ನಮ್ಮವರ ಅಸೂಯೆಯೇ ನನಗೆ ಮುಳುವಾಯ್ತು: ಸಿದ್ದರಾಮಯ್ಯ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ನಮ್ಮ ಪಕ್ಷದವರ ಅಸೂಯೆಯೇ ಕಾರಣವಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ನಮ್ಮ ಪಕ್ಷದವರ  ಅಸೂಯೆಯೇ ಕಾರಣವಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 
ಭಾನುವಾರ ಬೆಂಗಳೂರಿನ ಕನಕ ಭವನ ಉದ್ಘಾಟನಾ  ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಾದಾಮಿಯಲ್ಲಿ ಅಲ್ಪ ಅಂತರದ ಗೆಲುವು ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಸೋಲಿಗೆ ಪಕ್ಷದಲ್ಲಿನ ಆಂತರಿಕ ಕ್ಷೋಭೆಯೇ ಎಂದಿದ್ದಾರೆ.
ಅವರು ತಮ್ಮದೇ ಪಕ್ಷದೊಳಗಿನ ತಮ್ಮ ವಿರೋಧಿಗಳಿಗೆ ಸೂಚ್ಯವಾಗಿ ಟಾಂಗ್ ನೀಡಿದ್ದರು. ಸಿದ್ದರಾಮಯ್ಯ ಅಪ್ತ ಬಿಡಿಎಅಧ್ಯಕ್ಷ ಎಸ್. ಟಿ. ಸೋಮಶೇಖರ್ಇತ್ತೀಚೆಗೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಟೀಕಿಸುತ್ತಾ "ನನಗೀಗಲೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ" ಎಂದಿದ್ದರು.ಅಲ್ಲದೆ ಸಚಿವ ಪುಟ್ಟರಂಗ ಶೆಟ್ಟಿ ವಿರುದ್ಧ ಕಿಡಿ ಕಾರಿದ್ದರು.
"ಅವರು ನನ್ನ ಮೇಲಿನ ಅಸೂಯೆಯಿಂದ ಸುಳ್ಳು ಪ್ರಚಾರ ನಡೆಸಿ ನನ್ನನ್ನು ಸೋಲಿಸಿದ್ದರು.ನಾನು ಯಾವಾಗಲೂ  ಸ್ವಯಂ ಗೌರವಿಸಿಕೊಳ್ಳುತ್ತೇನೆ. ನನ್ನನ್ನು ನಾನು ಎಂದಿಗೂ ಯಾರದೇ ಒತ್ತಡಕ್ಕೆ ತಲೆಬಾಗುವುದಕ್ಕೆ ಅವಕಾಶ ನಿಡುವುದಿಲ್ಲ" ಸಿದ್ದರಾಮಯ್ಯ ಹೇಳಿದ್ದಾರೆ.
ತನ್ನ ಸರ್ಕಾರವು ತೆಗೆದುಕೊಂಡ ದಲಿತ ಪರ ಮತ್ತು ಒಬಿಸಿ ಪರ ಉಪಕ್ರಮಗಳಎತ್ತಿ ತೋರಿಸಿದ ಮಾಜಿ ಮುಖ್ಯಮಂತ್ರಿ ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ವೇಳೆ ಎಲ್ಲಾ ಸಮುದಾಯಗಳಿಗೆ ಅವರು ಹೆಚ್ಚಿನ`ಕೊಡುಗೆಯನ್ನೇ ನೀಡಿದ್ದಾಗಿ ಹೇಳಿದರು.
ಕಳೆದ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿ ದೇವೇಗೌಡರ ವಿರುದ್ಧ ಪರಾಭವಗೊಂಡ ಸಿದ್ದರಾಮಯ್ಯ ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಅಲ್ಪ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ನಮ್ಮ ಪಕ್ಷದವರು ನನ್ನ ವಿರುದ್ಧವೇ ಪಿತೂರಿ ನಡೆಸಿದ್ದರು ಎಂದ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿನಲ್ಲಿ ತಮ್ಮ ಸೋಲನ್ನು ಖಾತ್ರಿಪಡಿಸಿದರು ಮತ್ತು ಬಾದಾಮಿಯನ್ನೂ ಸಹ  ಸೋಲಿಸಲು ಆ ಮೂಲಕ ನನ್ನನ್ನು ನಾಶಮಾಡಲು ಪ್ರಯತ್ನ ಸಾಗಿತ್ತು. ಎಂದು ಸಿದ್ದರಾಮಯ್ಯನವರ ಆಪ್ತರೊಬ್ಬರು ಹೇಳಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಮಂತ್ರಿ ಪುಟ್ಟರಂಗ ಶೆಟ್ಟಿ, ಅವರ ಸಿಬ್ಬಂದಿ ವಿಧಾನಸೌಧದಲ್ಲಿ ಸಿಕ್ಕ ಅಕ್ರಮ ಹಣದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದು "ಸರ್ಕಾರ ಯಾರದ್ದೆನ್ನುವುದು ಮುಖ್ಯವಲ್ಲ, ನಮಗಿಂದಿಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದಿದ್ದರು.ಇನ್ನೊಂದೆಡೆ ಬಿಡಿಎ ಅಧ್ಯಕ್ಷ ಸಿದ್ದರಾಮಯ್ಯ ನಿಷ್ಠಾವಂತ, ಎಸ್. ಟಿ. ಸೋಮಶೇಖರ್, ಸಮ್ಮಿಶ್ರ ಸರ್ಕಾರ ಬೆಂಗಳೂರನ್ನು ನಿರ್ಲಕ್ಷಿಸಿದೆ ಎಂದು ಟೀಕಿಸಿದ್ದಾರೆ.
"ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಬೆಂಗಳೂರಿನ ರಸ್ತೆಗಳು ಅಭಿವೃದ್ಧಿಯಾಗಲಿಲ್ಲ" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com