ಶಾಸಕರ ಹೊಡೆದಾಟ: ಬಿಜೆಪಿಯಿಂದ ಶಾಸಕರನ್ನು ರಕ್ಷಿಸಿಕೊಳ್ಳಲು ಹೋದ ಕಾಂಗ್ರೆಸ್ ತಾನೇ ಹಳ್ಳಕ್ಕೆ ಬಿದ್ದಿತೆ?

ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ವಾಮಮಾರ್ಗ ಅನುಸರಿಸುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ಕಳೆದ ಶುಕ್ರವಾರ ಸಿಎಲ್ ಪಿ ಸಭೆ ಕರೆಯುವವರೆಗೂ ಎಲ್ಲವೂ ಸರಿಯಾಗಿತ್ತು. ...
ಆನಂದ್ ಸಿಂಗ್ ಮತ್ತು ಜೆಎನ್ ಗಣೇಶ್
ಆನಂದ್ ಸಿಂಗ್ ಮತ್ತು ಜೆಎನ್ ಗಣೇಶ್
ಬೆಂಗಳೂರು: 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ  ಕರ್ನಾಟಕ ಕಾಂಗ್ರೆಸ್ ತನ್ನ ಚುನಾವಣಾ ತಂತ್ರಗಾರಿಕೆಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ, ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡುತ್ತಿದೆ.ತನ್ನ ಸಾಧನೆಗಳ ಲಾಭ ಪಡೆದು ಬೀಗುತ್ತಿದ್ದ ಕಾಂಗ್ರೆಸ್ ಇದ್ದಕಿದ್ದಂತೆ ನಡೆದ ಬೆಳವಣಿಗೆಗಳಿಂದ ಮರ್ಮಾಘಾತವಾದಂತಾಗಿದೆ.
ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ವಾಮಮಾರ್ಗ ಅನುಸರಿಸುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ಕಳೆದ ಶುಕ್ರವಾರ ಸಿಎಲ್ ಪಿ ಸಭೆ ಕರೆಯುವವರೆಗೂ ಎಲ್ಲವೂ ಸರಿಯಾಗಿತ್ತು.  ನಾಲ್ಕು ಶಾಸಕರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎಂಬ ಗುಮಾನಿಯಿಂದ ಕಾಂಗ್ರೆಸ್ ತನ್ನ ಪಕ್ಷದ ಶಾಸಕರು ಹಾಗೂ ಸಚಿವರನ್ನು ಬೆಂಗಳೂರು ಹೊರವಲಯದ ರೆಸಾರ್ಟ್ ಗೆ ಸಾಗಿ ಹಾಕಿತ್ತು, ಬಿಜೆಪಿಯಿಂದ ಶಾಸಕರನ್ನು ರಕ್ಷಿಸಲು ಹೋದ ಕಾಂಗ್ರೆಸ್ ತನ್ನ ಕಾಲ ಮೇಲೆ ತಾನೇ ಕಲ್ಲು ಚಪ್ಪಡಿ ಎಳೆದುಕೊಂಡಿದೆ.
ಬಿಜೆಪಿಯಿಂದ ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ಹೋದ ಕಾಂಗ್ರೆಸ್ ನ ಆಂತರಿಕ ಕಚ್ಚಾಟ ಬೆಳಕಿಗೆ ಬಂತು, ರೆಸಾರ್ಟ್ ನಲ್ಲಿ ನಡೆದ 'ಟೈಟ್ ಪೈಟ್'  ನಿಂದ ಹೊಸಪೇಟೆ ಶಾಸಕ ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂತು, ಇದರಿಂದ ಬೇಸತ್ತ ಕಾಂಗ್ರೆಸ್ ಶಾಸಕ ಜೆಎನ್ ಗಣೇಶ್ ಅವರನ್ನು ಅಮಾನತುಗೊಳಿಸಿದೆ, ಪೊಲೀಸರು ಗಣೇಶ್ ವಿರುದ್ಧ ಕೊಲೆಯ್ನ ಪ್ರಕರಣ ದಾಖಲಿಸಿದ್ದಾರೆ.
ಆಡಳಿತಾರೂಢ ಪಕ್ಷ ತನ್ನ ಶಾಸಕರನ್ನು ರೆಸಾರಡ್ ಗೆ ಕರೆದೊಯ್ಯುವ ಅವಶ್ಯಕತೆ ಇರಲಿಲ್ಲ, ಇದು ಕಾಂಗ್ರೆಸ್ ಮಾಡಿದ ಮೊದಲ ತಪ್ಪು, ಬೇರೆ ಉದ್ದೇಶಗಳಿಗಾಗಿ ನಾಯಕರು ಕೆಲಸ ಮಾಡುವಾಗ ಈ ರೀತಿ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ. ನಾಯಕರೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ ಪದೇ ಪದೇ ಕಾರ್ಯತಂತ್ರದ ತಪ್ಪುಗಳನ್ನು ಮಾಡುತ್ತಿದೆ, ಕಾಂಗ್ರೆಸ್ ನಲ್ಲಿ ಪ್ರಬಲ ನಾಯಕತ್ವ, ಜಾತಿ ವಿಷಯಗಳು, ರಚನಾತ್ಮಕ ಯೋಜನೆಗಳಲ್ಲಿ ಕಾಂಗ್ರೆಸ್ ಗಿಂತ ಜೆಡಿಎಸ್ ಮತ್ತು ಬಿಜೆಪಿ ಸಮರ್ಥವಾಗಿವೆ, ಎಲ್ಲಾ ಕಾರ್ಯತಂತ್ರದ ನಿರ್ಧಾರಗಳನ್ನು ಸಮರ್ಥವಾಗಿ ಜಾರಿಗೊಳಿಸಬಲ್ಲ ಏಕೈಕ ವ್ಯಕ್ತಿ ಕಾಂಗ್ರೆಸ್ ನಲ್ಲಿಲ್ಲ, ಕರ್ನಾಟಕ ಕಾಂಗ್ರೆಸ್ ಯಾರ ಹಿಡಿತದಲ್ಲಿದೆ, ನಿರ್ಧಾರ ಕೈಗೊಳ್ಳುವವರು ಯಾರು ಎಂಬುದು ಯಾರಿಗೂ ತಿಳಿದಿಲ್ಲ   ಎಂದು ರಾಜಕೀಯ ವಿಶ್ಲೇಷಕ ನಾರಾಯಣ್ ಹೇಳಿದ್ದಾರೆ,
ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್ ನಲ್ಲಿ ಸಮಸ್ಯೆ ಆರಂಭವಾಯಿತು, ರಮೇಶ್ ಜಾರಕಿಹೊಳಿ ಅಸಮಾಧಾನದಿಂದ ಉಂಟಾದ ಡ್ಯಾಮೇಜ್ ತಡೆಯಲು ಪಕ್ಷ ವಿಫಲವಾಯಿತು, 
ಹೀಗಾಗಿ ಕಾಂಗ್ರೆಸ್ ಶಾಸಕರು ಅನಿವಾರ್ಯವಾಗಿ ಬಿಜೆಪಿಗೆ ತೆರಳಲು ಸಿದ್ದತೆ ನಡೆಸಿದರು, ಆಗಬಹುದಾದ ಅಪಾಯ ತಪ್ಪಿಸಲು ಹಾಗೂ ಅಸಮಾಧನಗೊಂಡ ಶಾಸಕರ ಮನವೊಲಿಸುವ ವಿಷಯವಾಗಿ ಸಚಿವ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಹಲವು ಹಿರಿಯರು ತಮ್ಮ ಸಂಪುಟ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ತಿಳಿಸಿದರು, 
ಸಂಪುಟ ವಿಸ್ತರಣೆಯ ಉದ್ದೇಶ ಸ್ಪಷ್ಟವಾಗಿರಲಿಲ್ಲ, ಸಚಿವ ಸ್ಥಾನ ನೀಡುವುದೇ ಪ್ರಮುಖ ವಿಷಯವಾಗಿದ್ದರೇ , ಪಕ್ಷದ ನಿಷ್ಠಾವಂತ ಸಚಿವರನ್ನು ಹುದ್ದೆಯಿಂದ ಕೆಳಗಿಳಿಸಿ ಅಸಮಾಧಾನಿತರಿಗೆ ನೀಡಬೇಕಿತ್ತು, ಆದರೆ ಸದ್ಯಕ್ಕೆ ಕಾಂಗ್ರೆಸ್ನಲ್ಲಿ ನಡೆಯುತ್ತಿರುವು ಪವರ್ ಪಾಲಿಟಿಕ್ಸ್ ಎಂಬುದು ಸ್ಪಷ್ಟವಾಗಿದೆ, ಆದರೆ ಸದ್ಯದ ಬೆಳವಣಿಗೆಗಳಿಂದಾದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಹೇಳಲಾಗುತ್ತಿದೆ, ಆದರೆ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com