ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಏಳ್ಳುನೀರು? ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಹೋರಾಟ!

ಜೆಡಿಎಸ್ ಸರ್ವೋಚ್ಚ ನಾಯಕ ದೇವೇಗೌಡ ಸೀಟು ಹಂಚಿಕೆ ಸಂಬಂಧ ನೀಡುತ್ತಿರುವ ಹೇಳಿಕೆಗಳು ಈ ಅನುಮಾನಕ್ಕೆ ಕಾರಣವಾಗಿದೆ,..
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ
ಬೆಂಗಳೂರು: ನಿನ್ನೆಯವರೆಗೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧೆ ನಡೆಸಲು ನಿರ್ಧರಿಸಿದ್ದ ರಾಜ್ಯ ಮೈತ್ರಿ ಸರ್ಕಾರ ದೋಸ್ತಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೀಗಾಗಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ದಿಸುವ ಸುಳಿವು ನೀಡಿದೆ.
ಜೆಡಿಎಸ್ ಸರ್ವೋಚ್ಚ ನಾಯಕ ದೇವೇಗೌಡ ಸೀಟು ಹಂಚಿಕೆ ಸಂಬಂಧ ನೀಡುತ್ತಿರುವ ಹೇಳಿಕೆಗಳು ಈ ಅನುಮಾನಕ್ಕೆ ಕಾರಣವಾಗಿದೆ, ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಜೆಡಿಎಸ್ ಶಾಸಕ ಶರವಣ . ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ದಿಸಲಾಗುವುದು ಎಂದು ಹೇಳಿದ್ದಾರೆ.
ಈ ಸಂಬಂಧ ಎರಡು ಪಕ್ಷಗಳ ಮುಖಂಡರು  ಚರ್ಚಿಸಿ ನಂತರ ಮುಂದುವರೆಯುವುದಾಗಿ ಹೇಳಿದ್ದಾರೆ.  ಹೀಗಾಗಿ ಜೆಡಿಎಸ್ ಸರ್ವೋಚ್ಚ ನಾಯಕ ಎಚ್,ಡಿ ದೇವಗೌಡ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಜೆಡಿಎಸ್ ಸುಮಾರು 10 ಸೀಟುಗಳನ್ನು ಗೆಲ್ಲಲಿದೆ ಎಂದು ಶರವಣ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ,  ಒಂದು ವೇಳೆ ಕಾಂಗ್ರೆಸ್  ಸೀಟು ಹಂಚಿಕೆಯಲ್ಲಿ ತಗಾದೆ ತೆಗೆದರೇ ಜೆಡಿಎಸ್ ಗೆ ಏಕಾಂಗಿಯಾಗಿ ಸ್ಪರ್ದಿಸುವ  ಆಯ್ಕೆ ಇದೆ ಎಂದು ಹೇಳಿದ್ದಾರೆ,
ತಮ್ಮ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಷರತ್ತು ರಹಿತ ಬೆಂಬಲ ನೀಡುವುದಾಗಿ ಹೇಳಿದೆ.  ಆದರೆ ಕಾಂಗ್ರೆಸ್ ನಮ್ಮ ಪಕ್ಷಕ್ಕೆ ಸಿಎಂ ಹುದ್ದೆ ನೀಡಿದೆ ಹೀಗಾಗಿ ಅವರು ಹೇಳಿದ ಹಾಗೆ ಕೇಳುವುದು ಅನಿವಾರ್ಯ ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದ್ದಾರೆ. 
ಕಾಂಗ್ರೆಸ್ ನಾಯಕರು ಜೆಡಿಎಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಸಂಬಂಧ ಯೋಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಜೆಡಿಎಸ್ ನಾಯಕರು ತಿಳಿಸಿದ್ದಾರೆ.
ಸೀಟು ಹಂಚಿಕೆ ಬಗ್ಗೆ ಕಾಂಗ್ರೆಸ್ ಮೇಲೆ ದೇವೇಗೌಡರು ಒತ್ತಡ ಹೇರುತ್ತಿದ್ದಾರೆ. ಆದರೆ ಕಾಂಗ್ರೆಸ್ ನಮ್ಮ ಆಸೆಗಳಿಗೆ ಕಾಂಗ್ರೆಸ್  ಬೆಲೆ ನೀಡದಿದ್ದರೇ  ಮುಂದಿನ ನಿರ್ಧಾರದ ಬಗ್ಗೆ ಯೋಚಿಸುತ್ತೇವೆ ಎಂದು ಶರವಣ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com