯಡಿಯೂರಪ್ಪ, ಆಡಿಯೋ ನಕಲಿ ಎಂದು ಗೊತ್ತಿದ್ದರೂ ಮೋಸ ಮಾಡುವ ಉದ್ದೇಶದಿಂದ ಸತ್ಯ ಎಂದು ....
ಕುಮಾರಸ್ವಾಮಿ ಮತ್ತು ಯಡಿಯೂರಪ್ಪ
ಕುಮಾರಸ್ವಾಮಿ ಮತ್ತು ಯಡಿಯೂರಪ್ಪ
ಬೆಂಗಳೂರು: ಆಪರೇಷನ್ ಕಮಲದ ಆಡಿಯೋ ಪ್ರಕರಣ ಕುರಿತು ಮಂಗಳವಾರ ವಿಧಾನಸಭೆ ಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು. 
ಈ ವೇಳೆ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಬಿಎಸ್ ಯಡಿಯೂರಪ್ಪ, ಆಡಿಯೋ ನಕಲಿ ಎಂದು ಗೊತ್ತಿದ್ದರೂ ಮೋಸ ಮಾಡುವ ಉದ್ದೇಶದಿಂದ ಸತ್ಯ ಎಂದು ಬಿಂಬಿಸಿರುವ ಮುಖ್ಯಮಂತ್ರಿಯೇ ಮೊದಲ ಆರೋಪಿ ಎಂದು ಕಟುಕಿದರು.
ನಕಲಿ ಆಡಿಯೋ, ಆದನ್ನು ರಿಲೀಸ್ ಮಾಡಿದ್ದು, ತಪ್ಪು ದಾಖಲೆ ನೀಡಿರುವುದು ಐಪಿಸಿ ಸೆಕ್ಷನ್ ಅಡಿಯಲ್ಲಿ ಬರುತ್ತದೆ. ಎಸ್ ಐ ಟಿ ಮುಖ್ಯಮಂತ್ರಿಗಳ ಅಧೀನದಲ್ಲಿ ಬರುತ್ತದೆ, ಈ ಏಜೆನ್ಸಿಯಿಂದ ನಿಷ್ಪಕ್ಷಪಾತ ತನಿಖೆ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು, ಸದನದಲ್ಲಿ ಈ ವಿಷಯವನ್ನು ಚರ್ಚಿಸುವ ಮುನ್ನ ಸ್ಪೀಕರ್ ರಮೇಶ್ ಕುಮಾರ್, ಎರಡು ಪಕ್ಷಗಳ ಸದಸ್ಯರ ಸಭೆಕರೆದು ಚರ್ಚಿಸಬೇಕಿತ್ತು ಎಂದು ಹೇಳಿದ್ದಾರೆ.,
ಯಡಿಯೂರಪ್ಪ ಅವರೇ ಆರೋಪಿ ಎಂದು ಒಪ್ಪಿಕೊಂಡಿದ್ದಾಗಿದೆ, ಹೀಗಾಗಿ ತನಿಖೆ ಅತ್ಯಗತ್ಯ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ, ಕೇವಲ 3-4 ನಿಮಿಷದ ಆಡಿಯೋ ಕ್ಲಿಪ್ ಗೆ ಈ ರೀತಿ ಚಡಪಡಿಸುತ್ತಿದ್ದೀರಿ, ಇನ್ನೂ ಪೂರ್ತಿ ಆಡಿಯೋ ರಿಲೀಸ್ ಮಾಡಿದರೇ ಹೇಗೆ ಎಂದು ಸಿಎಂ ಪ್ರಶ್ನಿಸಿದ್ದಾರೆ, 
ಇನ್ನೂ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಅವರ ಬಗ್ಗೆ ಮಾತನಾಡಿದ ಸಿಎಂ ನಾನು ಅವರ ಬಗ್ಗೆ ವಿಷಾಧ ವ್ಯಕ್ತ ಪಡಿಸುತ್ತೇನೆ, ಕಾಂಗ್ರೆಸ್ ನಲ್ಲಿದ್ದರೂ ಸಚಿವರಾಗಲಿಲ್ಲ, ಆನಂತರ ಬಿಜೆಪಿ ಸೇರಿಕೊಂಡರು ಅಂದಿನಿಂದ ಇಂದಿನವರೆಗೂ ಶಾಸಕರಾಗಿಯೇ ಉಳಿದಿದ್ದಾರೆ, ಅವರಿಗೆ ನಾನು ಹಣದ ಆಫರ್ ನೀಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com