ಲೋಕಸಭೆ ಹಣಾಹಣಿ: ಬೆಂಗಳೂರು ಸೆಂಟ್ರಲ್ ಟಿಕೆಟ್ ಗಾಗಿ ಕಾಂಗ್ರೆಸ್ ನಲ್ಲಿ ತೀವ್ರ ಪೈಪೋಟಿ

ಮುಂಬರುವ ಲೋಕಸಭೆ ಚುನಾವಣೆಗಾಗಿ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ನಲ್ಲಿ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು....
ರೋಷನ್ ಬೇಗ್
ರೋಷನ್ ಬೇಗ್
Updated on
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗಾಗಿ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ನಲ್ಲಿ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು ಟಿಕೆಟ್ ಪಡೆಯಲು ಇವರ ನಡುವೆಯೇ ತೀವ್ರ ಸ್ಪರ್ಧೆಇರಲಿದೆ ಎನ್ನಲಾಗಿದೆ.ಇನ್ನು ಕೈ ಪಕ್ಷ  ಈಗಾಗಲೇ ತನ್ನ ಶಾಸಕರಿಂದ ಅಭಿಪ್ರಾಯಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ,ಪಕ್ಷದ ನಾಯಕರ ಪ್ರಕಾರ, ರಿಜ್ವಾನ್ ಅರ್ಷದ್, ರೋಶನ್ ಬೇಗ್, ಎಚ್ ಟಿ ಸಾಂಗ್ಲಿಯಾನಾ, ಸಲೀಮ್ ಅಹ್ಮದ್, ಬಿ ಕೆ ಹರಿಪ್ರಸಾದ್ ಮತ್ತು ಜೆ. ಅಲೆಕ್ಸಾಂಡರ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
2014 ರಲ್ಲಿ 1.37 ಲಕ್ಷ ಮತಗಳ ಅಂತರದಿಂದ ಬಿಜೆಪಿ ಪಿ.ಪಿ.ಮೋಹನ್ ಎದುರು ಸೋಲನುಭವಿಸಿದ್ದ ಎಂಎಲ್ಸಿ ಅರ್ಷದ್ಪಕ್ಷವು ಒಪ್ಪಿಕೊಂಡಲ್ಲಿ ನಾನು ಸ್ಪರ್ಧಿಸಲಿದ್ದೇನೆ."ಎಂದಿದ್ದಾರೆ.
ಮಾಜಿ ನಗರ ಪೋಲಿಸ್ ಕಮಿಷನರ್ ಮತ್ತು ಮಾಜಿ ಸಂಸದ ಸಾಂಗ್ಲಿಯಾನಾಸಹ ಲೋಕಸಭಾ ಕಣಕ್ಕಿಳಿಯಲು ಕಾತುರರಾಗಿದ್ದಾರೆ. ಅವರು 2004ರಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ವಿಜೇತರಾಗಿದ್ದರು.ಆದರೆ ಅದಾದ ನಂತರ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.2008ರಲ್ಲಿ ಪಿಸಿ ಮೋಹನ್  ವಿರುದ್ಧ ಸುಮಾರು 35,000 ಮತಗಳಿಂದ ಸೋತರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ 15,800 ಮತಗಳಿಂದ ಜಯ ಸಾಧಿಸಿದ ರೋಷನ್ ಬೇಗ್ ಸಹ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.ಪಕ್ಷದ ಮೂಲಗಳ ಪ್ರಕಾರ, ಶುಕ್ರವಾರನಡೆದ  ಪಕ್ಷದ ಮುಖಂಡರ ಸಭೆಯಲ್ಲಿ ಅವರ ಹೆಸರನ್ನು ಸಹ ಚರ್ಚಿಸಲಾಗಿದೆ. ಏಳು ಬಾರಿ ಶಾಸಕರಾಗಿದ್ದು ಮಾಜಿ ಸಚಿವರೂ ಆಗಿದ್ದ ಬೇಗ್ ಜೆಡಿಎಸ್ ಬೆಂಬಲ ಸೂಚಿಸಿದ್ದರೆ ಬೆಂಗಳೂರಿನ ಸೆಂಟ್ರಲ್ ನಿಂದ ಜಯಗಳಿಸುವ ವಿಶ್ವಾಸ ಹೊಂದಿದ್ದಾರೆ.
ಎಐಸಿಸಿ ಕಛೇರಿಯಲ್ಲಿ ಪ್ರಮುಖರಾಗಿರುವ ಸಲೀಮ್ ಅಹ್ಮದ್ ಸಹ ಟಿಕೆಟ್ ಆಕಾಂಕ್ಷಿಗಳಾಗಿದ್ದು 2014ರಲ್ಲಿ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಿ ವಿಫಲರಾಗಿದ್ದರು. ಈಗ ಅವರು ಹಾವೇರಿ ಬಿಟ್ಟು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ಪಡೆಯಲು ಉತ್ಸುಕರಾಗಿದ್ದಾರೆ."ನಾನು ದಿವಂಗತ ಜಾಫರ್ ಷರೀಫ್ ಅವರ ಕಾರಣ ಹಾವೇಇ ತೊರೆದು ಇಲ್ಲಿಗೆ ಬಂದಿದ್ದೇನೆ. ಈ ಬಾರಿ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಇಚಿಸಿದ್ದೇನೆ."
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ಬಿಕೆ ಹರಿಪ್ರಸಾದ್ ಮಾಜಿ ಶಾಸಕ ಮತ್ತು ಮಂತ್ರಿ ಅಲೆಕ್ಸಾಂಡರ್ಸಹ ಲೋಕ ಕಣಕ್ಕೆ ಧುಮುಕಲು ಉತ್ಸುಕರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com