ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಯರೆಡ್ಡಿ, ಸಿದ್ದರಾಮಯ್ಯ ಅವರೇ ನಮ್ಮ ನಾಯಕರು. ದೇವೇಗೌಡರ ನಂತರ ಅತ್ಯುತ್ತಮ, ಜನಪರ ಸಿಎಂ ಆಗಿದ್ದವರು ಸಿದ್ದರಾಮಯ್ಯ. 37 ಸ್ಥಾನ ಗೆದ್ದರೂ ಮುಖ್ಯಮಂತ್ರಿ ಸ್ಥಾನ ನೀಡಿದ್ದವರು. ಇದು ನಮ್ಮ ಕಾಂಗ್ರೆಸ್ ನಾಯಕರ ದೊಡ್ಡತನ. ಇದನ್ನು ಅರ್ಥ ಮಾಡಿಕೊಂಡು ಕಾಂಗ್ರೆಸ್ ಗೆ ಗೌರವ ನೀಡುವ ಬದಲು ಸಿಎಂ ರಾಜೀನಾಮೆ ನೀಡುತ್ತೇನೆ ಎನ್ನುವುದು ಸರಿಯಲ್ಲ ಎಂದರು.