ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡಿದ್ದು ಮನೆ ಮುರುಕತನ ಅಲ್ಲವೇ ಸಿದ್ದರಾಮಯ್ಯನವರೇ: ರವಿ

ಹೊಟ್ಟೆಯೊಳಗೆ ವಿಷ ಇಟ್ಟುಕೊಂಡು ಅಧಿಕಾರ ನಡೆಸಿದ ಹೀಗೆ ಆಗುತ್ತೆ. ಸರ್ಕಾರ ಉರುಳಿಸುವ ಕೆಲಸ ನಮ್ಮದಲ್ಲ...
ಸಿ.ಟಿ ರವಿ
ಸಿ.ಟಿ ರವಿ
ಬೆಂಗಳೂರು:  ಹೊಟ್ಟೆಯೊಳಗೆ ವಿಷ ಇಟ್ಟುಕೊಂಡು ಅಧಿಕಾರ ನಡೆಸಿದರೆ ಹೀಗೆ ಆಗುತ್ತೆ. ಸರ್ಕಾರ ಉರುಳಿಸುವ ಕೆಲಸ ನಮ್ಮದಲ್ಲ. ನಾವು ಕೂಡ  ಸರ್ಕಾರ ಬೀಳಲಿ ಎಂದೇ ಅಂದುಕೊಂಡಿದ್ದೇವೆ. ಆದರೆ, ಅವರ ಶಾಸಕರು ಪಕ್ಷ ಬಿಟ್ಟು ಹೋದರೆ ನಮ್ಮನು ಏಕೆ ದೂರುವುದು ಎಂದು ಶಾಸಕ ಸಿ.ಟಿ ರವಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ ರವಿ,  ಸರ್ಕಾರ ರಚಿಸವು ಅವಕಾಶ ಒದಗಿ ಬಂದರೇ ಖಂಡಿತಾ ರಚಿಸುತ್ತೇವೆ,  ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ, ಕಾಂಗ್ರೆಸ್ ನ ಬಹಳಷ್ಟು ಶಾಸಕರು ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ, ಆಪರೇಷನ್ ಕಮಲ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
ಅಸಮಾಧಾನ ಹೊಂದಿರುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಿ, ನೀವು ಮಾಡಿದ್ರೆ ಅದು ರಾಜಕಾರಣ, ನಾವು ಮಾಡಿದ್ರೆ ಅದು ಮನೆ ಮುರುಕನನಾ ಎಂದು ರವಿ ಪ್ರಶ್ನಿಸಿದ್ದಾರೆ,  2005 ರಲ್ಲಿ  ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು,  ಜೆಡಿಎಸ್ ಬಿಟ್ಟು ಅವರದೇ ಬಳಗ ಕಟ್ಟಿಕೊ್ಂಡರು, ಆಗ ಅದು ಖರೀದಿ ಆಗಿರಲಿಲ್ಲವಾ? ಜಮೀರ್ ಅಹಮದ್,ಎಚ್. ಸಿ ಬಾಲಕೃಷ್ಣ, ಎನ್.ಚಲುವರಾಯ ಸ್ವಾಮಿ ಸೇರಿದಂತೆ  7 ಶಾಸಕರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡರು, ಅದು ಯಾವ ರಾಜಕಾರಣ  ಎಂದು ದೇವೇಗೌಡರು ಹೇಳಬೇಕು.  1999ರಲ್ಲಿ 6 ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಿದರು. ಅದು ಯಾವ ರಾಜಕಾರಣ ಎಂದು ಕಾಂಗ್ರೆಸ್ ನವರು ಹೇಳಬೆಕು ಎಂದು ರವಿ ವಾಗ್ದಾಳಿ ನಡೆಸಿದ್ದಾರೆ.
ನಾವು ಇಲ್ಲಿ ರಾಜಕಾರಣ ಮಾಡುತ್ತಿದ್ದೇವೆ,  ಪರಿಸ್ಥಿತಿಯ ಲಾಭ ಪಡೆದುಕೊಳ್ಳದೇ ಸುಮ್ಮನೆ ಕೈಕಟ್ಟಿ ಕೂರಲು ನಾವು  ಚಾರಿಟಿ ನಡೆಸುತ್ತಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com