ಇಂತ ಕೀಳು ಮಟ್ಟದ ರಾಜಕಾರಣ ಎಂದು ನೋಡಿಲ್ಲ: ಕಾಂಗ್ರೆಸ್ ಶಾಸಕರ ಹೊಡೆದಾಟ ಕುರಿತು ಪರಮೇಶ್ವರ್

ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರ ಹೊಡೆದಾಟದ ಕುರಿತಂತೆ ಬೇಸರ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು 30 ವರ್ಷಗಳ ನನ್ನ ರಾಜಕೀಯ...
ಜಿ ಪರಮೇಶ್ವರ
ಜಿ ಪರಮೇಶ್ವರ
Updated on
ಬೆಂಗಳೂರು: ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರ ಹೊಡೆದಾಟದ ಕುರಿತಂತೆ ಬೇಸರ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು 30 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಇಂತಹ ಕೀಳುಮಟ್ಟದ ಘಟನೆ ನೋಡಿಲ್ಲ ಎಂದು ಹೇಳಿದ್ದಾರೆ.
ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಶಾಸಕರಾದ ಆನಂದ್ ಸಿಂಗ್, ಗಣೇಶ್ ಕಿತ್ತಾಟದ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯುವಕರಿಗೆ ರಾಜಕಾರಣಕ್ಕೆ ಬನ್ನಿ ಎಂದು ಹೇಳುವ ಹಿರಿಯ ರಾಜಕಾರಣಿಗಳಾದ ನಾವುಗಳು ಆದರ್ಶ ಪಾಲಿಸದೇ ಹೋದರೆ ಹೇಗೆ?. ಯುವಕರಿಗೆ ನಾವು ಏನು ಹೇಳಬೇಕು?" ಎಂದು ಪ್ರಶ್ನಿಸಿದರು.
ಗಣೇಶ್ ಯುವ ರಾಜಕಾರಣಿಯಾಗಿದ್ದುಕೊಂಡು ಹೀಗೆ ಮಾಡಿದ್ದಾರೆ. ಆನಂದ್ ಸಿಂಗ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಸೂಕ್ತ ಕ್ರಮಕೈಗೊಳ್ಳುತ್ತಾರೆ. ಪಕ್ಷದಿಂದ ಗಣೇಶ್ ಅವರನ್ನು ಅಮಾನತು ಮಾಡಿ, ಘಟನೆ ಬಗ್ಗೆ ತನಿಖೆ ಮಾಡಲು ತಮ್ಮ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com