ಮೈಸೂರು ಜಿಲ್ಲಾ ಪಂಚಾಯಿತಿ ಜೆಡಿಎಸ್ ತೆಕ್ಕೆಗೆ: ಅಧ್ಯಕ್ಷರಾಗಿ ಪರಿಮಳಾ ಶ್ಯಾಮ್ ಅವಿರೋಧ ಆಯ್ಕೆ

ಅಂತರಸಂತೆ ಕ್ಷೇತ್ರದ ಜೆಡಿಎಸ್ ಸದಸ್ಯೆಯಾಗಿರುವ ಪರಿಮಳಾ ಶ್ಯಾಮ್ ವಿರುದ್ಧವಾಗಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ...
ಜೆಡಿಎಸ್ ಲೋಗೋ
ಜೆಡಿಎಸ್ ಲೋಗೋ
ಮೈಸೂರು: ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಜೆಡಿಎಸ್ ನ ಪರಿಮಳಾ ಶ್ಯಾಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ  ಸ್ಥಾನದ ಚುನವಾಣೆಗೆ ಪರಿಮಳಾ ಶ್ಯಾಮ್ ಬಿಟ್ಟರೇ ಬೇರಾರು ನಾಮಪತ್ರ ಸಲ್ಲಿಸಿರಲಿಲ್ಲ, ಅಂತರಸಂತೆ ಕ್ಷೇತ್ರದ ಜೆಡಿಎಸ್ ಸದಸ್ಯೆಯಾಗಿರುವ ಪರಿಮಳಾ ಶ್ಯಾಮ್ ವಿರುದ್ಧವಾಗಿ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಲಿದ್ದು, ಮೈತ್ರಿ ಲೆಕ್ಕದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಮೈಸೂರು ಜಿಲ್ಲಾ ಪಂಚಾಯತ್‍ನಲ್ಲಿ ಒಟ್ಟು 49 ಸ್ಥಾನಗಳಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ 22, ಜೆಡಿಎಸ್ 18, ಬಿಜೆಪಿ 8 ಹಾಗೂ ಪಕ್ಷೇತರ 1 ಸ್ಥಾನ ಗಳಿಸಿದೆ. ಶಾಸಕ ಅನಿಲ್ ಚಿಕ್ಕಮಾದುವಿಂದ ತೆರವಾದ ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಚುನಾವಣೆ ನಂತರ ಕಾಂಗ್ರೆಸ್ಸಿನ 3 ಸದಸ್ಯರು ಜೆಡಿಎಸ್ ಬೆಂಬಲಿಸಿದ್ದರಿಂದ ಜೆಡಿಎಸ್ 20 ಸ್ಥಾನ ಹಾಗೂ ಕಾಂಗ್ರೆಸ್ 20 ಸ್ಥಾನ ಗಳಿಸಿದೆ.
ಮೀಸಲಾತಿ ಅಭ್ಯರ್ಥಿ ಇಲ್ಲದ ಕಾರಣ ಅಧ್ಯಕ್ಷ ಸ್ಥಾನದಿಂದ ಬಿಜೆಪಿ ದೂರ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್‍ನ ಪರಿಮಳಾ ಶ್ಯಾಮ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸದ್ಯ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಬಿಜೆಪಿ ನಾಮಪತ್ರ ಸಲ್ಲಿಸಿದೆ.
ಪರಿಮಳಾ ಶ್ಯಾಮ್ ಅಧ್ಯಕ್ಷ ಸ್ಥಾನದ ಏಕೈಕ ಆಕಾಂಕ್ಷಿಯಾಗಿದ್ದು, ಚುನಾವಣಾಧಿಕಾರಿ ರೂಪಾ ಅವರಿಗೆ ಪರಿಮಳಾ ಶ್ಯಾಮ್ ಅವರು ನಾಮಪತ್ರ ಸಲ್ಲಿಸಿದ್ದರು. ಆದ್ದರಿಂದ ಹಿಂದುಳಿದ ವರ್ಗ(ಮಹಿಳೆ)ಗೆ ಮೀಸಲಾಗಿರುವ ಸ್ಥಾನವನ್ನು ಅವರು ಪಡೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com