ಬೆಂಗಳೂರು: ಮಾಜಿ ಸಿಎಂ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಇಂದು ಕರೆದಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ರದ್ದಾಗಿದೆ.
ನಿನ್ನೆ ರಾತ್ರಿ ಕರೆ ಮಾಡಿ ಇಂದು ಬೆಳಗ್ಗೆ ಸಭೆ ಇರುವುದಾಗಿ ಹೇಳಿದ್ದರು, ಆದರೆ ನಂತರ ಸಭೆ ನಡೆಸದಿರಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಶನಿವಾರ ಶಾಸಕಾಂಗ ಸಭೆ ನಡೆಸಿದ ಬಳಿಕ ರೆಸಾರ್ಟ್ ನಲ್ಲಿ ಹೊಸಪೇಟೆ ಹಾಗೂ ಕಂಪ್ಲಿ ಶಾಸಕರ ನಡುವೆ ಹೊಡೆದಾಟವಾದ ಹಿನ್ನೆಲೆ ಇಂದು ಸಿದ್ದರಾಮಯ್ಯ ಮತ್ತೊಮ್ಮೆಶಾಸಕಾಂಗ ಸಭೆ ಕರೆದಿದ್ದರು, ಜೊತೆಗೆ ಶಾಸಕರ ಹಾಜರಾತಿ ಕೂಡ ಕಡ್ಡಾಯ ಎಂದು ಹೇಳಲಾಗಿತ್ತು.
ಆದರೆ ಸಿದ್ದಗಂಗಾ ಶ್ರೀಗಳ ಆರೋಗ್ಯ ಗಂಭೀರವಾದ ಹಿನ್ನೆಲೆಯಲ್ಲಿ ಈಗಾಗಲೇ ಗೃಹ ಸಚಿವರು ಸೇರಿದಂತೆ ಹಲವರು ಮಠಕ್ಕೆ ಭೇಟಿ ಮಾಡಿದ್ದರು.
ಬಹುತೇಕ ಶಾಸಕರು ರೆಸಾರ್ಟ್ ನಲ್ಲಿದ್ದಾರೆ, ಉಳಿದಂತೆ ಇರುವ ಎಲ್ಲಾ ಶಾಸಕರು ಸರಿಯಾಗಿದ್ದಾರೆ, ಎಲ್ಲವೂ ಹತೋಟಿಯಲ್ಲಿದೆ, ಬಿಜೆಪಿಯಿಂದಾಗಿ ಕೆಲ ಗೊಂದಲಗಳು ಉಂಟಾಗಿದ್ದವು, ಆದರೆ ಈಗ ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾರೆ.
R Reddy, Congress in Bengaluru: Last night they called me that there's a meeting today but later they decided not to have any meeting. Most of the MLAs have left the resort. Few who are there will also go back Everything is okay. Because of BJP there was confusion, now it's okay. pic.twitter.com/Mccb1ExSJt