ಆನಂದ್ ಸಿಂಗ್
ರಾಜಕೀಯ
ಅಖಾಡಕ್ಕೆ ಟ್ರಬಲ್ ಶೂಟರ್ ಎಂಟ್ರಿ: ಆನಂದ್ ಸಿಂಗ್ ಮನವೊಲಿಸಲು ಡಿಕೆಶಿ ಸರ್ಕಸ್
ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಖ್ಯಾತಿಯಾಗಿರುವ ಜಲ ಸಂಪನ್ಮೂಲ ಸಚಿವ ಡಿ,ಕೆ ಶಿವಕುಮಾರ್ ಅತೃಪ್ತರ ಶಾಸಕರ ಮನವೊಲಿಸಲು ...
ಬೆಂಗಳೂರು/ಬಳ್ಳಾರಿ: ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಖ್ಯಾತಿಯಾಗಿರುವ ಜಲ ಸಂಪನ್ಮೂಲ ಸಚಿವ ಡಿ,ಕೆ ಶಿವಕುಮಾರ್ ಅತೃಪ್ತರ ಶಾಸಕರ ಮನವೊಲಿಸಲು ಮುಂದಾಗಿದ್ದಾರೆ. ಬುಧವಾರ ಶಾಸಕ ಆನಂದ್ ಸಿಂಗ್ ಅವರನ್ನು ಭೇಟಿ
ಮಾಡಿ ಮನವೊಲಿಸಲು ವಿಫಲರಾಗಿದ್ದಾರೆ.
ಈಗಲ್ ಟನ್ ರೆಸಾರ್ಟ್ ನಲ್ಲಿ ಕಂಪ್ಲಿ ಶಾಸಕ ಗಣೇಶ್ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದಾಗ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಕೂಡ ಅಲ್ಲಿಯೇ ಇದ್ದರು. ಇನ್ನೂ ಬಿಜೆಪಿಯಿಂದ ಆನಂದ್ ಸಿಂಗ್ ಅವರನ್ನು ಕರೆ ತರುವಲ್ಲಿ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. 2018ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದಾಗ ಆನಂದ್ ಸಿಂಗ್ ಬೆಂಬಲ ನೀಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.
ಆದರೆ ಯಾವುದೇ ಒಳ್ಳೇತನ ಇಲ್ಲಿ ಕೆಲಸ ಮಾಡುತ್ತಿಲ್ಲ, ಆನಂದ್ ಸಿಂಗ್ ಅವರ ರಾಜಿನಾಮೆ ಹೊಸಪೇಟೆ ಜನತೆಯಲ್ಲಿ ಆಘಾತ ಮೂಡಿಸಿದೆ, ಹೀಗಾಗಿ ಪಕ್ಷ ಬಿಡದಂತೆ ಹಲವು ಬೆಂಬಲಿಗರು ಪ್ರತಿಭಟನೆ ನಡೆಸಿದರು,
ಬಳ್ಳಾರಿ ಗ್ರಾಮಾಂತರ ಅಧ್ಯಕ್ಷ ಶಿವಯೋಗಿ ನೇತೃತ್ವದಲ್ಲಿ ಗುಂಪೊಂದು ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಆನಂದ್ ಸಿಂಗ್ ಅವರ ಮನವೊಲಿಸುವಂತೆ ಮನವಿ ಮಾಡಿದ್ದಾರೆ,. ಅದಾದ ನಂತರ ಶಿವಕುಮಾರ್ ಆನಂದ್ ಸಿಂಗ್ ಭೇಟಿ ಮಾಡಿ ಮನವೊಲಿಸಲು ವಿಫಲರಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ