ಡಿ.ಕೆ ಶಿವಕುಮಾರ್
ರಾಜಕೀಯ
ಎಲ್ಲರೂ ಶಿವಕುಮಾರ್, ಸಿದ್ದರಾಮಯ್ಯ ಆಗೋಕಾಗುತ್ತಾ? ದಿನೇಶ್ ಗುಂಡೂರಾವ್ ಕಾಲೆಳೆದ ಡಿಕೆಶಿ!
ಎಲ್ಲರೂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಆಗೋಕೆ ಆಗುತ್ತಾ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ...
ಬೆಂಗಳೂರು: ಎಲ್ಲರೂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಆಗೋಕೆ ಆಗುತ್ತಾ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ಏನು ಆಗೋದಿಲ್ಲ, ಯಾವ ಅಪಾಯವೂ ಇಲ್ಲ ಎಂಬ ನಂಬಿಕೆಯಿಂದ ದಿನೇಶ್ ಗುಂಡೂರಾವ್ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.
ಎಲ್ಲರ ಆಟವೂ ನಂಗೆ ಗೊತ್ತಿದೆ, ನಾನೇನು ಕಣ್ಣು ಮುಚ್ಚಿಕೊಂಡು ರಾಜಕೀಯ ಮಾಡುತ್ತಿಲ್ಲ, ಸರ್ಕಾರ ಐದು ವರ್ಷ ಪೂರ್ಣಗೊಳ್ಳುತ್ತದೆ. ಎಲ್ಲರ ಬಂಡವಾಳ ನನಗೆ ತಿಳದಿದೆ, ಬಿಜೆಪಿಯವರು ನಾವು ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಯಾರ್ಯಾರ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬುದು ಗೊತ್ತು ಎಂದು ಹೇಳಿರುವ ಆನಂದ್ ಸಿಂಗ್ ಗಲೂ ನನ್ನ ಉತ್ತಮ ಗೆಳೆಯ ಎಂದು ತಿಳಿಸಿದ್ದಾರೆ.
ನಮ್ಮ ಎಲ್ಲಾ ಶಾಸಕರ ಜೊತೆ ನಾವು ಸಂಪರ್ಕದಲ್ಲಿದ್ದಾರೆ ಎಂದು, ಎಲ್ಲರನ್ನು ತಲುಪಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ